ಕಾನ್ಹಾ ಪ್ರದೇಶದಲ್ಲಿ ಧೋನಿ ಸಫಾರಿ: ಬ್ಯಾಟ್ ಬಿಟ್ಟು ಕ್ಯಾಮರಾ ಹಿಡಿದಾಗ ಸೆರೆಯಾಗಿದ್ದೇನು?

ಧೋನಿ.. ಧೋನಿ.. ಧೋನಿ ಅನ್ನೋ ಘೋಷವಾಕ್ಯ ಮತ್ತೊಮ್ಮೆ ಮೊಳಗೋ ದಿನ ದೂರ ಇಲ್ವೇ ಇಲ್ಲ. ಮೈದಾನದಲ್ಲಿ ಹೆಲಿಕಾಪ್ಟರ್​ಗಳ ಸುರಿಮಳೆ ಸುರಿಯೋ ಸುಮಧುರ ಸಮಯ ಸಹ ನಮ್ಮ ಹತ್ತಿರದಲ್ಲೇ ಇದೆ. ಮೈದಾನದಲ್ಲಿ ಚೆನ್ನೈ ತಂಡದ ತಲೈವಾ ರಣರೋಚಕ ಆಟ ಆಡೋ ಕ್ಷಣಕ್ಕೆ ಕೌಂಟ್​ಡೌನ್ ಶುರುವಾಗಿದೆ.

ಅಸಲಿ ಹುಲಿ ಫೋಟೋ ಪೋಸ್ಟ್‌ ಮಾಡಿದ ಕ್ರಿಕೆಟ್‌ ಹುಲಿ!
ಮಧ್ಯಪ್ರದೇಶದ ಕಾನ್ಹಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಇತ್ತೀಚೆಗೆ ಕ್ರಿಕೆಟ್ ಹುಲಿ ಮಹೇಂದ್ರ ಸಿಂಗ್ ಧೋನಿ ಭೇಟಿ ನೀಡಿದ್ರು. ಈ ವೇಳೆ ಭಾರತೀಯ ಕ್ರಿಕೆಟ್​ನ ಹೆಬ್ಬುಲಿ ಮಹೇಂದ್ರ ಸಿಂಗ್ ಧೋನಿ ರಿಯಲ್ ಟೈಗರ್ ಫೋಟೋ ಕ್ಲಿಕ್ಕಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜೀಪ್​ನಲ್ಲಿ ಧೋನಿ ಅರಣ್ಯ ಪ್ರದೇಶಕ್ಕೆ ರಾಯಲ್ ಆಗಿ ರೆಡಿಯಾಗಿ ಎಂಟ್ರಿಕೊಟ್ಟಿದ್ದಾರೆ. ಧೋನಿ ಜೊತೆಗೆ ಮತ್ತೊಂದು ಜೀಪ್​ನಲ್ಲಿ ಅವರ ಕುಟುಂಬದ ಸದ್ಯಸರು ಎಂಟ್ರಿಕೊಟ್ಟಿದ್ದಾರೆ.

ಕಾನ್ಹಾ ಪ್ರದೇಶದಲ್ಲಿ ಮಹೇಂದ್ರನ ಸಫಾರಿ ಹೇಗಿತ್ತು ಗೊತ್ತಾ?
ಕಾನ್ಹಾ ಪ್ರದೇಶದಲ್ಲೆಲ್ಲಾ ಸುತ್ತಾಡಿದ ಎಂ.ಎಸ್.ಧೋನಿ, ತಮ್ಮ ಕ್ಯಾಮರಾ ಮೂಲಕ ಜಿಂಕೆ, ತೋಳ, ನರಿ ಹೀಗೆ ಹಲವು ಪ್ರಾಣಿಗಳನ್ನ ಸೆರೆಹಿಡಿದಿದ್ರು.

ಹೀಗೆ ಕಾಡಿನಲ್ಲೆಲ್ಲಾ ಸುತ್ತಾಡ್ತಿದ್ದ ಧೋನಿಗೆ ಅರಣ್ಯ ಮಧ್ಯೆ, ಒಂದು ಹುಲಿ ಪ್ರತ್ಯಕ್ಷವಾಗಿತ್ತು. ತಮ್ಮ ಕಣ್ಣಿಗೆ ಬಿದ್ದ ಹುಲಿಯನ್ನ ಕ್ಯಾಮರಾ ಮೂಲಕ ಧೋನಿ ಸೆರೆಹಿಡೀದಿದ್ದಾರೆ. ಹುಲಿಯನ್ನ ನೋಡಿ ಕ್ರಿಕೆಟ್ ಹುಲಿ ಧೋನಿ ಆಗೇ ಕ್ಯಾಮರಾ ಮೂಲಕ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಹುಲಿ ಧೋನಿ, ತಮ್ಮೊಳಗಿನ ಛಾಯಗ್ರಾಹಕನಿಗೆ ಕೆಲಸ ನೀಡಿದ್ದಾರೆ.

ಅಂದ್ಹಾಗೆ ಹೀಗೆ ಕಾಡಿನಲ್ಲೆಲ್ಲಾ ರೌಂಡ್ಸ್ ಹೊಡೆದು ಧೋನಿ ಸಾಕಷ್ಟು ಫೋಟೋವನ್ನ ಕ್ಲಿಕ್ಕಿಸಿದ್ದಾರೆ. ಆದ್ರೆ ತಮ್ಮ ಟ್ವಿಟರ್​ನಲ್ಲಿ ಧೋನಿ ಪೋಸ್ಟ್ ಮಾಡಿರೋದು ಒಂದೇ ಫೋಟೋ. ಅದೇ ಈ ಕುಂತಲ್ಲೇ ಬಲು ಚುರುಕಿನಿಂದ ದೃಷ್ಟಿ ಹಾಯಿಸಿರುವ ಹುಲಿ ಫೋಟೋವನ್ನ.

