ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಆಲ್ರೌಂಡರ್ ನಾಲ್ಕನೇ ಟೆಸ್ಟ್ ಆಡುವ ಸ್ಥಿತಿಯಲ್ಲಿಲ್ಲದಿರುವುದರಿಂದ ಈಗಷ್ಟೇ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟಿರುವ ಬೌಲರ್ಗಳೊಂದಿಗೆ ಬ್ರಿಸ್ಬೇನ್ನಲ್ಲಿ ಭಾರತ ಮೈದಾನಕ್ಕಿಳಿಯಬೇಕಿದೆ.
ಟೀಮಿನ ಅರ್ಧಕ್ಕಿಂತ ಜಾಸ್ತಿ ಸದಸ್ಯರು ಗಾಯಗೊಂಡು ಜನವರಿ 15ರಂದು ಬ್ರಿಸ್ಬೇನ್ನಲ್ಲಿ ಶುರುವಾಗುವ ಸರಣಿಯ ಅಂತಿಮ ಟೆಸ್ಟ್ ಅಡದ ಸ್ಥಿತಿಯಲ್ಲಿರುವ ವಿದ್ಯಮಾನದಿಂದ ಟೀಮ್ ಇಂಡಿಯಾ ಕಂಗೆಟ್ಟಿದ್ದರೂ ಉಳಿದ ಸದಸ್ಯರು ಭರ್ಜರಿ ತಾಲೀಮು ನಡೆಸಿದ್ದಾರೆ. ಆದರೆ, ಟೀಮ್ ಮ್ಯಾನೇಜ್ಮೆಂಟ್ಗೆ ಆಡುವ ಇಲೆವೆನ್ ಅಂತಿಮಗೊಳಿಸುವುದು ಕಷ್ಟವಾಗಲಿದೆ.
ಭಾರತದ ಪ್ರಮುಖ ಆಟಗಾರರು ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದರೂ ಅಸ್ಟ್ರೇಲಿಯ ಟೆಸ್ಟ್ ಮತ್ತು ಸರಣಿ ಗೆಲ್ಲುವ ಫೇವರಿಟ್ ಟೀಮ್ ಅಂತ ಪರಿಗಣಿಸಲಾಗದೆಂದು ಅಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಿಯಾನ್ ಹೇಳಿದ್ದಾರೆ. ಸರಣಿಯಲ್ಲಿ ಭಾರತದ ಆಟಗಾರರು ತೋರಿರುವ ಧೈರ್ಯ ಮತ್ತು ಹೋರಾಟ ಮನೋಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಡಿಸಿರುವ ಲಿಯಾನ್, ಹಲವಾರು ಆಟಗಾರರು ಗಾಯಗೊಂಡಿದ್ದರೂ ಆಡುವ ಇಲೆವೆನ್ ಅನ್ನು ಆರಿಸುವಷ್ಟು ಪ್ರತಿಭಾವಂತ ಆಟಗಾರರು ಟೀಮ್ ಇಂಡಿಯಾದಲ್ಲಿದ್ದಾರೆ ಎಂದರು.
‘ಆಸ್ಟ್ರೇಲಿಯಾ ತಂಡದ ಸ್ಥಿತಿ ಉತ್ತಮವಾಗಿದೆ ಎಂದು ನಾನು ಹೇಳಲಾರೆ. ಕೆಲ ಪ್ರಮುಖ ಆಟಗಾರರು ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದರೂ ಆಡುವ ಇಲೆವೆನ್ಲ್ಲಿ ಆಯ್ಕೆಯಾಗುವಷ್ಟು ಪ್ರತಿಭಾವಂತ ಆಟಗಾರರು ಇಂಡಿಯಾ ಟೀಮಿನಲ್ಲಿದ್ದಾರೆ’ ಎಂದು ಬುಧವಾರ ನಡೆದ ವರ್ಚುಯಲ್ ಸುದ್ದಿಗೋಷ್ಟಿಯಲ್ಲಿ ಲಿಯಾನ್ ಹೇಳಿದರು.
