2nd PUC Result 2020: ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟ ಮೈಸೂರಿನ ಸ್ಪಂದನಾ

ಮೈಸೂರು: ಕೊರೊನಾ ಬಿಕ್ಕಟ್ಟಟಿನ ನಡುವೆ ಇಂದು ಆನ್​ಲೈನ್​ನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಮೈಸೂರು ಜಿಲ್ಲೆಯಲ್ಲಿ ಈ ಬಾರಿ 67.98 % ಫಲಿತಾಂಶ ಬಂದಿದ್ದು 15ನೇ ಸ್ಥಾನ ಪಡೆದಿದೆ. ಕಲಾ ವಿಭಾಗದಲ್ಲಿ ಮೈಸೂರಿನ‌ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿ ಬಿ‌. ಎನ್. ಸ್ಪಂದನಾ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ.

ಸ್ಪಂದನಾ 600 ಅಂಕಗಳಿಗೆ 582 ಅಂಕಗಳಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಇವರು ಇತಿಹಾಸದಲ್ಲಿ 100 ಕ್ಕೆ 100 ಅಂಕ, ಅರ್ಥಶಾಸ್ತ್ರ -100, ಭೂಗೋಳ ಶಾಸ್ತ್ರ -98, ರಾಜ್ಯಶಾಸ್ತ್ರ-98, ಕನ್ನಡ-96, ಇಂಗ್ಲೀಷ್-90 ಅಂಕ ಗಳಿಸಿದ್ದಾರೆ.

Related Tags:

Related Posts :

Category:

error: Content is protected !!