ಕೊವಿಡ್-19 ಪಿಡುಗನ್ನು ಸರ್ಕಾರ ಸಮರ್ಪಕವಾಗಿ ನಿಭಾಯಿಸಿದೆ: ಶ್ರೀರಾಮುಲು

ವಿಧಾನಪರಿಷತ್​ನಲ್ಲಿ ವಿಪಕ್ಷ ನಾಯಕರಾಗಿರುವ ಕಾಂಗ್ರೆಸ್​ನ ಎಸ್ ಅರ್ ಪಾಟೀಲ್, ಕೊವಿಡ್-19 ಸೋಂಕನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ, ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪ್ರಶ್ನೆ ಕೇಳಿ, ಸಚಿವರ ಕಾರ್ಯವೈಖರಿ ಬಗ್ಗೆ ಟೀಕಿಸಿದ ನಂತರ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ ಶ್ರೀರಾಮುಲು, ವಿಪಕ್ಷ ನಾಯಕರ ಮಾತಿನಿಂದ ತಮ್ಮ ಮನಸ್ಸಿಗೆ ನೋವಾಗಿದೆ ಎಂದರು.

ಮುಂದುವರಿದದು ಹೇಳಿದ ಸಚಿವರು, ‘‘ಕೊವಿಡ್-19 ಸೋಂಕಿನ ಆರಂಭದ ದಿನಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ನೀಡಿರಲಿಲ್ಲ. ಮಾರ್ಚ್ ತಿಂಗಳಲ್ಲಿ ಭಾರತದಲ್ಲೇ ಮೊದಲ ಸಾವು ಕಲಬುರಗಿಯಲ್ಲಿ ಆಯ್ತು. ಆಗ ಸ್ವತಃ ನಾನೇ ಅಲ್ಲಿಗೆ ಹೋಗಿದ್ದೆ. ಆಗ ಕೊವಿಡ್-19 ಬಗ್ಗೆ ಜನರು ಹೆಚ್ಚು ಭಯಭೀತರಾಗಿದ್ದರು. ನಾನೇ ಮುಂದೆ ನಿಂತು ಎಲ್ಲಾ ಕೆಲಸ ಮಾನಿಟರ್ ಮಾಡಿ ವಾಪಸಾಗಿದ್ದೆ,’’ ಎಂದರು.

‘‘ಈ ವ್ಯಾಧಿಯನ್ನು ಸಂಪೂರ್ಣ ಹೊಗಲಾಡಿಸಲು ನಮ್ಮಿಂದ ಆಗಲ್ಲ. ನಾವೆಲ್ಲ ನಿಮಿತ್ತ ಮಾತ್ರ. ರಾಜ್ಯ ಸರ್ಕಾರ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡುತ್ತಿದೆ. ಟೆಕ್ನಾಲಜಿ ಮುಂದುವರಿದ ರಾಷ್ಟ್ರಗಳಲ್ಲೂ ಲಸಿಕೆ ಕಂಡುಹಿಡಿಯಲಾಗಿಲ್ಲ. ಆದರೂ ಸರ್ಕಾರಗಳು ಕೊವಿಡ್-19 ಸೋಂಕನ್ನು ನಿಯಂತ್ರಣ ಮಾಡುತ್ತಿವೆ. ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿರುವ ಕಡೆ ಮಾತ್ರ ಈ ರೋಗ ಬಂದಿಲ್ಲ, ಎಲ್ಲ ರಾಜ್ಯಗಳಲ್ಲೂ ಅದು ವ್ಯಾಪಿಸಿದೆ. ನಮ್ಮ ಸರ್ಕಾರ ಪಿಡುಗನ್ನು ಸಮರ್ಪಕವಾಗಿ ನಿಭಾಯಿಸಿದೆ,’’ ಎಂದು ಶ್ರೀರಾಮುಲು ಹೇಳಿದರು.

Related Tags:

Related Posts :

Category:

error: Content is protected !!