ಗದ್ದೆಯಲ್ಲಿ ನವಜಾತ ಗಂಡು ಶಿಶು ಪತ್ತೆ, ತಾಯಿ ಮೇಲೆ ಗ್ರಾಮಸ್ಥರ ಆಕ್ರೋಶ

ರಾಯಚೂರು: ನವಜಾತ ಗಂಡು ಶಿಶುವನ್ನು ಗದ್ದೆಯಲ್ಲಿ ಬಿಸಾಡಿರುವ ಅಮಾನವೀಯ ಘಟನೆ ಮಸ್ಕಿ ತಾಲೂಕಿನ ಹರ್ವಾಪುರ ಗ್ರಾಮದ ಬಳಿ ರಾತ್ರಿ ನಡೆದಿದೆ.

ತಾಯಿ ತನ್ನ ನವಜಾತ ಗಂಡು ಶಿಶುವನ್ನ ಗದ್ದೆಯಲ್ಲಿ ಬಿಸಾಕಿ‌ ಹೋಗಿದ್ದಾಳೆ. ಗದ್ದೆಯಲ್ಲಿ ಮಗು ಅಳುವ ಶಬ್ದ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ನವಜಾತ ಶಿಶುವನ್ನ ರಕ್ಷಿಸಿ ಮಸ್ಕಿ ತಾಲೂಕು ಆಸ್ಪತ್ರಗೆ ದಾಖಲಿಸಿದ್ದಾರೆ. ನವಜಾತ ಶಿಶು ಬಿಟ್ಟು ಹೋದ ದುರುಳ ತಾಯಿಯನ್ನ ಪತ್ತೆ ಹಚ್ಚವಂತೆ ಗ್ರಾಮಸ್ಥರು ಒತ್ತಾಯಿಸಿದ್ದು, ತಾಯಿಯ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Tags:

Related Posts :

Category: