ಕಿಲ್ಲರ್ ಕೊರೊನಾ ಎಫೆಕ್ಟ್‌: ಭಾರತೀಯ ಚಿತ್ರೋದ್ಯಮಕ್ಕೆ ಕೋಟಿ ಕೋಟಿ ನಷ್ಟ!

ವಾರ ಪೂರ್ತಿ ಕೆಲಸ ಮಾಡಿ ವಿಕೇಂಡ್‌ನಲ್ಲಿ ಸಿನಿಮಾ ನೋಡ್ತಾ.. ಆ ಸಿನಿಮಾ ಹಾಗ್ ಇತ್ತು, ಈ ಸಿನಿಮಾ ಸೂಪರ್ ಇತ್ತು ಅನ್ನೋರ ಖುಷಿಗೆ ಕೊರೊನಾ ಬ್ರೇಕ್ ಹಾಕಿದೆ. ಕಲರ್‌ಫುಲ್ ಸಿನಿಮಾ ನೋಡ್ತಾ ಲೈಫ್ ಸೂಪರ್ ಗುರು ಅಂತಿದ್ದವರಿಗೆ ಮಹಾಮಾರಿ ಭಯ ಕಾಡುತ್ತಿದೆ. ಹೆಮ್ಮಾರಿ ಕೈಗೆ ಸಿಕ್ಕಿ ಭಾರತೀಯ ಚಿತ್ರರಂಗ ನಲುಗಿ ಹೋಗಿದೆ.

ಭಾರತೀಯ ಸಿನಿಮಾ ರಂಗಕ್ಕೆ ಬಿಗ್‌ಲಾಸ್‌..!
ಇಡೀ ವಿಶ್ವವನ್ನೇ ಗಡಗಡ ನಡುಗಿಸಿರುವ ಕೊರೊನಾಕ್ಕೆ ಭಾರತೀಯ ಚಿತ್ರರಂಗ ಉಡೀಸ್ ಆಗಿದೆ. ಅದರಲ್ಲೂ ಹೆಮ್ಮಾರಿಯ ಅಟ್ಟಹಾಸಕ್ಕೆ ಕನ್ನಡ ಚಿತ್ರರಂಗ ನಲುಗಿ ಹೋಗಿದೆ. ಬಿಂದಾಸ್ ಆಗಿದ್ದ ಸಿನಿಮಾ ಇಂಡಸ್ಟ್ರಿಗಳಿಗೆ ಕೊರೊನಾದಿಂದ ಹುಚ್ಚು ಹಿಡಿದಂತಾಗಿದೆ.

ಹೌದು, ಕೊರೊನಾದಿಂದ ಈಗಾಗಲೇ ರಿಲೀಸ್ ಆಗಿ ಥಿಯೇಟರ್ ನಲ್ಲಿ ಪ್ರದರ್ಶನ ಕಾಣ್ತಿರೋ ಸಿನಿಮಾಗಳಿಗೆ ಪ್ರೇಕ್ಷಕರ ಕೊರೆತೆ ಎದ್ದು ಕಾಣುತ್ತಿದೆ. ಇನ್ನೊಂದ್ಕಡ ರಿಲೀಸ್ ಮಾಡೋಕೆ ಕಾದು ಕುಳಿತಿದ್ದ ಸಿನಿಮಾಗಳ ನಿರ್ಮಾಪಕರು ಮುಂದೆ ನಮ್ಮ ಪರಿಸ್ಥಿತಿ ಏನ್ ಅಂತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಕೊರೊನಾದಿಂದ ಚಿತ್ರೋದ್ಯಮಕ್ಕೆ ಕೋಟಿ ಕೋಟಿ ನಷ್ಟ..!
ಅದರಲ್ಲೂ ಈಗ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಕನ್ನಡ ಸಿನಿರಂಗದ ಮೇಲೆ ಸಾಕಷ್ಟು ಹೊಡೆತ ಬಿದ್ದಿದೆ. ಇಂದಿನಿಂದ ಥಿಯೇಟರ್ ಗಳು, ಮಲ್ಟಿಪ್ಲೆಕ್ಸ್‌ಗಳು ಬಂದ್ ಮಾಡಬೇಕು ಅನ್ನೋ ಆದೇಶ ಈಗಾಗಲೇ ರಿಲೀಸ್ ಆಗಿರುವ ಕನ್ನಡ ಸಿನಿಮಾಗಳಿಗೆ ಸಾಕಷ್ಟು ನಷ್ಟ ಉಂಟು ಮಾಡಲಿದೆ. ಅದರಲ್ಲೂ ದ್ರೋಣ, ಶಿವಾರ್ಜುನ ಸೇರಿದಂತೆ ಈಗಾಗಲೇ ರಿಲೀಸ್ ಆಗಿರೋ ಎಲ್ಲಾ ಸಿನಿಮಾಗಳಿಗೂ ಕೊರೊನಾ ಎಫೆಕ್ಟ್ ಆಗಿದೆ. ಪ್ರೇಕ್ಷಕರು ಇಲ್ಲದೆ ಕಲೆಕ್ಷನ್ ಇಲ್ಲದೆ ಈ ಸಿನಿಮಾಗಳು ಸಾಕಷ್ಟು ನಷ್ಟು ಅನುಭವಿಸುತ್ತಿವೆ. ಕೊರೊನಾದಿಂದ ಸ್ಯಾಂಡಲ್‌ವುಡ್‌ಗೆ ಕೋಟಿ ಕೋಟಿ ನಷ್ಟ ಆಗಲಿದೆ.

