ಪ್ರಾಧ್ಯಾಪಕರಿಗೆ ಸಂಬಳ ಕಟ್.. ಸರ್ಕಾರಿ ಆದೇಶಕ್ಕೆ ನಯಾ ಪೈಸೆ ಕಿಮ್ಮತ್ತಿಲ್ಲ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಆದೇಶಕ್ಕೆ ಕಾಲೇಜುಗಳು ತಲೆಕೆಡಿಸಿಕೊಂಡಿಲ್ಲ. ಇಲಾಖೆಯ ಆದೇಶಕ್ಕೂ ಕಿಮ್ಮತ್ತು ಕೊಡದ ಕೆಲ ಪ್ರತಿಷ್ಠಿತ ಕಾಲೇಜುಗಳು ಉನ್ನತ ಶಿಕ್ಷಣ ಇಲಾಖೆಯ ಆದೇಶಕ್ಕೆ ಕ್ಯಾರೆ ಅಂತಿಲ್ಲ. ಪ್ರಾಧ್ಯಾಪಕರು ಕಾಲೇಜುಗಳಿಗೆ ಕಡ್ಡಾಯವಾಗಿ ಬರಲೇಬೇಕೆಂದು ಒತ್ತಡ ಹೇರಿವೆ. ಕೆಲ ಪ್ರಾಧ್ಯಾಪಕರಿಗೆ ಸಂಬಳ ಕಟ್ ಮಾಡೋದಾಗಿ ಕಾಲೇಜುಗಳು ಧಮ್ಕಿ ಹಾಕಿವೆ. ಅಲ್ಲದೆ ಕೆಲಸಕ್ಕೆ ಬರದೇ ಹೋದ್ರೆ ಸಂಬಳ ರಹಿತ ರಜೆ ಎಂದು ಪ್ರಾಧ್ಯಾಪಕರಿಗೆ ರಾಜಾರೋಷವಾಗಿ ಎಚ್ಚರಿಕೆ ನೀಡಿದ್ದಾರಂತೆ.

ಉನ್ನತ ಶಿಕ್ಷಣ ಇಲಾಖೆ ಅಡಿಯ ಕಾಲೇಜು ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸೂಚಿಸಿತ್ತು. ಜುಲೈ 30ರವರೆಗೂ ವರ್ಕ್ ಫ್ರಮ್ ಹೋಮ್ ನೀಡಲಾಗಿತ್ತು. ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಜುಲೈ 15 ರವರೆಗೂ ಕಾಲೇಜುಗಳಿಗೆ ರಜೆ ಎಂದು ಘೋಷಿಸಿತ್ತು.

ಸರ್ಕಾರದ ಸುತ್ತೋಲೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಮೈಸೂರಿನ ಬಹುತೇಕ ಖಾಸಗಿ ಕಾಲೇಜುಗಳು ಪ್ರಾಧ್ಯಾಪಕರಿಗೆ ಕಾಲೇಜಿಗೆ ಬಂದು ಆನ್‌ಲೈನ್ ಕ್ಲಾಸ್ ನಡೆಸುವಂತೆ ಒತ್ತಾಯಿಸಿವೆ. ಮನೆಯಿಂದಲೇ ಕೆಲಸ ಮಾಡಬೇಕೆಂಬ ಸೂಚನೆಯಿದ್ದರೂ ಕಾಲೇಜು ಆಡಳಿತ ಮಂಡಳಿ ನಿಯಮವನ್ನು ತಳ್ಳಿ ಹಾಕಿದೆ. ಇದನ್ನು ವಿರೋಧಿಸಿದರೆ ರಜೆ ಹಾಕುವಂತೆ ಒತ್ತಡ ಹೇರಿದೆ. ಕೆಲವು ಕಡೆ ಕೆಲಸದಿಂದ ತೆಗೆದು ಹಾಕುವುದಾಗಿ ಧಮ್ಕಿ ಹಾಕಿದ್ದಾರೆ. ಇದರಿಂದ ಪ್ರಾಧ್ಯಾಪಕರು ಮಾನಸಿಕವಾಗಿ ನೊಂದಿದ್ದಾರೆ.

Related Tags:

Related Posts :

Category:

error: Content is protected !!