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಆಲ್ರೌಂಡರ್ ನಾಲ್ಕನೇ ಟೆಸ್ಟ್ ಆಡುವ ಸ್ಥಿತಿಯಲ್ಲಿಲ್ಲದಿರುವುದರಿಂದ ಈಗಷ್ಟೇ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟಿರುವ ಬೌಲರ್ಗಳೊಂದಿಗೆ ಬ್ರಿಸ್ಬೇನ್ನಲ್ಲಿ ಭಾರತ ಮೈದಾನಕ್ಕಿಳಿಯಬೇಕಿದೆ.
ಬ್ರಿಸ್ಬೇನ್ನಲ್ಲಿ ತಾಲೀಮಿಗೆ ತಯಾರಾಗುತ್ತಿರುವ ಟೀಮ್ ಇಂಡಿಯಾ ಸದಸ್ಯರು
‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ನಮ್ಮ ಸಿದ್ಧತೆ ಕುರಿತು ಯೋಚಿಸಬೇಕಿದೆ. ಅವರೇನು ಮಾಡುತ್ತಿದ್ದಾರೆಂದು ನಾವು ಯೋಚಿಸಬೇಕಿಲ್ಲ. ನಮ್ಮ ಬೌಲಿಂಗ್ ಅಕ್ರಮಣ ಗಬ್ಬಾ ಮೈದಾನಕ್ಕೆ (ಬ್ರಿಸ್ಬೇನ್) ಹೊಂದಿಕೆಯಾಗುತ್ತದೆ, ಆದಷ್ಟು ಬೇಗ ನಾವು ಅವರ ಬ್ಯಾಟಿಂಗ್ ಕಟ್ಟಿಹಾಕುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಲಿಯಾನ್ ಹೇಳಿದರು.
ಬ್ರಿಸ್ಬೇನ್ ಮೈದಾನದಲ್ಲಿ ಅತಿಥೇಯರ ದಾಖಲೆ ಅದ್ಭುತವಾಗಿದೆ. ಇದುವರೆಗೆ ಆಡಿರುವ 55 ಟೆಸ್ಟ್ಗಳಲ್ಲಿ ಅವರು 33 ಗೆದ್ದ್ದು, 13 ಡ್ರಾ ಮಾಡಿಕೊಂಡಿದ್ದಾರೆ. ಒಂದು ಪಂದ್ಯ ಟೈ ಆಗಿದೆ ಮತ್ತು 8ರಲ್ಲಿ ಮಾತ್ರ ಸೋಲುಂಡಿದ್ದಾರೆ.
‘ಗಬ್ಬಾ ಮೈದಾನದಲ್ಲಿ ನಮ್ಮ ದಾಖಲೆ ಅತ್ಯುತ್ತಮವಾಗಿದೆ. ನಮ್ಮಲ್ಲಿ ಆತ್ಮವಿಶ್ವಾಸವಿದೆ ಮತ್ತು ಬ್ರಿಸ್ಬೇನ್ನಲ್ಲಿ ಸಕಾರಾತ್ಮಕ ಧೋರಣೆಯೊಂದಿಗೆ ಕ್ರಿಕೆಟ್ ಅಡುವುದು ಹೇಗೆನ್ನುವುದು ನಮಗೆ ಗೊತ್ತಿದೆ. ಆದರೆ ಈ ಅಂಶಗಳ ಮೇಲಷ್ಟೇ ನಾವು ಆತುಕೊಳ್ಳುವಂತಿಲ್ಲ. ಭಾರತೀಯ ತಂಡದ ಪ್ರತಿಭೆ ನಮಗೆ ಗೊತ್ತಿದೆ, ಸರಣಿ ಗೆಲ್ಲಲು ಅವರೆಷ್ಟು ಉತ್ಸುಕರಾಗಿದ್ದಾರೆ ಅನ್ನುವುದೂ ನಮಗೆ ಗೊತ್ತಿದೆ’ ಎಂದು ಲಿಯಾನ್ ಹೇಳಿದರು.