ಅಂಬಿ ಸ್ಮರಣೆ ದಿನವೂ ಸಂಸದೆ ಸುಮಲತಾಗೆ ಪ್ರತಾಪ್‌ ಸಿಂಹ ಪರೋಕ್ಷ ಟಾಂಗ್.. ಏನದು?

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಂಬರೀಷ್​ರ ಫೋಟೋ ಹಾಕಿರುವ ಸಂಸದ ಪ್ರತಾಪ್​, ಅಂಬಿ ಸ್ಮರಣೆಯಲ್ಲೂ ನಟನ ಪತ್ನಿ ಸುಮಲತಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.

  • KUSHAL V
  • Published On - 13:22 PM, 24 Nov 2020
ಪ್ರತಾಪ್​ ಸಿಂಹ (ಎಡ); ಸುಮಲತಾ (ಬಲ)

ಮೈಸೂರು: ರೆಬೆಲ್ ಸ್ಟಾರ್ ಅಂಬರೀಷ್​ರ 2ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ನಟನ ಜೊತೆಗಿದ್ದ ಫೋಟೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿರುವ ಸಂಸದ ಅಂಬಿ ಸ್ಮರಣೆಯಲ್ಲೂ ನಟನ ಪತ್ನಿ ಸುಮಲತಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಎಲ್ಲರಿಂದಲೂ ಪ್ರೀತಿಸಲ್ಪಡುವುದಕ್ಕೂ, ಎಲ್ಲರೂ ಭಯಪಡುವುದಕ್ಕೂ ಬಹಳ ವ್ಯತ್ಯಾಸವಿದೆ. ಎಲ್ಲರ ಪ್ರೀತಿ, ಅಭಿಮಾನ ಗಳಿಸುವಂಥದ್ದಾಗಿತ್ತು ಅಂಬರೀಷಣ್ಣನ ವ್ಯಕ್ತಿತ್ವ. ಸಾಮಾನ್ಯವಾಗಿ ಎಲ್ಲರಿಗೂ ಒಬ್ಬರೋ ಇಬ್ಬರೋ ಆಪ್ತರಿರುತ್ತಾರೆ. ಆದ್ರೆ ಅಂಬರೀಷ್​ ಅಣ್ಣನಿಗೆ ನೂರಾರು ಆಪ್ತರಿದ್ದರೆಂದು ಸಂಸದ ಪ್ರತಾಪ್​ ಸಿಂಹ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಸಂಸದೆ ಸುಮಲತಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಸುಮಲತಾ ಏನೂ ಕೆಲ್ಸ ಮಾಡ್ತಿಲ್ಲ, ಮಂಡ್ಯದ ಏನೇ ಕೆಲಸ ಇದ್ರೂ ನನಗೆ ಹೇಳಿ -ಮೈಸೂರು ಸಂಸದ ಪ್ರತಾಪ್
ಪ್ರತಾಪ್‌ ಸಿಂಹ ಪೇಟೆ ರೌಡಿ; ಅಂಥವರಿಗೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ: ಸಂಸದೆ ಸುಮಲತಾ ಕಿಡಿಕಿಡಿ