ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮಾಡಿರುವ ಪ್ರಯತ್ನಗಳನ್ನು ಶ್ಲಾಘಿಸಿರುವ ನಿವೃತ್ತ ಪೊಲೀಸ್ ಅಧಿಕಾರಿಗಳು

ಕಾಶ್ಮೀರದ ನಾಗರಿಕ ಈಗ ಬಹಳ ಹೆಮ್ಮೆಯಿಂದ ತಾನೊಬ್ಬ ಅಥವಾ ತಾನೊಬ್ಬಳು ಭಾರತೀಯ ಪ್ರಜೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ದೇಶದ ಇತರ ರಾಜ್ಯಗಳ ಜನರು ಪಡೆಯುವ ಸೌಲಭ್ಯಗಳು ಅಲ್ಲಿನ ಜನರಿಗೆ ಸಿಗಲಿವೆ ಎಂದು ಅಧಿಕಾರಿಗಳು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮಾಡಿರುವ ಪ್ರಯತ್ನಗಳನ್ನು ಶ್ಲಾಘಿಸಿರುವ ನಿವೃತ್ತ ಪೊಲೀಸ್ ಅಧಿಕಾರಿಗಳು
ಗುರುವಾರ ನಡೆದ ಸರ್ವಪಕ್ಷಗಳ ಸಭೆ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 27, 2021 | 1:40 AM

ನವದೆಹಲಿ: ಭಾರತೀಯ ಪೊಲೀಸ ಸೇವೆಯ 15 ನಿವೃತ್ತ ಅಧಿಕಾರಿಗಳು ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರವೊಂದನ್ನು ಬರೆದು ಅವರ ಸರ್ಕಾರ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಮಾಡುತ್ತಿರುವ ‘ದಿಟ್ಟ ಮತ್ತು ನಿರ್ಣಾಯಕ’ ಪ್ರಯತ್ನಗಳನ್ನು ಪ್ರಶಂಸೆ ಮಾಡಿ ಇತ್ತೀಚಿಗೆ ಕಾಶ್ಮೀರದ ಎಲ್ಲ ರಾಜಕೀಯ ನಾಯಕರನ್ನು ಮಾತುಕತೆ ಕರೆದಿದ್ದು ನಿದರ್ಶನೀಯ ಎಂದು ಹೇಳಿದ್ದಾರೆ. ಪತ್ರಕ್ಕೆ ಸಹಿ ಹಾಕಿರುವ ಅಧಿಕಾರಿಗಳಲ್ಲಿ 10 ಜನ ಪೊಲೀಸ ಮಹಾ ನಿರ್ದೇಶಕರಾಗಿ ಕೆಲಸ ಮಾಡಿದ್ದು, 1950 ರಲ್ಲಿ ಗಣತಂತ್ರವೆನಿಸಿಕೊಂಡ ನಂತರ ಭಾರತದ ಒಕ್ಕೂಟದಲ್ಲಿ ಕಾಶ್ಮಿರವನ್ನು ಸೇರಿಸುವ ಕೆಲಸ ಅಪೂರ್ಣವಾಗಿ ಉಳಿದಿತ್ತು ಎಂದು ಪತ್ರದಲ್ಲಿ ಹೇಳಿದ್ದಾರೆ.

ಏಳು ವರ್ಷಗಳ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಸಂಕೀರ್ಣ ಕಾಶ್ಮೀರ್ ಸಮಸ್ಯೆಯನ್ನು ಬಗೆಹರಿಸುವೆಡೆ ಅವರು ಮಾಡುತ್ತಿದ್ದ ‘ಶ್ರಮದಾಯಕ, ದಿಟ್ಟ ಮತ್ತು ನಿರ್ಣಾಯಕ’ ಪ್ರಯತ್ನಗಳು ಎಲ್ಲರ ಗಮನಕ್ಕೆ ಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಈ ಗುರಿಯನ್ನು ಸಾಧಿಸಲು ಕೇಂದ್ರ ಸರ್ಕಾರ ಮಾಡಿರುವ ಪ್ರಯತ್ನಗಳು ರಾಷ್ಟ್ರ ಗರ್ವದ ವಿಷಯವಾಗಿದೆ, ಸಂವಿಧಾನದ 35 ಎ ಮತ್ತು 370 ನೇ ವಿಧಿಯನ್ನು ರದ್ದು ಮಾಡುವ ಅಭೂತಪೂರ್ವ ಮತ್ತು ಐತಹಾಸಿಕವ ನಿರ್ಣಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಯಿತು ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಯಾವುದೇ ನಷ್ಟವಾಗದಂತೆ ಅಗತ್ಯವಿದ್ದ ಎಲ್ಲ ಮುನ್ನೆಚ್ಚರಿಕೆ ಕ್ರಮಮಗಳನ್ನು ತೆಗೆದುಕೊಳ್ಳಲಾಯಿತು,’ ಎಂದು ಪತ್ರದಲ್ಲಿ ಹೇಳಲಾಗಿದೆ.

