ಮಟನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್, ಬಿಸಿತುಪ್ಪವಾಗಿದೆ ಮಟನ್ ರೇಟ್

ಬೆಂಗಳೂರು: ಫುಡ್ ಸ್ಟ್ರೀಟ್ ಗೆ, ನಾನ್ ವೆಜ್ ಹೊಟೇಲ್​ಗೆ ಹೋದ್ರೆ ಮೊದ್ಲು ಬಹುತೇಕರು ಆರ್ಡರ್ ಮಾಡೋದು ಮಟನ್ ರೆಸಿಪಿಗಳನ್ನು. ಅದ್ರಲ್ಲೂ ಡಯಟ್ ಮಾಡೋರಿಗೆ, ಜಿಮ್​ನಲ್ಲಿ ವರ್ಕೌಟ್ ಮಾಡೋರಿಗೆ, ಕೂಲ್ ಫುಡ್ ಇಷ್ಟಾಪಡೊರಿಗೆ ಮಟನ್ ಅಚ್ಚುಮೆಚ್ಚು. ಆದ್ರೆ, ಇನ್ಮುಂದೆ ವೆರೈಟಿ ವೆರೈಟಿ ಮಟನ್ ರೆಸಿಪಿ ತಿನ್ನೋರು ಸ್ವಲ್ಪ ಯೋಚಿಸ್ಬೇಕಾಗಿದೆ. ಯಾಕೆಂದ್ರೆ, ಮಟನ್ ರೇಟ್ ಏರಿಕೆಯಾಗಿದೆ. ಇದು ಖಾದ್ಯಪ್ರಿಯರಿಗೆ ಶಾಕ್ ನೀಡಿದೆ.

ಸಿಲಿಕಾನ್ ಸಿಟಿ ಜನ್ರ ಬಾಯಿ ಸುಡುತ್ತಿದೆ ಮಟನ್ ರೆಸಿಪಿಸ್!
ಸಾಮಾನ್ಯವಾಗಿ ಈ ಸಮಯದಲ್ಲಿ ಪ್ರತಿ KG ಮಟನ್​ಗೆ 450 ರಿಂದ 550 ರೂ ಇರುತ್ತೆ. ಆದ್ರೆ ಇದೇ ರೇಟ್ ಏಕಾಏಕಿ ಈಗ 650 ರಿಂದ 700 ಕ್ಕೆ ತಲುಪಿದೆ! ಇಷ್ಟಕ್ಕೂ ಈ ಬೆಲೆ ಹೆಚ್ಚಳಕ್ಕೆ ಕಾರಣ ಅಂದ್ರೆ ಕುರಿ ಸಾಕುವುದು ಹಾಗೂ ಸಂಚಾರಿ ಕುರಿ ಸಾಕಾಣಿಕೆ ಕುಗ್ಗಿರೊದು. ಹೌದು ಇತ್ತೀಚಿನ ದಿನಗಳಲ್ಲಿ ಮೊದಲಿನ ಹಾಗೆ ಸಾಕಷ್ಟು ಪ್ರಮಾಣದಲ್ಲಿ ರೈತರಿಂದ ಕುರಿ ಸಾಕಾಣಿಕೆಯಾಗುತ್ತಿಲ್ಲ, ಸಂಚಾರಿ ಕುರಿ ಸಾಕಾಣಿಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದಕ್ಕೆಲ್ಲಾ ಕಾರಣ ಅಂದ್ರೆ ಕುರಿ ಸಾಕಾಣಿಕೆದಾರರಿಗೆ ಕುರಿಗಳನ್ನ ಮೇಕೆಗಳನ್ನ ಮೇಯಿಸಲು ಗೋಮಾಳಗಳು ಸಿಗುತ್ತಿಲ್ಲ, ಮೊದಲಿನ ಹಾಗೆ ರೈತರು ಕೂಡಾ ಭೂಮಿಯಲ್ಲಿ ಕುರಿಗಳನ್ನ ಬೀಡುತ್ತಿಲ್ಲ, ಹೀಗಾಗಿ ಸಂಚಾರಿ ಕುರಿ ಸಾಕಾಣಿಕೆ ಸಂಖ್ಯೆ ಕಡಿಮೆಯಾಗಿದೆ.

ಇದರಿಂದ ಮಟನ್ ರೇಟ್ ಏರಿಕೆ ಕಂಡಿದೆ. ಅಷ್ಟೇ ಅಲ್ಲದೆ ಮಾರುಕಟ್ಟೆಗೆ ಇತ್ತಿಚ್ಚಿನ ದಿನಗಳಲ್ಲಿ ಬೌಯ್ಲರ್ ಕೋಳಿ ಲಗ್ಗೆ ಇಟ್ಟಿದ್ದು ಇಂದರಿಂದಾಗಿಯೂ ಮಟನ್ ರೇಟ್ ಏರಿಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಮಟನ್ ರೇಟ್ ಖಾದ್ಯ ಪ್ರಿಯರ ಬಾಯಿ ಸುಡುತ್ತಿದ್ದು, ಇದು ಹೀಗೆ ಮುಂದು ವರೆದ್ರೆ ಮುಂದಿನ ಯುಗಾದಿ ವೇಳೆಗೆ ಮಟನ್ ರೇಟ್ 800ರೂಗಳಿಗೆ ಏರಿಕೆಯಾದ್ರೆ ಅಚ್ಚರಿ ಪಡಬೇಕಿಲ್ಲ ಅಂತಿದ್ದಾರೆ ಮಾರಟಗಾರರು.

ಇನ್ನು ಮಟನ್ ಖಾದ್ಯಗಳನ್ನ ತುಂಬಾ ಇಷ್ಟಾ ಪಡುವರಿಗೆ ಇದು ಕೊಂಚ ಬೇಸರ ಮೂಡಿಸಿದೆ. ಸಿಲಿಕಾನ್ ಸಿಟಿಯಲ್ಲಿ ಸದ್ಯ ಮಟನ್ ರೇಟ್ 70 ರಿಂದ 100ರೂ ವರೆಗೂ ಏರಿಕೆ ಕಂಡಿದ್ದು. ನಾನ್ ವೆಜ್ ಹೋಟೆಲ್ ಗೆ ಹೋಗಿ ಸ್ಟೈಲ್ ಚಿಲ್ಡ್ ಬೀಯರ್ ಜೊತೆ ಮಟನ್ ರೆಸಿಪಿಸ್ ಆಡರ್ ಮಾಡೊದಕ್ಕೆ ಜೇಂಬ್ ನಲ್ಲಿ ಎಷ್ಟು ದುಡ್ಡಿದೆ ಅಂತಾ ನೋಡ್ಕೊಂಡು ಆಡರ್ ಮಾಡುವ ಸ್ಥಿತಿ ಬಂದಿದೆ. ಒಂದ್ಕಡೆ, ಗ್ಯಾಸ್ ರೇಟ್, ತರಕಾರಿ ರೇಟ್, ಆನಿಯನ್ ರೇಟ್ ಜಾಸ್ತಿಯಾಗ್ತಿದೆ. ಮತ್ತೊಂದು ಕಡೆ ಮಟನ್ ದರ ಕೂಡಾ ಏರಿಕೆಯಾಗಿರೋದು ಮಟನ್ ರೇಟ್ ಪ್ರೀಯರಿಗೆ ಬೇಸರ ಮೂಡಿಸಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!