ನಂಜನಗೂಡಿನ ಜ್ಯುಬಿಲಿಯಂಟ್ ‘ಕೊರೊನಾ ಕಾರ್ಖಾನೆ’ ಮತ್ತೆ 3 ಮಂದಿಗೆ ಸೋಂಕು

  • sadhu srinath
  • Published On - 13:06 PM, 16 Apr 2020

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ವೈರಸ್ ತಾಂಡವವಾಡುತ್ತಲೇ ಇದೆ. ಮೈಸೂರಿನಲ್ಲಿ ಇಂದು ಮತ್ತೆ 3 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.
ಇದರಿಂದ ಮೈಸೂರಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಆತಂಕದ ಸಂಗತಿಯೆಂದ್ರೆ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆ ಮೂಲದಿಂದ ಮತ್ತೆ 3 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಸಮಾಧಾನಕರ ಸಂಗತಿಯೆಂದ್ರೆ ಇದುವರೆಗೂ 12 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಮೈಸೂರಿನಲ್ಲಿ ಕೊರೊನಾ ವೈರಸ್ ಸೋಂಕಿನ ಆ್ಯಕ್ಟೀವ್ ಪ್ರಕರಣ 49ಕ್ಕೆ ಏರಿಕೆ ಕಂಡಿದೆ.