ಕೊವಿಡ್ ಲಸಿಕೆ ಅರ್ಹ ಜನಸಂಖ್ಯೆಯ ಶೇ 86 ಮಂದಿಗೆ 1ನೇ ಡೋಸ್ ನೀಡಲಾಗಿದೆ: ಕೇಂದ್ರ ಆರೋಗ್ಯ ಸಚಿವ

ಕೊವಿಡ್ ಲಸಿಕೆ ಅರ್ಹ ಜನಸಂಖ್ಯೆಯ ಶೇ 86 ಮಂದಿಗೆ 1ನೇ ಡೋಸ್ ನೀಡಲಾಗಿದೆ: ಕೇಂದ್ರ ಆರೋಗ್ಯ ಸಚಿವ
ಮನ್ಸುಖ್ ಮಾಂಡವಿಯಾ

Winter Session of Parliament ಲೋಕಸಭೆಯಲ್ಲಿ ಒಮಿಕ್ರಾನ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಮಾಂಡವಿಯಾ, ಅಧ್ಯಯನಗಳು ನಡೆಯುತ್ತಿವೆ ಮತ್ತು ಅವು ಪೂರ್ಣಗೊಂಡ ನಂತರವೇ ಕೊರೊನಾವೈರಸ್ ನ ಇತ್ತೀಚಿನ ರೂಪಾಂತರದ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವವು ತಿಳಿಯುತ್ತದೆ ಎಂದಿದ್ದಾರೆ.

TV9kannada Web Team

| Edited By: Rashmi Kallakatta

Dec 10, 2021 | 4:02 PM

ದೆಹಲಿ: ಕೊವಿಡ್ -19 ಲಸಿಕೆಗೆ (Covid-19 vaccine) ಅರ್ಹರಾಗಿರುವ ದೇಶದ ಜನಸಂಖ್ಯೆಯ ಶೇಕಡಾ 86 ರಷ್ಟು ಜನರು ಕೊವಿಡ್ ಮೊದಲ ಡೋಸ್ ಅನ್ನು ಪಡೆದಿದ್ದಾರೆ. ಎಲ್ಲರಿಗೂ ಶೀಘ್ರವಾಗಿ ಲಸಿಕೆ ಹಾಕಲು ಕೇಂದ್ರ ಸರ್ಕಾರ  ಬಯಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ(Mansukh Mandaviya) ಶುಕ್ರವಾರ ಹೇಳಿದ್ದಾರೆ.  ಪ್ರಸ್ತುತ ನಡೆಯುತ್ತಿರುವ ಸಂಸತ್​​ನ ಚಳಿಗಾಲದ ಅಧಿವೇಶನದಲ್ಲಿ (Winter Session of Parliament) ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಂಡವಿಯಾ, ವಿಶ್ವದಾದ್ಯಂತ ಡೋಸ್ ನಿರ್ವಹಣೆ ವಿಚಾರದಲ್ಲಿ ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸಿದೆ” ಎಂದು ಹೇಳಿದರು. ಅಮೆರಿಕದಲ್ಲಿ 70 ಪ್ರತಿಶತ ಜನರು ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ. ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಶೇಕಡಾ 72 ರಷ್ಟು ಜನರು ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ, ಸರ್ಕಾರವು ಶೇಕಡಾ 80 ರಷ್ಟು ಮೊದಲ ಡೋಸ್ ನೀಡಿಕೆ ಸಾಧಿಸಿದೆ. ಏತನ್ಮಧ್ಯೆ , ರಷ್ಯಾದಲ್ಲಿ ಮೊದಲ ಡೋಸ್ ನೀಡಿಕೆ ದರವು 46 ಪ್ರತಿಶತದಷ್ಟಿದೆ ಅವರು ಹೇಳಿದರು. ಒಟ್ಟು 7 ಕೋಟಿ ಲಸಿಕೆ ಡೋಸ್‌ಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇವೆ. ವ್ಯಾಕ್ಸಿನೇಷನ್ ನಂತರ ಆರೋಗ್ಯ ಸಮಸ್ಯೆಯಾಗುತ್ತದೆ ಎಂದು ಹೇಳಿ ಲಸಿಕೆ ಪಡೆಯದೇ ಇರುವ ಹಿಂಜರಿಕೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಜನರನ್ನು ಎಚ್ಚರಿಸಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 74.5 ಲಕ್ಷ ಡೋಸ್‌ಗಳನ್ನು ನೀಡುವುದರೊಂದಿಗೆ ವ್ಯಾಕ್ಸಿನೇಷನ್ ಕವರೇಜ್ 131 ಕೋಟಿ ಮೀರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಲೋಕಸಭೆಯಲ್ಲಿ ಒಮಿಕ್ರಾನ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಮಾಂಡವಿಯಾ, ಅಧ್ಯಯನಗಳು ನಡೆಯುತ್ತಿವೆ ಮತ್ತು ಅವು ಪೂರ್ಣಗೊಂಡ ನಂತರವೇ ಕೊರೊನಾವೈರಸ್ ನ ಇತ್ತೀಚಿನ ರೂಪಾಂತರದ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವವು ತಿಳಿಯುತ್ತದೆ ಎಂದಿದ್ದಾರೆ.

ಇಲ್ಲಿಯವರೆಗೆ  ಭಾರತವು ಒಮಿಕ್ರಾನ್ ರೂಪಾಂತರದ 23 ಪ್ರಕರಣಗಳನ್ನು ವರದಿ ಮಾಡಿದ್ದು ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ಗುರುವಾರ ರಾಜಸ್ಥಾನದ ಒಂಬತ್ತು ರೋಗಿಗಳು ಕೊವಿಡ್ -19 ಗೆ ನಕಾರಾತ್ಮಕ ಪರೀಕ್ಷೆ ಮಾಡಿದ ನಂತರ ಒಟ್ಟು ಪ್ರಕರಣಗಳ ಸಂಖ್ಯೆ 14 ಕ್ಕೆ ಇಳಿದಿದೆ. ಜಾಗತಿಕವಾಗಿ ಒಮಿಕ್ರಾನ್ ಪ್ರಕರಣಗಳು 2,300 ಕ್ಕಿಂತ ಹೆಚ್ಚಿವೆ.

ರೂಪಾಂತರದ ಹೆಚ್ಚಿದ ಹರಡುವಿಕೆಯ ಭಯದ ನಡುವೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಗುರುವಾರ ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ಸೇವೆಗಳ ನಿರ್ಬಂಧವನ್ನು ಮುಂದಿನ ವರ್ಷ ಜನವರಿ 31 ರವರೆಗೆ ವಿಸ್ತರಿಸಿದೆ.  ಈ ನಿರ್ಬಂಧವು ಡಿಜಿಸಿಎಯಿಂದ ನಿರ್ದಿಷ್ಟವಾಗಿ ಅನುಮೋದಿಸಲ್ಪಟ್ಟಿರುವ ಅಂತರಾಷ್ಟ್ರೀಯ ಎಲ್ಲಾ-ಸರಕು ಕಾರ್ಯಾಚರಣೆಗಳು ಮತ್ತು ಹಾರಾಟಕ್ಕೆ ಅನ್ವಯಿಸುವುದಿಲ್ಲ” ಎಂದು ಡಿಜಿಸಿಎ ಸುತ್ತೋಲೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:  ಒಮಿಕ್ರಾನ್ ಎಚ್ಚರಿಕೆ: ಜನವರಿ 31ರವರೆಗೆ ಪುನಾರಂಭವಾಗಲ್ಲ ಅಂತರರಾಷ್ಟ್ರೀಯ ವಿಮಾನಗಳು

Follow us on

Related Stories

Most Read Stories

Click on your DTH Provider to Add TV9 Kannada