ಬಿಜೆಪಿಯಲ್ಲಿ ಬಂಡಾಯದ ಸೂಚನೆ, ರಾಮಲಿಂಗಾರೆಡ್ಡಿ ಸಂಪರ್ಕದಲ್ಲಿ ಕಾರ್ಪೋರೇಟರ್​ಗಳು

ಬೆಂಗಳೂರು: 10ಕ್ಕೂ ಹೆಚ್ಚು ಬಿಜೆಪಿ ಕಾರ್ಪೋರೇಟರ್​ಗಳು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.

ಅನರ್ಹರ ಕ್ಷೇತ್ರಗಳಲ್ಲಿರುವ 10ಕ್ಕೂ ಹೆಚ್ಚು ಕಾರ್ಪೋರೇಟರ್​ಗಳು, ಮಾಜಿ ಕಾರ್ಪೋರೇಟರ್​ಗಳು ರಾಮಲಿಂಗಾರೆಡ್ಡಿ ಅವರ ಜೊತೆ ಸಂಪರ್ಕದಲ್ಲಿದ್ದಾರೆ. ಕೆಲ ಮಾಜಿ ಕಾರ್ಪೋರೇಟರ್​ಗಳು ರಾಮಲಿಂಗಾರೆಡ್ಡಿ ಜತೆ ಚರ್ಚೆ ನಡೆಸಿದ್ದು,ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಚಿಂತನೆ ನಡೆಸಿದ್ದಾರೆ.

ತಮ್ಮ ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಟಿಕೆಟ್ ಪಡೆದುಕೊಂಡಿದ್ದಾರೆ. ಕ್ಷೇತ್ರಗಳಲ್ಲಿ ನಾಯಕತ್ವ ಬದಲಾವಣೆಯಾಗಿದೆ. ಈ ಹಿನ್ನೆಲೆ ಮುಂದಿನ ಚುನಾವಣೆಗಳಲ್ಲಿ ಟಿಕೆಟ್ ಸಿಗುವ ಬಗ್ಗೆ ಅನುಮಾನ ಉಂಟಾಗಿದೆ. ಹೀಗಾಗಿ ಕಾರ್ಪೋರೇಟರ್​ಗಳು ರಾಮಲಿಂಗಾರೆಡ್ಡಿ ಜೊತೆ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಾಮಲಿಂಗಾರೆಡ್ಡಿ. ರಾಜಕೀಯ ಅಸ್ತಿತ್ವದ ಪ್ರಶ್ನೆ ಬಂದಾಗ ಇದೆಲ್ಲಾ ಸಹಜ, ಸಮಯ ಬಂದಾಗ ಎಲ್ಲ ವಿಷಯ ಹೇಳ್ತೇನೆ ಎಂದಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more