ನೂರಾರು ಕಟಿಂಗ್ ಶಾಪ್​ಗಳು ಬಂದ್.. ಎಲ್ಲಿ?

ಬೆಂಗಳೂರು: ಕೊರೊನಾ ಭೀತಿಯಿಂದ ಸಲೂನ್ ಮಾಲೀಕರು 15 ದಿನ ಸ್ವಯಂ ಪ್ರೇರಿತ ನಿರ್ಬಂಧ ಹೇರಿಕೊಂಡಿದ್ದಾರೆ. ಸೋಂಕಿನಿಂದ ದೂರ ಉಳಿಯಲು, ಕೊರೊನಾ ವಿರುದ್ಧ ಹೋರಾಡಲು ದಿಟ್ಟ ನಿರ್ಧಾರ ಹಾಕಿಕೊಂಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ ವ್ಯಾಪ್ತಿಯಲ್ಲಿರುವ ಸಲೂನ್ ಮಾಲೀಕರು 15 ದಿನಗಳ ಕಾಲ ಸಲೂನ್‌ಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ. ಆ ವ್ಯಾಪ್ತಿಯ ಸುಮಾರು 500 ರಿಂದ 600 ಕಟಿಂಗ್ ಶಾಪ್​ಗಳು ಬಂದ್ ಆಗಲಿವೆ. ಲಾಕ್​ಡೌನ್ ಸಡಲಿಕೆ ವೇಳೆ ಸಲೂನ್ ಶಾಪ್ ತೆರೆಯಲು ಅನುಮತಿ ಕೊಡಿ ಅಂತ ಒತ್ತಡ ಹಾಕಿದ್ದರು. ಆದರೆ ಈಗ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹೆನ್ನೆಲೆಯಲ್ಲಿ ಬೆಚ್ಚಿಬಿದ್ದ ಸವಿತಾ ಸಮಾಜ ಸಲೂಪ್ ಶಾಪ್​ಗಳನ್ನು ಮುಚ್ಚಲಿದೆ.

ಕ್ಷೌರಿಕರ ಪರಿಹಾರ ಘೋಷಣೆ ತಡ
ಇನ್ನು ಹಾಸನದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಕ್ಷೌರಿಕರಿಗೆ ಪರಿಹಾರ ಘೋಷಣೆ ಮಾಡಿ ಕೊಡೋದು ತಡವಾಗಿದೆ ಎಂದರು. ಕ್ಷೌರಿಕರ ಸೂಕ್ತ ಮಾಹಿತಿ ಕಲೆ ಹಾಕಲು ಸಮಯ ಹಿಡಿದಿದೆ ಹೀಗಾಗಿ ತಡವಾಗಿದೆ. 16 ಲಕ್ಷ ಕಟ್ಟಡ ಕಾರ್ಮಿಕರಿಗೆ ಈಗಾಗಲೆ ಪರಿಹಾರ ಕೊಡಲಾಗಿದೆ. 1577 ಜನ ಕ್ಷೌರಿಕರು 2630 ಅಗಸರು ಹಾಸನ ಜಿಲ್ಲೆಯಲ್ಲಿ ನೊಂದಣಿ ಮಾಡಿಸಿಕೊಂಡಿದ್ದಾರೆ. ಹಾಗೂ 2.40 ಲಕ್ಷ ಕ್ಷೌರಿಕರು 70 ಅಗಸರು ರಾಜ್ಯದಲ್ಲಿ ನೋಂದಣಿ ಮಾಡಿದ್ದು ಎಲ್ಲರಿಗೂ ಪರಿಹಾರ ಸಿಗಲಿದೆ ಎಂದರು.

Related Tags:

Related Posts :

Category:

error: Content is protected !!