News 9 Plus World Exclusive: 1993 ಭಾರತ ಕಂಡ ಮೊದಲ ಭಯೋತ್ಪಾದನಾ ದುರಂತ- ವಿಕ್ರಂ ಸೂದ್

|

Updated on: Mar 12, 2023 | 7:00 AM

ಡಿಸೆಂಬರ್ 1992 ರಲ್ಲಿ ಬಾಬರಿ ಧ್ವಂಸವು ಪ್ರಚೋದನೆಗೆ ಕಾರಣವಾಯಿತು. ನಂತರ ನಾವು ಜನವರಿ 1993 ರಲ್ಲಿ ಗಲಭೆಗಳನ್ನು ನೋಡಿದ್ದೆವು. ಎರಡು ತಿಂಗಳ ನಂತರ, ಮಾರ್ಚ್‌ನಲ್ಲಿ, ಸರಣಿ ಸ್ಫೋಟಗಳಿಂದ ನಗರವು ತತ್ತರಿಸಿತು.

News 9 Plus World Exclusive: 1993 ಭಾರತ ಕಂಡ ಮೊದಲ ಭಯೋತ್ಪಾದನಾ ದುರಂತ- ವಿಕ್ರಂ ಸೂದ್
Vikram Sood
Image Credit source: News 9
Follow us on

ಭಾರತ ಕಂಡ ಭಯಾನಕ ಬಾಂಬ್ ಸ್ಫೋಟದಲ್ಲಿ ಒಂದಾದ 1993 ಮುಂಬೈ ಸರಣಿ ಬಾಂಬ್ ಸ್ಫೋಟವನ್ನು (1993 Mumbai Bomb Blast) ದೇಶ ಇಂದಿಗೂ ಮರೆತಿಲ್ಲ. ಇಂತಹ ಒಂದು ಘೋರ ಕೃತ್ಯಕ್ಕೆ ಅಂದು ಭಾರತೀಯರು ಬಲಿಯಾಗದರು, ಜೊತೆಗೆ ದೇಶದ ಆರ್ಥಿಕತೆ ಕುಸಿಯಲು ಈ ಘಟನೆ ಕಾರಣವಾಯಿತು. 1993 ಮುಂಬೈ ಸರಣಿ ಸ್ಪೋಟದ ಕುರಿತು News 9 ಜೊತೆ ಮಾತನಾಡಿದ ಭಾರತದ ವಿದೇಶಿ ಗುಪ್ತಚರ ಸಂಸ್ಥೆಯ ( India’s foreign intelligence agency) ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (RAW) ಮಾಜಿ ಮುಖ್ಯಸ್ಥ ವಿಕ್ರಂ ಸೂದ್ (Vikram Sood) ಈ ಕೆಳಗಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮಾರ್ಚ್ 12, 1993 ರಂದು 12 ಬಾಂಬ್ ಸ್ಫೋಟಗಳ ಸರಣಿಯು ಬಾಂಬೆಯನ್ನು ಬೆಚ್ಚಿಬೀಳಿಸಿತು. ಕಾಲಘಟ್ಟವನ್ನು ನೆನಪಿನಲ್ಲಿಟ್ಟುಕೊಂಡು ಮಾತನಾಡುವುದಾದರೆ ಡಿಸೆಂಬರ್ 1992 ರಲ್ಲಿ ಬಾಬರಿ ಮಸೀದಿ ಧ್ವಂಸವು ಪ್ರಚೋದನೆಗೆ ಕಾರಣವಾಯಿತು. ನಂತರ ನಾವು ಜನವರಿ 1993 ರಲ್ಲಿ ಗಲಭೆಗಳನ್ನು ನೋಡಿದ್ದೆವು. ಎರಡು ತಿಂಗಳ ನಂತರ, ಮಾರ್ಚ್‌ನಲ್ಲಿ, ಸರಣಿ ಸ್ಫೋಟಗಳಿಂದ ನಗರವು ತತ್ತರಿಸಿತು.

ಅಂದಿನ ಸರಣಿ ಸ್ಫೋಟ ಎಲ್ಲರನ್ನೂ ಬೆಚ್ಚಿಬೀಳಿಸಿತು. ಯಾರಿಗೂ ಸಣ್ಣ ಸುಳಿವೂ ಇದ್ದಂತಿರಲಿಲ್ಲ. RAW, ಗೃಹ ಕಚೇರಿ ಅಥವಾ ಸಚಿವಾಲಯ ಯಾವುದಕ್ಕೂ ಈ ಸ್ಪೋಟದ ಸುಳಿವು ಇರಲಿಲ್ಲ. ಬಾಂಬೆ ಅಥವಾ ಮಹಾರಾಷ್ಟ್ರ ಪೊಲೀಸರಿಗೆ ಇದರ ಕಲ್ಪನೆ ಕೂಡ ಇರಲಿಲ್ಲ. ಹಾಗಾಗಿ ಆ ಭಯೋತ್ಪಾದನೆಯ ಪ್ರಭಾವಕ್ಕೆ ಎಲ್ಲರೂ ತತ್ತರಿಸಿದರು. ನನ್ನ ದೃಷ್ಟಿಯಲ್ಲಿ ಇತಂಹ ಭಯೋತ್ಪಾದನಾ ದುರಂತ ನಮ್ಮ ಮೊದಲ ಅನುಭವವಾಗಿತ್ತು.

ಕೆಲವರು ಮಾರ್ಚ್ ಘಟನೆಗಳನ್ನು ಜನವರಿಯ ಗಲಭೆಗಳಿಗೆ ಸಮೀಕರಿಸುತ್ತಾರೆ. ವಾಸ್ತವವಾಗಿ, ಇದು ಹೆಚ್ಚು ಮುಂಚಿತವಾಗಿ ಪ್ಲಾನ್ ಮಾಡಲಾಗಿತ್ತು ಎಂದು ನಾನು ಭಾವಿಸುತ್ತೇನೆ. ಮಾರ್ಚ್ 12, 1993 ರ ದಾಳಿ ಜನವರಿ ಗಲಭೆಯ ನಂತರ ಪ್ಲಾನ್ ಮಾಡಿದ್ದಲ್ಲ. ಇಂತಹ ದಾಳಿಗೆ ತಯಾರಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಗಲಭೆಗಳನ್ನು ನಡೆಯದೆ ಇದ್ದಿದ್ದರೂ ಈ ದಾಳಿ ಖಂಡಿತವಾಗಿಯೂ ನಡೆಯುತ್ತಿತ್ತು. RAW ಅಥವಾ MI6 ಅಥವಾ ಇತರ ಸಾಮಾನ್ಯ ಗುಪ್ತಚರ ಸಂಸ್ಥೆಯಂತಲ್ಲ ಪಾಕಿಸ್ತಾನದ ISI!

ISI ರಾಜ್ಯದೊಳಗೆ ಇರುವ ಒಂದು ಸಂಸ್ಥೆಯಲ್ಲ. ಅವರೇ ಒಂದು ರಾಜ್ಯ. ISI ಬಯಸಿದಂತೆ ಮಾಡುತ್ತಾರೆ. ಅವರಿಗೆ ಈ ಬಾಂಬೆ ಬಾಂಬ್ ಸ್ಫೋಟವನ್ನು ಮಾಡಲು ಪ್ರಧಾನಿಯ ಅನುಮೋದನೆಯ ಅಗತ್ಯವಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಬಹುಶಃ ಸ್ವಂತ ನಿರ್ಧಾರದಿಂದ ಈ ದಾಳಿಯನ್ನು ಮಾಡಿದ್ದಾರೆ. ಅವರು ಯಾರ ಬಳಿಯಾದರೂ ಸಮಾಲೋಚಿಸಿದ್ದರೆ ಬೇಡ ಎಂದು ಯಾವೊಬ್ಬ ರಾಜಕಾರಣಿಯಾದರೂ ತಡೆಯುತ್ತಿದ್ದರು. ಅವರು ಮಾಡಬಹುದೆಂದು ತಿಳಿದಿದ್ದರೆ, ಬಹುಶಃ ಪರಿಣಾಮ ಇಷ್ಟು ಭೀಕರವಾಗಿರುತ್ತಿರಲಿಲ್ಲ

ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಮಾಜಿ ಗುಪ್ತಚರ ಅಧಿಕಾರಿ ಬಿ.ರಾಮನ್ ಅವರು ವಿಶ್ವ ವಾಣಿಜ್ಯ ಕೇಂದ್ರದ ದಾಳಿಯ ಅಧ್ಯಯನವನ್ನು ಮಾಡಿ 1993 ದಾಳಿ ಅದರ ಪುನರಾವರ್ತನೆಯ ಸಾಧ್ಯತೆಯನ್ನು ವ್ಯಕ್ತಪಡಿಸಿದರು. ಅದರ ಹೊರತಾಗಿ, ಯಾವುದೇ ಪುರಾವೆಗಳಿರಲಿಲ್ಲ. ಆದರೂ ಬಂಧಿಸಿದ ಭಯೋತ್ಪಾದಕರ ಪಾಸ್‌ಪೋರ್ಟ್‌ಗಳು, ವೀಸಾಗಳು ಮತ್ತು ಛಾಯಾಚಿತ್ರಗಳಿಂದ ಪಾಕಿಸ್ತಾನ ಭಾಗಿಯಾಗಿರುವುದು ಖಚಿತವಾಯಿತು. ನಮ್ಮಲ್ಲಿ ಸಾಕಷ್ಟು ಮಾಹಿತಿ ಮತ್ತು ದಾಖಲೆಗಳು ಇದ್ದವು. ಇದಲ್ಲದೆ ನಾವು ಪಾಕಿಸ್ತಾನದ ಆರ್ಡಿನೆನ್ಸ್ ಫ್ಯಾಕ್ಟರಿಗಳ (ಪಿಒಎಫ್) ಗುರುತುಗಳನ್ನು ಹೊಂದಿರುವ ಡಿಟೋನೇಟರ್ ಅನ್ನು ಸಹ ವಶಪಡಿಸಿಕೊಂಡಿದ್ದೆವು. ಇದನ್ನು ಪರಿಶೀಲಿಸಲು ನಾವು ಅಮೆರಿಕಾಗೆ ಕಳಿಸಿದಾಗ ಅದನ್ನು ಅವರೇ ಕಳುಹಿಸಿದ್ದು ಎಂದು ನಮ್ಮ ಬಳಿ ಒಪ್ಪಿಕೊಂಡರೂ, ಜಗತ್ತಿಗೆ ಹೇಳುಲು ಹಿಂದೇಟು ಹಾಕಿದರು.  ತದನಂತರ ನಾವು ಡಿಟೋನೇಟರ್ ಅನ್ನು ಮರಳಿ ಕೇಳಿದಾಗ. ಇದು ತಪ್ಪಾಗಿ ಮುರಿದುಹೋಗಿದೆ ಎಂದು ಸಾಕ್ಷ್ಯವನ್ನು ನಾಶಪಡಿಸಿದರು. ಇದು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಮಗೆ ಅಮೆರಿಕ ಮಾಡಿದ ಸಹಾಯ.

ಪಾಕಿಸ್ತಾನ ಬಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟಿದೆ ಎಂದು ತೋರಿಸುವದು ಅಮೇರಿಕಾಗೆ  ಇಷ್ಟವಿರಲಿಲ್ಲ ಎಂಬುದು ಸ್ಪಷ್ಟವಾಯಿತು. ಸಾಕ್ಷ್ಯವನ್ನು ನಾಶ ಮಾಡುವ ಮಟ್ಟಿಗೆ ಅಮೇರಿಕಾ ಪಾಕಿಸ್ತಾನವನ್ನು ರಕ್ಷಿಸಲು ಮುಂದಾಗಿತ್ತು. 1990 ರ ದಶಕದಲ್ಲಿ ನಮಗೆ ಕಾಶ್ಮೀರದಲ್ಲಿ ತೊಂದರೆಗಳು ಇದ್ದಾಗ, ಅಮೇರಿಕಾ ಪಾಕಿಸ್ತಾನಕ್ಕೆ ಬುದ್ದಿ ಹೇಳುವ ಬದಲು ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ನಡೆಸುತ್ತಿದ್ದೇವೆ ಎಂದು ಭಾರತವನ್ನು ಆರೋಪಿಸಿತು.

ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಚಟುವಟಿಕೆಗಳನ್ನು ಮಾಡಲು ಅಮೇರಿಕಾ ನಮಗೆ ಹೆಚ್ಚು ಬಿಡುತ್ತಿರಲಿಲ್ಲ. ಭಾರತೀಯ ಪಡೆಗಳ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನು ಮಾಡಿತು. ಆದ್ದರಿಂದ ಇದು ನಿಸ್ಸಂಶಯವಾಗಿ ಒಬ್ಬರ ವಿರುದ್ಧ ಇನ್ನೊಬ್ಬರನ್ನು ರಕ್ಷಿಸುವ ಪ್ರಕರಣವಾಗಿದೆ.