ಸ್ಟಾರ್ ನಟರ ಸಂಭ್ರಮಕ್ಕೆ ಬ್ರೇಕ್ ಹಾಕಿದ ಹೆಮ್ಮಾರಿ..!
ಇನ್ನು ಕನ್ನಡ ಸ್ಟಾರ್ ನಟರ ಸಂಭ್ರಮಕ್ಕೆ ಕೊರೊನಾ ಬ್ರೇಕ್ ಹಾಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಪುನೀತ್ ರಾಜ್‌ಕುಮಾರ್‌ ಸಂಭ್ರಮವನ್ನ ಕೊರೊನಾ ಕಿತ್ಕೊಂಡಿದೆ. ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಅದ್ಧೂರಿ ಆಡಿಯೋ ರಿಲೀಸ್ ಕಾರ್ಯಕ್ರಮವನ್ನ ಇದೇ ತಿಂಗಳ 21ಕ್ಕೆ ಕಲಬುರಗಿಯಲ್ಲಿ ಆಯೋಜನೆ ಮಾಡಲಾಗಿತ್ತು. ಆದ್ರೆ ದೇಶದಲ್ಲಿ ಕೊರೊನಾಗೆ ಮೊದಲ ಬಲಿ ಕಲಬುರಗಿಯಲ್ಲಿಯೇ ಆಗಿದ್ರಿಂದ ಮುಂದೂಡಲಾಗಿದೆ. ಅಷ್ಚೇ ಅಲ್ಲ, ಮಾರ್ಚ್ 21 ರಂದು ಆಚರಣೆ ಮಾಡಬೇಕಿದ್ದ ಪವರ್ ಸ್ಟಾರ್ ಪುನೀತ್ ಹುಟ್ಟು ಹಬ್ಬಕ್ಕೂ ಕೊರೊನಾ ಬ್ರೇಕ್ ಹಾಕಿದೆ.

ಥಿಯೇಟರ್​ಗಳು ಬಂದ್.. ಬಾಲಿವುಡ್‌ ಭವಿಷ್ಯವೇನು?
ಇನ್ನು ಬಾಲಿವುಡ್‌ನಲ್ಲೂ ಸಹ ಕೊರೊನಾ ಭಯ ಹುಟ್ಟಿಸಿದೆ. ಕೊರೊನಾ ಭಯದಲ್ಲೇ ನಿನ್ನೆ ಅಂಗ್ರೇಜಿ ಮೀಡಿಯಂ ಸಿನಿಮಾ ರಿಲೀಸ್ ಆಗಿದೆ. ಆದ್ರೆ 4 ರಾಜ್ಯಗಳು ಚಿತ್ರಮಂದಿರವನ್ನ ಬಂದ್ ಮಾಡಿದ್ರಿಂದ ಅದರ ಎಫೆಕ್ಟ್ ಈ ಸಿನಿಮಾದ ಮೇಲೆ ಆಗಿದೆ. ಅದ್ರಲ್ಲೂ ಬಾಲಿವುಡ್ ಬಾಕ್ಸಾಫೀಸ್​ಗೆ ಖಜಾನೆಯಂತಿದ್ದ ದೆಹಲಿಯ ಚಿತ್ರಮಂದಿರಗಳು ಮುಚ್ಚಿರೋದ್ರಿಂದ ಅಂಗ್ರೇಜಿ ಮೀಡಿಯಂ ನಷ್ಟದ ಭೀತಿಯಲ್ಲಿದೆ. ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಕೇರಳ ಹಾಗೂ ದೆಹಲಿಯಲ್ಲಿ ಚಿತ್ರಮಂದಿರಗಳು ಬಂದ್ ಆಗಿದ್ರಿಂದ, ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಅನ್ನ ಪೋಸ್ಟ್​ಪೋನ್‌ ಮಾಡ್ಲಾಗಿದೆ.

ಒಟ್ನಲ್ಲಿ ಕೊರೊನಾ ಕಾಟದಿಂದ ಇಡೀ ಭಾರತೀಯ ಚಿತ್ರರಂಗ ತುಂಬಲಾರದ ನಷ್ಟ ಅನುಭವಿಸುತ್ತಿದೆ. ಈಗಾಗ್ಲೇ ಬಿಡುಗಡೆಯಾಗಿರೋ ಸಿನಿಮಾಗಳು ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ರೆ, ಬಿಡುಗಡೆಗೆ ಸಜ್ಜಾಗಿರೋ ಸಿನಿಮಾಗಳು ಅತಂತ್ರದಲ್ಲಿವೆ. ಒಟ್ಟಾರೆ ಬಹು ದೊಡ್ಡ ಉದ್ಯಮವಾದ ಚಿತ್ರೋದ್ಯಮ ಕೂಡ ಕೊರೊನಾದಿಂದ ಕಂಗಾಲಾಗಿದ್ದು ಮಾತ್ರ ಸುಳ್ಳಲ್ಲ.

Related Posts :

Category:

error: Content is protected !!

This website uses cookies to ensure you get the best experience on our website. Learn more