ಆಸ್ತಿಗಾಗಿ ಉಗುರು ಕಿತ್ತು ಪತಿಯ ಕೊಲೆ ಮಾಡಿದ ಧರ್ಮಪತ್ನಿ, ಸೋದರನೂ ಭಾಗಿ!

ಚಾಮರಾಜನಗರ: ಹಣಕ್ಕಾಗಿ ಅಣ್ಣನ ಜೊತೆ ಸೇರಿ ಪತಿಯನ್ನೇ ಅಪಹರಿಸಿ ಪತ್ನಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಹಣಕಾಸಿನ ವಿಚಾರವಾಗಿ ಪತಿ ಮತ್ತು ಪತ್ನಿ ನಡುವೆ ವೈಷಮ್ಯವಿತ್ತು. ಹೀಗಾಗಿ ಸ್ವಂತ ಅಣ್ಣನೇ ತನ್ನ ತಂಗಿಯ ಗಂಡನನ್ನು ಸಾಯಿಸಲು ಸಾಥ್ ನೀಡಿದ್ದಾನೆ. ಅಣ್ಣನ ಜೊತೆ ಸೇರಿ ರಶ್ಮಿ 2ನೇ ಗಂಡ ಸುಬ್ರಹ್ಮಣ್ಯನನ್ನು ಅಪಹರಿಸಿ ಹಣಕ್ಕಾಗಿ ಕಿರುಕುಳ ನೀಡಿದ್ದಾಳೆ.

5 ದಿನಗಳ ಕಾಲ ಗೃಹಬಂಧನದಲ್ಲಿಟ್ಟು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸುಬ್ರಹ್ಮಣ್ಯ ಉಗುರು ಕಿತ್ತು ರಾಡ್‌ನಿಂದ ಹಲ್ಲೆ ನಡೆಸಿ ಹಿಂಸೆ ನೀಡಿ ಬಳಿಕ ಆತನನ್ನು ಮುಡಿಗುಂಡದ ಮನೆ ಬಳಿ ಬಿಟ್ಟುಹೋಗಿದ್ರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸುಬ್ರಹ್ಮಣ್ಯ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ 3 ದಿನ ಚಿಕಿತ್ಸೆ ಪಡೆದಿದ್ದಾರೆ.

ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಈ ವೇಳೆ ಮೈಸೂರಿನ ವಿಜಯನಗರ ಪೊಲೀಸರ ಎದುರು ಮರಣಪೂರ್ವ ಹೇಳಿಕೆ ನೀಡಿದ್ದಾರೆ. ಬಳಿಕ ಚಿಕಿತ್ಸೆ ಫಲಿಸದೆ ಗಾಯಾಳು ಸುಬ್ರಹ್ಮಣ್ಯ ಮೃತಪಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ಮೃತ ಸುಬ್ರಹ್ಮಣ್ಯನ ಪತ್ನಿ ರಶ್ಮಿ, ರಶ್ಮಿ ಸಹೋದರ ರಾಕೇಶ್, ಮುಡಿಗುಂಡದ ಪ್ರದೀಪ್, ರಾಕೇಶ್ ಎಂಬ ನಾಲ್ವರು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.

ಜಮೀನು, ಆಸ್ತಿ ಆಸೆಗಾಗಿ ನನ್ನನ್ನೂ ಕೊಲೆ ಮಾಡಲು ಯತ್ನಿಸಿದ್ರು:
6 ತಿಂಗಳ ಹಿಂದೆ ಮೃತ ಸುಬ್ರಹ್ಮಣ್ಯನ ತಂದೆ ನಾಗೇಂದ್ರ ಮೂರ್ತಿ ಅವರ ಮನೆಗೆ ಗೂಂಡಾಗಳ ಜೊತೆ ಹೋದ ರಶ್ಮಿ ನನ್ನ ಗಂಡ ನಿಮ್ಮ ಮನೆಯಲ್ಲಿ 40 ಲಕ್ಷ ಹಣ ಇಟ್ಟಿದ್ದಾನೆ ಅದನ್ನು ಕೊಡಿ ಎಂದು ಬೆದರಿಕೆ ಹಾಕಿ, ನನ್ನನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಳು ಎಂದು ಸುಬ್ರಹ್ಮಣ್ಯನ ತಂದೆ ನಾಗೇಂದ್ರ ಮೂರ್ತಿ ಆರೋಪಿಸಿದ್ದಾರೆ.

ಅಲ್ಲದೆ ರಶ್ಮಿ ತನ್ನ ಗಂಡನ ಬಳಿ ದುಡ್ಡು ಪಡೆದು ದೇಶ ಸುತ್ತುತಿದ್ದಳು. ಹಾಗೂ ಅನೇಕ ರೌಡಿ, ಗೂಂಡಾಗಳು ಇವಳ ಜೊತೆ ಇದ್ದರು. ನನ್ನನ್ನ ಬೆದರಿಸಲು ಮೈಸೂರಿನಿಂದ 30 ಜನ ಗೂಂಡಾಗಳನ್ನು ಕರೆದುಕೊಂಡು ಬಂದಿದ್ದಳು ಎಂದು ತಿಳಿಸಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!