ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಮುಸ್ಲಿಂ ಧರ್ಮ ಗುರುಗಳ ಭೇಟಿ

ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಹಾನಿಗೊಳಗಾದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಮುಸ್ಲಿಂ ಮುಖಂಡರು ಹಾಗೂ ಧರ್ಮ ಗುರುಗಳು ಭೇಟಿ ನೀಡಿದ್ದಾರೆ.

ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಶಾಸಕ ಜಮೀರ್ ಅಹಮದ್ ಆಗಮಿಸಿದ ಬೆನ್ನಲ್ಲೇ, ಈಗ ಮೌಲಾನಾ ಮುಸ್ತಫಾ ರಿಫಾಯಿ ಸೇರಿದಂತೆ ಮುಸ್ಲಿಂ ಧರ್ಮ ಗುರುಗಳು ಹಾಗೂ ಮುಖಂಡರುಗಳು ಆಗಮಿಸುತ್ತಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಅಖಂಡ ಶ್ರೀನಿವಾಸ್ ಮನೆ ಮೇಲೆ ನಡೆದ ದಾಳಿ ವಿಚಾರ ಹಾಗೂ ಧರ್ಮ ಗುರು ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ನವೀನ್ ಬಗ್ಗೆ ಕೂಡಾ ಧರ್ಮ ಗುರುಗಳು ಅಖಂಡ ಶ್ರೀನಿವಾಸ್ ಜೊತೆ ಚರ್ಚೆ ನಡೆಸುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

Related Tags:

Related Posts :

Category: