ಇದೇ ಸರ್ಕಾರ ಭದ್ರವಿದ್ರೆ ನನ್ನ ಕ್ಷೇತ್ರದ ಅಭಿವೃದ್ಧಿ ಸಾಧ್ಯ, BJP ಪರ ಮಹೇಶ್ ಬ್ಯಾಟಿಂಗ್

ಬೆಳಗಾವಿ: ರಾಜ್ಯದಲ್ಲಿ ಸದ್ಯ ಬಿಜೆಪಿ ಸರ್ಕಾರವಿದೆ. ಮುಂದೆಯೂ ಬಿಜೆಪಿ ಸರ್ಕಾರ ಸುಭದ್ರವಾಗಿರಲು ಬೇಕಾಗುವಷ್ಟು ಶಾಸಕರನ್ನ ರಾಜ್ಯದ ಜನ ಗೆಲ್ಲಿಸಿಕೊಡಬೇಕು ಎಂದು ಬಿಎಸ್​ಪಿಯಿಂದ ಉಚ್ಚಾಟಿತ ಶಾಸಕ ಎನ್. ಮಹೇಶ್ ಬಿಜೆಪಿ ಪರ ಬ್ಯಾಟಿಂಗ್ ನಡೆಸಿದ್ದಾರೆ.

ಈಗ ಬಿಜೆಪಿ ಸರ್ಕಾರ ಇರೋದ್ರಿಂದ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು. ನಾಳೆ ಸರ್ಕಾರ ಬಿದ್ದು ಹೋಗಿ ಚುನಾವಣೆಗೆ ಹೋದ್ರೆ ನಮ್ಮ ಪರಿಸ್ಥಿತಿ ಏನು? ನನ್ನಂತೆ 90 ಶಾಸಕರು ಮೊದಲ ಬಾರಿ ಗೆದ್ದಿದ್ದಾರೆ. ಈಗ ಯಾರಿಗೂ ಮಧ್ಯಂತರ ಚುನಾವಣೆ ಬೇಕಾಗಿಲ್ಲ. ಇನ್ನು ಮೂರೂವರೆ ವರ್ಷ ಸುಭದ್ರ ಸರ್ಕಾರ ಬೇಕೆಂಬುದು 90 ಶಾಸಕರ ನಿರೀಕ್ಷೆಯಾಗಿದೆ. ನಾನು 20 ವರ್ಷದ ಶ್ರಮದ ನಂತರ ಗೆದ್ದು ಬಂದಿದ್ದೇನೆ. ಮೂರೂವರೆ ವರ್ಷ ಇದೇ ಬಿಜೆಪಿ ಸರ್ಕಾರ ಇದ್ರೆ ನನ್ನ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಕೊಳ್ಳೇಗಾಲದಲ್ಲಿ ಶಾಸಕ ಎನ್.ಮಹೇಶ್ ಹೇಳಿದ್ದಾರೆ.

Related Posts :

Category:

error: Content is protected !!