ಹೀಗೆ ಹುಲಿ ಫೋಟೋ ಫೋಸ್ಟ್ ಮಾಡಿರುವ ಧೋನಿ, ಹುಲಿಯೊಂದನ್ನ ಕಣ್ಣೆದುರು ಕಂಡಾಗ, ಅದ್ರ ಫೋಟೋ ತೆಗೆಯೋವರೆಗೂ ನಿಮಗೆ ಸಮಯ ನೀಡಿದಾಗ ಅಂತ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಹುಲಿ ಕಣ್ಣೆದುರು ಕಂಡಾಗ:
” ಹುಲಿಯೊಂದನ್ನ ಕಣ್ಣೆದುರು ಕಂಡಾಗ.. ಅದು ಕೇವಲ ಫೋಟೋ ತೆಗೆದುಕೊಳ್ಳುವವರೆಗೂ ನಿಮಗೆ ಸಮಯ ನೀಡಿದಾಗ..”
– ಎಂ.ಎಸ್.ಧೋನಿ, ಟೀಮ್ ಇಂಡಿಯಾ ಕ್ರಿಕೆಟಿಗ

ಹೀಗೆ ಧೋನಿ ಮಾತ್ರ ಹುಲಿ ಫೋಟೋ ಪೋಸ್ಟ್ ಮಾಡಿರೋದಲ್ಲಾ. ಧೋನಿ ಪತ್ನಿ ಸಾಕ್ಷಿ ಧೋನಿ ಸಹ ಪತಿ ಧೋನಿ ಕ್ಲಿಕ್ಲಿಸಿದ ಇದೇ ಹುಲಿಯ ಪೂರ್ತಿ ಫೋಟೋವನ್ನ ತಮ್ಮ ಟ್ವಿಟರ್​ನಲ್ಲಿ ಹಾಕಿದ್ದಾರೆ.

ಇನ್ನು ಧೋನಿ ಕ್ಲಿಕ್ಕಿಸಿರುವ ಇದೇ ಹುಲಿ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೈಗರ್ ಲೆಜೆಂಡ್​ಗೆ ಸೆಲ್ಯೂಟ್ ಮಾಡ್ತಿದೆ. ನಮ್ಮ ಸಿಂಹ ಹುಲಿಯನ್ನ ಭೇಟಿ ಮಾಡಿದೆ. ಹುಲಿಯೊಂದು ಮತ್ತೊಂದು ಹುಲಿಯನ್ನ ಸೆರೆಹಿಡಿದಿದೆ ಅಂತೆಲ್ಲಾ ಟ್ವೀಟ್ ಮಾಡ್ತಿದ್ದಾರೆ. ಇದ್ರ ಜೊತೆಗೆ ಇನ್ನು ಕೆಲವರು ಇದು ಧೋನಿ ಕಮ್​ಬ್ಯಾಕ್ ಮಾಡಿ ಅಂತಿದ್ರೆ, ಇನ್ನು ಕೆಲವರು ಇದು ಕಮ್​ಬ್ಯಾಕ್ ಮಾಡೋ ಸೂಚನೆ ಅಂತಲೂ ಹೇಳ್ತಿದ್ದಾರೆ.

ಅತ್ತ ವಿಶ್ವಕಪ್ ಆದ್ಮೇಲಿಂದ ಧೋನಿ ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡಿಲ್ಲ. ಧೋನಿ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದ್ರೂ, ಮಹೇಂದ್ರ ಇದ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಸದ್ಯ ಬೇಟೆಗೆ ಸಜ್ಜಾಗಿರುವ ಅಸಲಿ ಹುಲಿ ಫೋಟೋ ಪೋಸ್ಟ್ ಮಾಡಿರೋ ಧೋನಿ, ತಾನು ರನ್​ಬೇಟೆಗೆ ರೆಡಿ ಅನ್ನೋ ಸೂಚನೆ ಕೊಟ್ಟಿರೋದು.

ಧೋನಿ ರೀ ಎಂಟ್ರಿಗೆ ಫೆಬ್ರವರಿ 28ರ ಮುಹೂರ್ತ ಫಿಕ್ಸ್‌:
ಧೋನಿ ರೀ ಎಂಟ್ರಿಗೆ ಮೂಹರ್ತ ನಿಗಧಿಯಾಗಿದೆ. ಅದು ಇದೇ ಫೆಬ್ರವರಿ 28 ಅಂತಲೂ ಹೇಳಲಾಗ್ತಿದೆ. ಐಪಿಎಲ್ ಆರಂಭವಾಗ್ತಿರೋ ಹಿನ್ನೆಲೆ, ಇದೇ ಫೆಬ್ರವರಿ ಕೊನೆಗೆ ಧೋನಿ ಸಿಎಸ್​ಕೆ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

ಹುಲಿ ಕೋಟೆಯೊಳಗೆ ನುಗ್ಗಿರುವ ಹೆಬ್ಬುಲಿ ಅಸಲಿ ಹುಲಿ ಫೋಟೋ ಹಾಕಿ ರಣಕಣಕ್ಕೆ ಧುಮುಕೋ ಸೂಚನೆಯನ್ನ ಕೊಟ್ಟಿದೆ. ಐಪಿಎಲ್ ಅಖಾಡಕ್ಕೆ ತಿಂಗಳ ಮುಂಚಿತವಾಗಿನಿಂದ್ಲೇ ರೆಡಿಯಾಗಲು ಹೊರಟ ಧೋನಿ ಮತ್ತೊಂದು ಚರಿತ್ರೆ ಸೃಷ್ಟಿಸಲು ರೆಡಿಯಾಗಿದ್ದಾರೆ.

 

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!