ಆಟ ಅಂದಾಗ ಅಲ್ಲಿ ತುಂಟಾಟ ಇದ್ದೇ ಇರುತ್ತೆ.. ಅದ್ರಲ್ಲೂ ಯೌವನವನ್ನು ದಾಟಿ ಮೂರ್ನಾಲ್ಕು ಮಕ್ಕಳ ತಾಯಿ ಆಗಿರೋರು ಈ ಕ್ರೀಡೆಗಳಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಅದ್ರಲ್ಲೂ ಮಹಿಳೆಯರು ಹಗ್ಗಜಗ್ಗಾಟ.. ನಿಂಬೆಹಣ್ಣು ಮತ್ತು ಸ್ಪೂನ್ ಆಟದಲ್ಲಿ ಭಾಗವಹಿಸಿ ಸಂಭ್ರಮಿಸಿದ್ರು.
ಧಾರವಾಡ: ಮಕ್ಕಳಾಟ ನೋಡೋಕೆ ಚೆಂದ.. ಆದ್ರೆ ಮಕ್ಕಳಾಟವನ್ನ ಹಿರಿಯರೇ ಆಡಿದ್ರೆ ಹೇಗಿರಬೇಡ.. ಅದ್ರಲ್ಲೂ ದೇಶೀ ಆಟಗಳನ್ನ ವಯಸ್ಕರು ಆಡಿದರಂತೂ ಮಜವೋ ಮಜ.. ಇಂತಹ ಅದ್ಭುತವಾದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಧಾರವಾಡ. ಮಹಿಳೆಯರು, ಮಕ್ಕಳು ಇಂಥಾ ವಿವಿಧ ದೇಸಿ ಕ್ರೀಡೆಗಳಲ್ಲಿ ಪಾಲ್ಗೊಂಡು ಮಸ್ತ್ ಮಜಾ ಮಾಡಿದ್ರು.
ಸ್ವಾಮಿ ವಿವೇಕಾನಂದರ 158ನೇ ಜಯಂತಿ ಹಿನ್ನೆಲೆಯಲ್ಲಿ 2 ದಿನಗಳ ಕಾಲ ವಿವಿಧ ದೇಸಿ ಕ್ರೀಡೆಗಳನ್ನು ಧಾರವಾಡದ ಜನಜಾಗೃತಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ನಗರದ ಸಂಪಿಗೆ ನಗರ ಬಡಾವಣೆಯಲ್ಲಿ ನಡೆದ ಈ ದೇಸಿ ಕ್ರೀಡೆಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಆಟ ಅಂದಾಗ ಅಲ್ಲಿ ತುಂಟಾಟ ಇದ್ದೇ ಇರುತ್ತೆ.. ಅದ್ರಲ್ಲೂ ಯೌವನವನ್ನು ದಾಟಿ ಮೂರ್ನಾಲ್ಕು ಮಕ್ಕಳ ತಾಯಿ ಆಗಿರೋರು ಈ ಕ್ರೀಡೆಗಳಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಅದ್ರಲ್ಲೂ ಮಹಿಳೆಯರು ಹಗ್ಗಜಗ್ಗಾಟ.. ನಿಂಬೆಹಣ್ಣು ಮತ್ತು ಸ್ಪೂನ್ ಆಟದಲ್ಲಿ ಭಾಗವಹಿಸಿ ಸಂಭ್ರಮಿಸಿದ್ರು.
ಇತ್ತೀಚಿನ ದಿನಗಳಲ್ಲಿ ಇಂಥಾ ಆಟಗಳ ಪರಿಚಯವೇ ಮಕ್ಕಳಿಗಿಲ್ಲ. ಇನ್ನು ಮಕ್ಕಳು ಮೊಬೈಲ್ನಲ್ಲೇ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಅದ್ರಲ್ಲೂ ಅಧುನಿಕತೆಯ ಭರಾಟೆಯಲ್ಲಿರೋ ಜನ ಕೇವಲ ಕ್ರಿಕೆಟ್.. ಫುಟ್ಬಾಲ್ ಆಟಗಳಲ್ಲೇ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇಂಥಾ ಸಮಯದಲ್ಲಿ ದೇಸಿ ಕ್ರೀಡೆಗಳನ್ನು ಮಕ್ಕಳಿಗೆ ಪೋಷಕರು ಪರಿಚಯಿಸಿದ್ದು ವಿಶೇಷವಾಗಿತ್ತು.