ಲಾಕ್​ಡೌನ್​ ಸಮಯದಲ್ಲಿ ಕೊವಿಡ್ ವಾರಿಯರ್ಸ್​ ರೀತಿ ದುಡಿಯುತ್ತಿದ್ದಾರೆ ಈ ಯುವಕರು

ಮೈಸೂರು: ಲಾಕ್​ಡೌನ್ ಸಂದರ್ಭದಲ್ಲಿ ಎಲ್ಲರು ಮನೆಯಲ್ಲಿ ಟಿವಿ ನೋಡ್ತಾ ಆಟ ಆಡ್ತ ಕುಟುಂಬಸ್ಥರ ಜೊತೆ ಕಾಲಕಳೆದ್ರೆ ಮೈಸೂರಿನ ಈ ಯುವಕರ ಕಾರ್ಯ ಶ್ಲಾಘನೀಯ. ಲಾಕ್​ಡೌನ್ ಸಂದರ್ಭದಲ್ಲಿ ಈ ಯುವಕರು ಕೊರೊನಾ ವಾರಿಯರ್​ಗಳಂತೆ ದುಡಿದಿದ್ದಾರೆ. ಬಡವರ ಪ್ರತಿ ಮನೆ ಮನೆಗಳಿಗೆ ಧಾನಿಗಳು ನೀಡಿದ ಆಹಾರ ಪದಾರ್ಥಗಳನ್ನು ತಲುಪಿಸಿ ಬಂದಿದ್ದಾರೆ. ಆದ್ರೆ ಇದ್ಯಾವುದಕ್ಕೂ ಅವರು ಒಂದು ರೂಪಾಯಿ ಪಡೆದಿಲ್ಲ. ಬದಲಿಗೆ ತಮ್ಮ ದುಡಿಮೆಯಲ್ಲಿ ಉಳಿದಿದ್ದ ಹಣವನ್ನೇ ಖರ್ಚು ಮಾಡಿ ಸೇವೆ ಸಲ್ಲಿಸಿದ್ದಾರೆ. ಅಷ್ಟೆ ಅಲ್ಲದೆ ದಿನಸಿ ಕಿಟ್​ಗಳನ್ನು ಮನೆ ಮನೆಗೆ ತಲುಪಿಸಲು ತಮ್ಮ ವಾಹನಗಳನ್ನೇ ಬಳಸಿದ್ದಾರೆ.

ಕೆಲವು ಸಂದರ್ಭದಲ್ಲಿ ಬೇರೆ ಜಿಲ್ಲೆಗಳಿಗೂ ಆಹಾರ ಪದಾರ್ಥಗಳು ಹಾಗೂ ಔಷಧಿಯನ್ನು ತಲುಪಿಸಿ ಬಂದಿದ್ದಾರೆ. ಅಷ್ಟೆ ಅಲ್ಲದೆ ಮಂಗಳೂರಿನ ಕೊವಿಡ್ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಮೈಸೂರು ಆಸ್ಪತ್ರೆಯಿಂದ ಔಷಧಿ ತೆಗೆದುಕೊಂಡೋಗಿ ಜೀವ ಉಳಿಸಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ಕಳೆದ ಎರಡು ತಿಂಗಳಿಂದ ನಿರಂತರವಾಗಿ ಮೈಸೂರಿನ 100 ಯುವಕರು ಒಂದು ಗುಂಪಾಗಿ ಅನೇಕ ಸೇವೆಗಳನ್ನು ಮಾಡಿಕೊಂಡು ಬಂದಿದ್ದಾರೆ.

ಕಾರ್ಮಿಕರನ್ನ ತವರೂರಿಗೆ ತಲುಪಿಸುವ ಕೆಲಸ:
ಇದೀಗಾ ಬಿಹಾರದ‌ 12 ವಲಸೆ ಕಾರ್ಮಿಕರು ಮೈಸೂರಿನಲ್ಲೇ ಸಿಕ್ಕಿ ಹಾಕಿಕೊಂಡಿದ್ರು. ಅವರ ಜೇಬಿನಲ್ಲಿ ಒಂದು ರೂ‌ಪಾಯಿ ಸಹ ಇರಲಿಲ್ಲ.‌ ಈ ಸಂದರ್ಭದಲ್ಲಿ ತಮ್ಮ ಬಳಿಯೇ ಇದ್ದ ಹಣವನ್ನ ಯುವಕರು ಒಟ್ಟುಗೂಡಿಸಿ ಬಾಡಿಗೆ ಕಾರು ಮಾಡಿ ಅವರನ್ನು ತಮ್ಮ ಊರಿಗೆ ಕಳುಹಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಮೈಸೂರಿನಲ್ಲಿ ಉಳಿದ ಕಾರ್ಮಿಕರನ್ನು ತವರೂರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಈ ಯುವಕರ ತಂಡ ಮಾಡಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ತಮ್ಮ ಜೇಬಿನಿಂದಲೇ ಹಣ ಖರ್ಚು ಮಾಡಿಕೊಂಡು ನಿರಂತರ ಸೇವೆಯಲ್ಲಿ ತೊಡಗಿರುವ ಯುವಕರ ಕಾರ್ಯ ಎಲ್ಲರಿಗೂ ಮಾದರಿ.

Related Posts :

Category:

error: Content is protected !!

This website uses cookies to ensure you get the best experience on our website. Learn more