ಶ್ರಾವಣ ಮಾಸದ ಹುಣ್ಣಿಮೆ: ನಾಳೆ ಭಕ್ತರಿಗಿಲ್ಲ ದಕ್ಷಿಣಕಾಶಿ ಶ್ರೀಕಂಠೇಶ್ವರನ ದರ್ಶನ

ಮೈಸೂರು: ಮಹಾಮಾರಿ ಕೊರೊನಾ ಜನರನ್ನು ನರಳುವಂತೆ ಮಾಡಿದೆ. ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೇಗುಲ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸುವ ಮೂಲಕ ಮೈಸೂರು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

ಪ್ರತಿ ಶ್ರಾವಣ ಮಾಸದ ಹುಣ್ಣಿಮೆ ಹಾಗೂ ಸೋಮವಾರಗಳಂದು ನಂಜನಗೂಡಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅದರಲ್ಲೂ ನಾಳೆ ಶ್ರಾವಣ ಮಾಸದ ಹುಣ್ಣಿಮೆ ಜೊತೆಗೆ ಸೋಮವಾರ ಆಗಿರುವುದರಿಂದ ಸಹಸ್ರಾರು ಭಕ್ತರು ನಂಜನಗೂಡಿಗೆ ಭೇಟಿ ನೀಡುತ್ತಾರೆ. ಈ ವೇಳೆ ಕೊರೊನಾ ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

ಶ್ರಾವಣ ಮಾಸದ ಹುಣ್ಣಿಮೆಯ ದಿನ ನಂಜನಗೂಡಿನ ಶ್ರೀಕಂಠೆಡಶ್ವರ ಸ್ವಾಮಿಯ ದೇಗುಲದಲ್ಲಿ ವಾಡಿಕೆಯಂತೆ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಆದರೆ ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದಕ್ಕೆ ಅವಕಾಶವಿಲ್ಲ.

Related Tags:

Related Posts :

Category:

error: Content is protected !!