ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹೊಲೋಗ್ರಾಮ್ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹೊಲೋಗ್ರಾಮ್ ಪ್ರತಿಮೆ ಅನಾವರಣಗೊಳಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ

Netaji Subhas Chandra Bose ಅನಾವರಣ ಸಮಾರಂಭದಲ್ಲಿ ಮಾತನಾಡಿದ  ಪ್ರಧಾನಿ ನರೇಂದ್ರ ಮೋದಿ "ಇದೊಂದು ಐತಿಹಾಸಿಕ ಸ್ಥಳ ಮತ್ತು ಐತಿಹಾಸಿಕ ಸಂದರ್ಭ. ನೇತಾಜಿ ಬ್ರಿಟಿಷರ ಮುಂದೆ ತಲೆಬಾಗಲು ನಿರಾಕರಿಸಿದರು. ಅವರ ಪ್ರತಿಮೆಯು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ" ಎಂದು ಹೇಳಿದರು.

TV9kannada Web Team

| Edited By: Rashmi Kallakatta

Jan 23, 2022 | 7:46 PM

ದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhas Chandra Bose)ಅವರ 125 ನೇ ಜನ್ಮದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಅವರ ಹೊಲೊಗ್ರಾಮ್ ಪ್ರತಿಮೆಯನ್ನು(Hologram statue) ಅನಾವರಣಗೊಳಿಸಿದರು. ಸ್ಥಳದಲ್ಲಿ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸುವವರೆಗೆ ಹೊಲೋಗ್ರಾಮ್ ಪ್ರತಿಮೆ ಇಲ್ಲಿರಲಿದೆ. ಅನಾವರಣ ಸಮಾರಂಭದಲ್ಲಿ ಮಾತನಾಡಿದ  ಪ್ರಧಾನಿ ನರೇಂದ್ರ ಮೋದಿ “ಇದೊಂದು ಐತಿಹಾಸಿಕ ಸ್ಥಳ ಮತ್ತು ಐತಿಹಾಸಿಕ ಸಂದರ್ಭ. ನೇತಾಜಿ ಬ್ರಿಟಿಷರ ಮುಂದೆ ತಲೆಬಾಗಲು ನಿರಾಕರಿಸಿದರು. ಅವರ ಪ್ರತಿಮೆಯು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ” ಎಂದು ಹೇಳಿದರು. ಇದು ಕೇವಲ ಪ್ರತಿಮೆ ಮಾತ್ರವಲ್ಲ, ಭಾರತದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ನೀಡಿದ ನೇತಾಜಿಗೆ ಸೂಕ್ತವಾದ ಗೌರವವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದೊಂದಿಗೆ ಪ್ರತಿ ವರ್ಷ ಆರಂಭವಾಗುತ್ತದೆ. ಈ ವರ್ಷ ತುಸು ಒಂದುದಿನ ಮುಂಚೆ ಅಂದರೆ ಜನವರಿ 23 ರಂದು ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆ  ಪ್ರಾರಂಭವಾಗುತ್ತವೆ ಎಂದು ಸರ್ಕಾರವು ಈ ವಾರದ ಆರಂಭದಲ್ಲಿ ಘೋಷಿಸಿತು. ಅವರ ಜನ್ಮದಿನವನ್ನು ಪ್ರತಿ ವರ್ಷ ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತದೆ. ಕಾರ್ಯಕ್ರದ ಆರಂಭವಾಗಿ ನೇತಾಜಿ ಬೋಸ್ ಅವರ ಹೊಲೋಗ್ರಾಮ್ ಪ್ರತಿಮೆ ಅನಾವರಣ ಮಾಡಲಾಗಿದೆ.

