ತನಗಿರೋ ಕಾಯಿಲೆ ಮಕ್ಕಳಿಗೂ ಬರುತ್ತೆ ಎಂದು ಮನೆ ತೊರೆದ ತಾಯಿ!

ಹಾಸನ: ತನ್ನ ಕಾಯಿಲೆ ಮಕ್ಕಳಿಗೆ ಬರುತ್ತೆ ಎಂದು ತಾಯಿ ಮನೆಬಿಟ್ಟು ಹೋಗಿರುವ ಘಟನೆ ಅರಕಲಗೂಡು ತಾಲೂಕಿನ ದಾಸನಪುರದಲ್ಲಿ ನಡೆದಿದೆ. ಅನುಶ್ರೀ(30) ನಾಪತ್ತೆಯಾದ ಮಹಿಳೆ. ಇವರಿಗೆ ಚರ್ಮರೋಗದಿಂದ ಬಳಲುತ್ತಿದ್ದರು. ಆ ಸಮಸ್ಯೆಯಿಂದ ಬಹಳಷ್ಟು ನೋವನ್ನು ಅನುಭವಿಸಿದ್ದರು.

ನಾನು ನನ್ನ ಮಕ್ಕಳ ಜೊತೆ ಇದ್ದರೆ ಈ ರೋಗ ಅವರಿಗೂ ತಗುಲುತ್ತದೆ. ನಾನು ಅನುಭವಿಸುತ್ತಿರುವ ನೋವನ್ನು ಅವರು ಅನುಭವಿಸಬಾರದು ಎಂದು ಆತಂಕಕ್ಕೆ ಒಳಗಾಗಿ ಯಾರಿಗೂ ತಿಳಿಸದೆ ರಾತ್ರೋ ರಾತ್ರಿ ಮನೆ ಬಿಟ್ಟಿದ್ದಾರೆ. 4 ತಿಂಗಳ ಹಿಂದೆ ಅಂದ್ರೆ 2019ರ ಅಕ್ಟೋಬರ್ 17ರಂದು ರಾತ್ರಿ ಯಾರಿಗೂ ಕೇಳದೆ ಮನೆ ಬಿಟ್ಟು ಹೋಗಿದ್ದಾರೆ.

ಇಬ್ಬರು ಮಕ್ಕಳೊಂದಿಗೆ ಅನುಶ್ರೀ ಪತಿ ಅಂತೋಣಿ ಬೀದಿ ಬೀದಿ ಅಲೆದಾಟುತ್ತಿದ್ದಾರೆ. ಹಾಸನ, ಶಿವಮೊಗ್ಗ, ದಾವಣಗೆರೆ ಸೇರಿ ವಿವಿದೆಡೆ ಮಡದಿಗಾಗಿ ಶೋಧ ನಡೆಸುತ್ತಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!