2000ರಂದು ಕೆಂಪು ಕೋಟೆ ಮೇಲೆ ದಾಳಿ: ಉಗ್ರ ಮೊಹಮ್ಮದ್ ಆರಿಫ್ ಮರಣ ದಂಡನೆ ಎತ್ತಿಹಿಡಿದ ಸುಪ್ರೀಂ
2000ರಂದು ಕೆಂಪು ಕೋಟೆಯಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷರ್-ಎ-ತೊಯ್ಬಾ ಉಗ್ರ ಮೊಮಮ್ಮದ್ ಆರಿಫ್ ವಿಧಿಸಲಾಗಿದ್ದ ಮರಣ ದಂಡನೆಯನ್ನು ಸುಪ್ರಿಂ ಕೋರ್ಟ್ ಇಂದು (ಗುರುವಾರ) ದೃಢಪಡಿಸಿದೆ. ತನ್ನ ಅಪರಾಧ ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮರುಶೀಲನಾ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿ ಆದೇಶ ನೀಡಿದೆ.
ದೆಹಲಿ: ಇಬ್ಬರು ಸೇನಾಧಿಕಾರಿಗಳ ಸೇರಿದಂತೆ ಮೂವರು ಸಾವಿಗೆ ಕಾರಣವಾದ 2000ರಂದು ಕೆಂಪು ಕೋಟೆಯಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷರ್-ಎ-ತೊಯ್ಬಾ ಉಗ್ರ ಮೊಮಮ್ಮದ್ ಆರಿಫ್ ವಿಧಿಸಲಾಗಿದ್ದ ಮರಣ ದಂಡನೆಯನ್ನು ಸುಪ್ರಿಂ ಕೋರ್ಟ್ ಇಂದು (ಗುರುವಾರ) ದೃಢಪಡಿಸಿದೆ. ತನ್ನ ಅಪರಾಧ ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮರುಶೀಲನಾ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿ ಆದೇಶ ನೀಡಿದೆ.
ಕೆಂಪುಕೋಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ತನಿಖೆ ನಡೆಸಿದ್ದು, ಇದೀಗ ಈ ಬಗ್ಗೆ ಯಾವುದೇ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಈ ಅಪರಾಧ ಬಗ್ಗೆ ಎಲ್ಲ ಸಾಕ್ಷಿಗಳು ಸಾಬೀತಾಗಿದ್ದು ಮರುಪರಿಶೀಲನೆ ಮಾಡುವ ಅಗತ್ಯವಿಲ್ಲ ಈ ಅರ್ಜಿಯನ್ನು ನಾವು ತಿರಸ್ಕರಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮರುಶೀಲನಾ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಯುಯು ಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡು ಪೀಠವು ವಿಚಾರಣೆ ನಡೆಸಿತ್ತು.
ಘಟನೆಯ ಹಿನ್ನಲೆ
ಡಿಸೆಂಬರ್ 22, 2000 ರಂದು ರಾಷ್ಟ್ರ ರಾಜಧಾನಿಯಲ್ಲಿರುವ ಕೆಂಪು ಕೋಟೆಯ ಮೇಲೆ ಉಗ್ರ ಸಂಘಟನೆಯಾದ ಲಕ್ಷರ್-ಎ-ತೊಯ್ಬಾ ಉಗ್ರರರು ಮನಸ್ಸಿಗೆ ಬಂದಂತೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಸೇನಾ ಜವಾನರು ಮತ್ತು ಒಬ್ಬ ನಾಗರಿಕ ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡರು. ದಾಳಿ ನಡೆದ ಮೂರು ದಿನಗಳ ನಂತರ ಆರಿಫ್‌ನನ್ನು ಬಂಧಿಸಲಾಗಿತ್ತು.
ಮೊದಲ ವಿಚಾರಣೆಯನ್ನು ಅಕ್ಟೋಬರ್ 24, 2005 ರಂದು ಅವರನ್ನು ಅಪರಾಧಿ ಎಂದು ಘೋಷಿಸಿತು ಮತ್ತು ಅಕ್ಟೋಬರ್ 31, 2005 ರಂದು ಅವರಿಗೆ ಮರಣದಂಡನೆ ವಿಧಿಸಿತು. ಈ ನಿರ್ಧಾರದ ವಿರುದ್ಧ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು, ಇದು ಸೆಪ್ಟೆಂಬರ್ 13, 2007 ರಂದು ಆದೇಶದ ಮೂಲಕ ಅವರ ಅಪರಾಧ ಮತ್ತು ಮರಣದಂಡನೆಯನ್ನು ಎತ್ತಿಹಿಡಿಯಿತು.
ಆರಿಫ್ ಅವರು ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ, ಆದರೆ ಹೈಕೋರ್ಟ್ ತನ್ನ ಮರಣದಂಡನೆ ತೀರ್ಪನ್ನು ಎತ್ತಿಹಿಡಿದಿದೆ. ಆದರೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾದ ಇತರ ಆರು ಮಂದಿಯನ್ನು ಖುಲಾಸೆಗೊಳಿಸಿದೆ. ಆಗಸ್ಟ್ 10, 2011 ರಂದು ಅಪರಾಧದ ವಿರುದ್ಧ ಅವರು ಸಲ್ಲಿಸಿದ ಮೇಲ್ಮನವಿಯನ್ನು ತಿರಸ್ಕರಿಸಿದ ದೇಶದ ಉನ್ನತ ನ್ಯಾಯಾಲಯವು, ಮೇಲ್ಮನವಿದಾರನು ವಿದೇಶಿ ಪ್ರಜೆಯಾಗಿದ್ದು, ಯಾವುದೇ ಅನುಮತಿ ಅಥವಾ ಸಮರ್ಥನೆ ಇಲ್ಲದೆ ಭಾರತಕ್ಕೆ ಪ್ರವೇಶಿಸಿ, ವಂಚನೆ ಮತ್ತು ವಿವಿಧ ಕೃತ್ಯಗಳನ್ನು ಮಾಡುವ ಮೂಲಕ ಪಿತೂರಿಯನ್ನು ಮಾಡಿದ್ದಾರೆ ಎಂದು ಹೇಳಲಾಗಿತ್ತು.
ಭಾರತದ ವಿರುದ್ಧ ಯುದ್ಧ ಮಾಡುವ ಪಿತೂರಿಯನ್ನು ಮುಂದುವರಿಸುವ ಇತರ ಅಪರಾಧಗಳು. ಭಾರತೀಯ ಸೇನೆಯ ಸೈನಿಕರ ಮೇಲೆ ಅಪ್ರಚೋದಿತ ದಾಳಿ ನಡೆಸುವ ಮೂಲಕ ಅಪರಾಧಿಗಳನ್ನು ಕೊಲೆಗಳನ್ನೂ ಎಸಗಿದ್ದಾನೆ ಎಂದು ಹೇಳಲಾಗಿದೆ. ಈ ಕೃತ್ಯ ಮಾಡಿದವರಿಗೆ ದೇಶದಲ್ಲಿ ಸ್ಥಾನವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಪ್ರಕರಣದ ವಿಚಿತ್ರ ಸನ್ನಿವೇಶದಲ್ಲಿ ಅಪರಾಧಿಗೆ ಮರಣದಂಡನೆ ಶಿಕ್ಷೆಯನ್ನು ನೀಡಬಹುದಿತ್ತು ಎಂದು ಹೇಳಿತ್ತು.
ಆದರೆ ಆರಿಫ್ ಮತ್ತೊಮ್ಮೆ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ, ಅದನ್ನು ಆಗಸ್ಟ್ 28, 2011 ರಂದು ತಿರಸ್ಕರಿಸಲಾಯಿತು. ಇದೀಗ ಆತನಿಗೆ ಮರಣದಂಡನೆ ನೀಡಬಹುದು ಎಂದು ಸುಪ್ರೀಂ ಹೇಳಿದೆ.
Published On - 11:47 am, Thu, 3 November 22