ಅಫ್ಘಾನ್ ಮುಜಾಹಿದ್ದೀನ್ ವಿರುದ್ಧ ಹೋರಾಡಲು ಮತ್ತು ಅಫ್ಘಾನಿಸ್ತಾನದಿಂದ ಸೋವಿಯತ್ ಒಕ್ಕೂಟವನ್ನು ತೆಗೆದುಹಾಕಲು ಪಾಕಿಸ್ತಾನವು ಅಮೆರಿಕನ್ನರಿಗೆ ಸಹಾಯ ಮಾಡಿತ್ತು. ಆದ್ದರಿಂದ ಅಮೇರಿಕಾ ಪಾಕಿಸ್ತಾನಕ್ಕೆ ಸಹಾಯ ಹಿಂದಿರುಗಿಸಬೇಕಿತ್ತು. ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಅಮೇರಿಕಾ ಹೇಳಿತ್ತು. ಆದ್ದರಿಂದ ನಾವು ಅಂದು ಒಂಟಿಯಾಗಿ ಈ ಹೋರಾಟ ನಡೆಸಬೇಕಾಯಿತು. ದಾವೂದ್ ಇಬ್ರಾಹಿಂ 1993 ಸರಣಿ ಸ್ಪೋಟದಲ್ಲಿ ಭಾಗಿಯಾಗಿದ್ದನ್ನು ನಾವು ಅಮೆರಿಕಾಗೆ ಮನವರಿಕೆ ಮಾಡಲಾಗಲಿಲ್ಲ. 

27 ವರ್ಷಗಳ ಕಾಲ ಉರಿಯುತ್ತಿದ್ದ ಪ್ರತೀಕಾರವನ್ನು ನಾವು ಮೊದಲ ಬಾರಿಗೆ ‘ಉರಿ ಸರ್ಜಿಕಲ್ ಸ್ಟ್ರೈಕ್ ‘ ಮೂಲಕ ತೀರಿಸಿಕೊಂಡಿದ್ದೇವೆ. ಇದಾದ ನಂತರ ಬಾಲಾಕೋಟ್​ ದಾಳಿ ಮಾಡಿದೆವು. ಸಾವುನೋವುಗಳನ್ನು ಮರೆತುಬಿಡಿ, ಸಂಖ್ಯೆಗಳನ್ನು ಮರೆತುಬಿಡಿ. ನಮ್ಮ ಸುದ್ದಿಗೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಈ ದಾಳಿ ಸಾರಿತ್ತು.

ಆದರೆ ಇಂದು ನಾವು ಇಲ್ಲಿ 1993 ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಜಾವೇದ್ ನಾಸಿರ್ ಅನ್ನು ಹುಡುಕಿ, ನ್ಯಾಯ ಕೊಡಿ ಎಂದರೇ ಯಾರು ಆ ಕೂಗನ್ನು ಕೇಳುವುದಿಲ್ಲ. ನಾಸಿರ್ ಅನ್ನು ಹುಡುಕುವುದಿಲ್ಲ. ಇಂದಿಗೂ ಪಾಕಿಸ್ತಾನ ತಾನು ಮಾಡಿದ ದಾಳಿಗಳನ್ನು ಒಪ್ಪಿಕೊಳ್ಳುವುದಿಲ್ಲ. ಅದು ಪುಲ್ವಾಮಾ ಅಟ್ಯಾಕ್ ಆಗಿರಬಹುದು, ಪಠಾಣ್‌ಕೋಟ್‌ ದಾಳಿಯಾಗಿರಬಹುದು. ಇಂದು ನಾವು ನಿರ್ಧಾರ ಮಾಡಬೇಕಿದೆ ಒಂದಾ ನಾವು ಅವರನ್ನು ಹೊಡೆಯಬೇಕು ಇಲ್ಲದಿದ್ದರೆ ಅವರು ಬಂದು ನಮ್ಮ ಭಾರತೀಯರನ್ನು ಕೊಲ್ಲುತ್ತಾರೆ. ಇದೀಗ ನಾವು ಸರ್ಜಿಕಲ್ ಸ್ಟ್ರೈಕ್ ಮಾಡಿ ಒಂದು ಒಳ್ಳೆಯ ಸಂದೇಶವನ್ನು ಪಾಕಿಸ್ತಾನಕ್ಕೆ ಕಳಿಸಿದ್ದೇವೆ.

ಮಾಜಿ ಮುಖ್ಯಸ್ಥ ವಿಕ್ರಂ ಸೂದ್ 1993 ಸ್ಪೋಟವಾದಾಗ ಭಾರತ ಎಷ್ಟು ನಲುಗಿ ಹೋಗಿತ್ತು, ಮತ್ತು ನಮ್ಮ ದೇಶ ಹೇಗೆ ಅದನ್ನು ಎದುರಿಸುತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಸೂದ್ ನೀಡಿದ ಮಾಹಿತಿಯಲ್ಲಿ ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡದಿದ್ದರೆ ಅವರು ಮತ್ತೆ ಮತ್ತೆ ದಾಳಿ ಮಾಡುತ್ತಲೇ ಇರುತ್ತಾರೆ ಎಂಬುದು ಖಚಿತವಾಗುತ್ತದೆ.