ಹೊಲೋಗ್ರಾಮ್ ಪ್ರತಿಮೆ
ಹೊಲೋಗ್ರಾಮ್ ಪ್ರತಿಮೆಯು 30,000 ಲ್ಯೂಮೆನ್ಸ್ 4K ಪ್ರೊಜೆಕ್ಟರ್‌ನಿಂದ ಚಾಲಿತವಾಗಿದೆ. ಸಂದರ್ಶಕರಿಗೆ ಕಾಣದ ರೀತಿಯಲ್ಲಿ ಕಾಣದ ಹೊಲೋಗ್ರಾಫಿಕ್ ಪರದೆಯನ್ನು ನಿರ್ಮಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 3D ಚಿತ್ರವನ್ನು ಹೊಲೋಗ್ರಾಮ್‌ನ ಇಫೆಕ್ಚ್ ಸೃಷ್ಟಿಸಲು ಅದರ ಮೇಲೆ ಪ್ರಕ್ಷೇಪಿಸಲಾಗಿದೆ. ಹೊಲೋಗ್ರಾಮ್ ಪ್ರತಿಮೆಯ ಗಾತ್ರವು 28 ಅಡಿ ಎತ್ತರ ಮತ್ತು 6 ಅಡಿ ಅಗಲವಿದೆ. 28 ಅಡಿ ಉದ್ದದ ಹೊಲೊಗ್ರಾಮ್ ಪ್ರತಿಮೆಯನ್ನು ಮೇಲಾವರಣದ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇದು ಕಿಂಗ್ ಜಾರ್ಜ್ V ರ ಪ್ರತಿಮೆಯನ್ನು ಹೊಂದಿತ್ತು.ಅವರ ಪ್ರತಿಮೆಯನ್ನು 1968 ರಲ್ಲಿ ತೆಗೆದುಹಾಕಲಾಯಿತು.

ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಒಳಗೊಂಡಂತೆ ಭಾರತವು ಜನವರಿ 24 ರ ಬದಲಿಗೆ ಜನವರಿ 23 ರಿಂದ ಗಣರಾಜ್ಯೋತ್ಸವವನ್ನು ಪ್ರಾರಂಭಿಸುತ್ತಿರುವುದು ಇದೇ ಮೊದಲು. ಇದು ಮಹಾತ್ಮಾ ಗಾಂಧಿ ಹತ್ಯೆಯಾದ ಜನವರಿ 30 ರಂದು ಕೊನೆಗೊಳ್ಳುತ್ತದೆ. ಜನವರಿ 23, 1897 ರಂದು ಜನಿಸಿದ ‘ನೇತಾಜಿ’ (ಬೋಸ್ ನಂತರ ಗಳಿಸಿದ ‘ಗೌರವಾನ್ವಿತ ನಾಯಕ’ ಎಂಬ ಬಿರುದು) ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.

ಸುಭಾಸ್ ಚಂದ್ರ ಬೋಸ್ ಆಪ್ದಾ ಪ್ರಬಂಧನ್ ಪುರಸ್ಕಾರಗಳು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು 2019, 2020, 2021 ಮತ್ತು 2022 ರ ಸುಭಾಸ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರಗಳನ್ನು ಸಹ ಪ್ರದಾನ ಮಾಡಿದರು. ಸಮಾರಂಭದಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ಕೇಂದ್ರವು ವಾರ್ಷಿಕ ಸುಭಾಸ್ ಚಂದ್ರ ಬೋಸ್ ಆಪ್ದಾ ಪ್ರಬಂಧನ್ ಪುರಸ್ಕಾರವನ್ನು ಸ್ಥಾಪಿಸಿದೆ. ಪ್ರಶಸ್ತಿಯು ಸಂಸ್ಥೆಯಾಗಿದ್ದರೆ 51 ಲಕ್ಷ ರೂಪಾಯಿ ಮತ್ತು ವ್ಯಕ್ತಿಯಾದರೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹೊಂದಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಶೋಚನೀಯವಾಗಿದೆ, ಮತ ವ್ಯರ್ಥ ಮಾಡಬೇಡಿ: ಮಾಯಾವತಿ

Follow us on

Related Stories

Most Read Stories

Click on your DTH Provider to Add TV9 Kannada