ಕಾಶ್ಮೀರದ ನಾಗರಿಕ ಈಗ ಬಹಳ ಹೆಮ್ಮೆಯಿಂದ ತಾನೊಬ್ಬ ಅಥವಾ ತಾನೊಬ್ಬಳು ಭಾರತೀಯ ಪ್ರಜೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ದೇಶದ ಇತರ ರಾಜ್ಯಗಳ ಜನರು ಪಡೆಯುವ ಸೌಲಭ್ಯಗಳು ಅಲ್ಲಿನ ಜನರಿಗೆ ಸಿಗಲಿವೆ ಎಂದು ಅಧಿಕಾರಿಗಳು ಬರೆದಿದ್ದಾರೆ.

ಆಗಸ್ಟ್ 5,2019ರಂದು, ಜಮ್ಮು ಮತ್ತು ಕಾಶ್ಮೀರ್​ಗೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ನಂತರ ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳನ್ನು ಮುಂದಾಲೋಚಿಸಿ ಅಪರಾಧಗಳನ್ನು, ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ಮೂಲಗೊಳಿಸುವ ಜೊತೆಗೆ ಕಣಿವೆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಯಲ್ಲಿಟ್ಟಿರುವುದು ಮನಸ್ಸಿನಲ್ಲಿ ಸಂತೃಪ್ತ ಭಾವನೆಯನ್ನು ಮೂಡಿಸುತ್ತದೆ ಎಂದು ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.

ಕಾಶ್ಮೀರದ ವಿಷಯದಲ್ಲಿ ಪದೇಪದೆ ಮೂಗು ತೂರಿಸುತ್ತಿದ್ದ ಪಾಕಿಸ್ತಾನವನ್ನು ಹದ್ದುಬಸ್ತಿನಲ್ಲಿಟ್ಟು ಸರ್ಕಾರ ತನ್ನ ಯೋಜನೆಯನ್ನು ನಂಬಲಸದಳ ರೀತಿಯಲ್ಲಿ ಜಾರಿಗೊಳಿಸಿತು ಎಂದು ಪತ್ರದಲ್ಲಿ ಹೇಳಲಾಗಿದೆ. ಎಲ್ಲಕ್ಕಿಂತ ಆಸಕ್ತಿದಾಯಕ ಸಂಗತಿಯೆಂದರೆ, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಪುನರ್​ಕಲ್ಪಿಸುವಂತೆ ಹೇಳುತ್ತಿದೆ, ಇದರರ್ಥ ಅದು ಜಮ್ಮು ಮತ್ತು ಕಾಶ್ಮೀರವನ್ನು ಬಾರತದ ಭಾಗವೆಂದು ಒಪ್ಪಿಕೊಂಡಿದೆ,’ ಎಂದು ಪತ್ರದಲ್ಲಿ ಬರೆಯಲಾಗಿದೆ

ಹಲವಾರು ಐರೋಪ್ಯ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆ ಕಾಶ್ಮೀರದ ವಿಷಯದಲ್ಲಿ ತಲೆಹಾಕಿ ಹೇರುತ್ತಿದ್ದ ಬಾಹ್ಯ ಒತ್ತಡವನ್ನು ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ಅಯೋಜಿಸಿದ ವ್ಯವಸ್ಥೆ ಆಸಾಧಾರಣವಾಗಿತ್ತು ಎಂದು ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.

‘ಹೊರಗಿನ ಈ ಶಕ್ತಿಗಳು ಜಮ್ಮು ಮತ್ತು ಕಾಶ್ಮೀರ್​ನಲ್ಲಿ ಪ್ರಸ್ತುತವಾಗಿ ಜಾರಿಯಲ್ಲಿರುವ ವ್ಯವಸ್ಥೆ ಮೇಲೆ ಹೇಳಿಕೊಳ್ಳುವಂಥ ಯಾವುದೇ ಪ್ರಭಾವ ಬೀರಲು ವಿಫಲವಾದವು. ತಮ್ಮ ಆಯ್ಕೆಯ ಕೆಲವು ಮಾಧ್ಯಮಗಳಲ್ಲಿ ಆಗಾಗ ಕಾಣಿಸಿಕೊಳ್ಳವುದನ್ನು ಬಿಟ್ಟರೆ ಬೇರೇನೂ ಅವುಗಳಿಗೆ ಮಾಡುವುದು ಸಾಧ್ಯವಾಗಲಿಲ್ಲ. ಈಗ ಹೆಚ್ಚು ಕಡಿಮೆ ಎರಡು ವರ್ಷಗಳು ಸಂದಿದ್ದು, ಜಮ್ಮು ಮತ್ತು ಕಾಶ್ಮೀರ ಭಾರತ ಒಕ್ಕೂಟದ ಭಾಗವೆಂಬ ಮುದ್ರೆ ಬಿದ್ದಾಗಿದೆ,’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಶ್ಮೀರ್ ರಾಜಕೀಯ ಪಕ್ಷಗಳೊಂದಿಗೆ ಬಾಂಧವ್ಯ ಮತ್ತು ವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ‘ದಿಲ್ ಕಿ ದೂರಿ’ (ಹೃದಯಗಳ ನಡುವಿನ ಅಂತರ) ಮತ್ತು ‘ದಿಲ್ಲಿ ಕಿ ದೂರಿ’ (ದೆಹಲಿಯಿದ ಇರುವ ಅಂತರ) ಎಂಬ ಅವಳಿ ಅಂಶಗಳನ್ನು ಕಡೆಗಾಣಿಸಿಲಲು ಕೇಂದ್ರ ಸರ್ಕಾರದ ಇತ್ತೀಚಿಗೆ ಅನು ಸರಿಸಿದ ಕ್ರಮ ಅನುಕರಣೀಯ ಮತ್ತು ನೀತಿ ರೂಪಿಸುವಲ್ಲಿ ಕ್ರಿಯಾತ್ಮಕ ಧೋರಣೆಯನ್ನು ಪ್ರತಿಬಿಂಬಿಸುತ್ತದೆ, ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ್​ನಲ್ಲಿ ಹೂಡಿಕೆ ಯೋಜನೆಗಳು ಅಂತಿಮಗೊಂಡಿದ್ದು ಅಲ್ಲಿ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಅಂತ ನೀಡಿದ ಭರವಸೆಯನ್ನು ಈಡೇರಿಸುತ್ತೀರಿ ಎಂಬ ನಿರೀಕ್ಷೆ ನಮಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಪತ್ರಕ್ಕೆ ಸಹಿ ಹಾಕಿರುವ ನಿವೃತ್ತ ಅಧಿಕಾರಗಳಲ್ಲಿ ಎಕೆ ಸಿಂಗ್ (ಐಪಿಎಸ್, ಗುಜರಾತ್, 1985), ಬದ್ರಿ ಪ್ರಸಾದ್ ಸಿಂಗ್ (ಐಪಿಎಸ್, ಉತ್ತರ ಪ್ರದೇಶ, 1990), ಗೀತಾ ಜೋಹ್ರಿ (ಐಪಿಎಸ್ ಗುಜರಾತ್, 1982), ಕೆ ಅರವಿಂದ ರಾವ್ (ಐಪಿಎಸ್, ಆಂಧ್ರಪ್ರದೇಶ, 1977), ಕೆ ರಾಜೇಂದ್ರ ಕುಮಾರ್ (ಐಪಿಎಸ್, ಜಮ್ಮು ಮತ್ತು ಕಾಶ್ಮೀರ, 1984), ಕೆಬಿ ಸಿಂಗ್ (ಐಪಿಎಸ್, ಒಡಿಶಾ, 1985), ಎಂ ನಾಗೇಶ್ವರ ರಾವ್ (ಐಪಿಎಸ್, ಒಡಿಶಾ, 1986), ಪಿಪಿ ಪಾಂಡೆ (ಐಪಿಎಸ್, ಗುಜರಾತ್, 1982), ಪ್ರಕಾಶ್ ಮಿಶ್ರಾ (ಐಪಿಎಸ್, ಒಡಿಶಾ , 1977) ಸೇರಿದ್ದಾರೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರದದಂದು ಸರ್ವಪಕ್ಷಗಳ ಸಭೆಯೊಂದನ್ನು ನಡೆಸಿ ಈಗ ಜಮ್ಮು ಮತ್ತು ಕಾಶ್ಮೀರ್​ನಲ್ಲಿ ಜಾರಿಯಲ್ಲಿರುವ ಪುನರ್ವಿಂಗಡಣಾ ಪ್ರಕ್ರಿಯೆ ಬೇಗ ಕೊನೆಗೊಂಡರೆ ಚುನಾವಣೆಗಳನ್ನು ನಡೆಸಬಹುದು ಮತ್ತು ಜನರಿಂದ ಆಯ್ಕೆಯಾಗುವ ಸರ್ಕಾರ ರಾಜ್ಯದ ಪ್ರಗತಿ ಪಥಕ್ಕೆ ಮತ್ತಷ್ಟು ಶಕ್ತಿ ನೀಡಲಿದೆ ಎಂದು ಹೇಳಿದರು.

ಮೂಲಗಳ ಪ್ರಕಾರ ಮೋದಿ ಅವರು ‘ದಿಲ್ಲಿ ಕಿ ದೂರಿ’ ಮತ್ತು ‘ದಿಲ್​ ಕೀ ದೂರಿ’ ಈ ಎರಡನ್ನು ದೂರ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರುಸ್ಥಾಪನೆ ಆಗುವವರೆಗೂ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ: ಮೆಹಬೂಬಾ ಮುಫ್ತಿ