ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್​ನೋಟ್ ಬರೆದ ನಿರ್ಮಾಪಕ ನೇಣಿಗೆ ಶರಣು

ಉಡುಪಿ: ಸಿನಿಮಾ ನಿರ್ಮಾಣಕ್ಕೆ ಹೂಡಿದ್ದ ಹಣ ವಾಪಸ್​ ಬಾರದ ಹಿನ್ನೆಲೆಯಲ್ಲಿ ನಿರ್ಮಾಪಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದಲ್ಲಿ ನಡೆದಿದೆ. ನಿರ್ಮಾಪಕ ನಾಗೇಶ್ ಕುಮಾರ್(64) ನೇಣಿಗೆ ಶರಣಾದ‌ ದುರ್ದೈವಿ.

ನಾಗೇಶ್ ಚಲನಚಿತ್ರವೊಂದರ ನಿರ್ಮಾಣಕ್ಕೆ 28 ಲಕ್ಷ ರೂಪಾಯಿ ಮೊತ್ತವನ್ನು ಹೂಡಿದ್ದರು ಎಂದು ತಿಳಿದುಬಂದಿದೆ. ಭೂಮಿಕಾ ಪ್ರೊಡಕ್ಷನ್ ಹೆಸರಿನ ಭರತ್ ನಾವುಂದ ನಿರ್ದೇಶನದ ಸಿನಿಮಾಗೆ ನಾಗೇಶ್​ ಹಣ ಹೂಡಿಕೆ ಮಾಡಿದ್ದರು. ಆದರೆ, ಹಣ ವಾಪಸ್ ಬಾರದ ಹಿನ್ನೆಲೆಯಲ್ಲಿ ಬೀಜಾಡಿ ಗ್ರಾಮದ ಅಂಗಡಿ ಒಂದರ ಹೊರಗಡೆ ನೇಣಿಗೆ ಶರಣಾಗಿದ್ದಾರೆ.

‘ನನ್ನ ಸಾವಿಗೆ ಯಾರೂ ಕಾರಣರಲ್ಲ’
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ನಾಗೇಶ್ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ. ಜೊತೆಗೆ, ನನ್ನನ್ನ ಕ್ಷಮಿಸಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಹ ಉಲ್ಲೇಖಿಸಿದ್ದಾರೆ.

Related Tags:

Related Posts :

Category:

error: Content is protected !!