ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿನ ಪ್ರಕರಣಗಳು ಕಡಿಮೆ ಮತ್ತು ಅದು ಸದ್ಯಕ್ಕೆ ಕಳವಳಕಾರಿ ರೂಪಾಂತರಿ ಅಲ್ಲ: ಡಾ ಸೌಮ್ಯ ಸ್ವಾಮಿನಾಥನ್

ಕೋವಿಷೀಲ್ಡ್ ಲಸಿಕೆಯು ಏಜೆನ್ಸಿಯ ಅನೊಮೋದನೆ ಪಡೆದುಕೊಳ್ಳುವಲ್ಲಿ ಯಶ ಕಾಣುವುದೇ ಎಂದು ಸುದ್ದಿಸಂಸ್ಥೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ ಸ್ವಾಮಿನಾಥನ್ ಅವರು ಆಗಸ್ಟ್ ಎರಡನೇ ವಾರದಲ್ಲಿ ಒಂದು ನಿರ್ಧಾರ ಹೊರ ಬೀಳಲಿದೆ ಎಂದು ಹೇಳಿದರು.

ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿನ ಪ್ರಕರಣಗಳು ಕಡಿಮೆ ಮತ್ತು ಅದು ಸದ್ಯಕ್ಕೆ ಕಳವಳಕಾರಿ ರೂಪಾಂತರಿ ಅಲ್ಲ: ಡಾ ಸೌಮ್ಯ ಸ್ವಾಮಿನಾಥನ್
ಡಾ ಸೌಮ್ಯ ಸ್ವಾಮಿನಾಥನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 02, 2021 | 12:55 AM

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಗೆ ಪ್ರಸ್ತುತವಾಗಿ ಕೊರೋನಾ ವೈರಸ್​ನ ಡೆಲ್ಟಾ ಪ್ಲಸ್ ರೂಪಾಂತರಿ ಒಂದು ಕಳವಳಕಾರಿ ರೂಪಾಂತರಿ ಆಗಿಲ್ಲ ಮತ್ತು ಅದರಿಂದ ಸೋಂಕಿಗೊಳಗಾಗಿರುವ ಪ್ರಕರಣಗಳ ಸಂಖ್ಯೆ ಬಹಳ ಕಮ್ಮಿಯಿದೆ ಎಂದು ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ ಸೌಮ್ಯ ಸ್ವಾಮಿನಾಥನ್​ ಅವರು ಗುರುವಾರ ಎನ್​ಡಿಟಿವಿಗೆ ತಿಳಿಸಿದ್ದಾರೆ. ಹಾಗೆಯೇ, ಕೆಲ ದೇಶಗಳು. ಕೋವಿಡ್-19 ಪಿಡುಗಿನ ಪ್ರಸಕ್ತ ಸಮಯದಲ್ಲಿ ಅಡೆತಡೆಯಿಲ್ಲದ ಪ್ರಯಾಣಕ್ಕೆ ಅನುವು ಮಾಡಿಕೊಡುವ ತಮ್ಮ ವ್ಯಾಕ್ಸೀನ್ ಪಾಸ್​ಪೋರ್ಟ್ ಕಾರ್ಯಕ್ರಮದಲ್ಲಿ ಕೋವಿಷೀಲ್ಟ್​ ಲಸಿಕೆಯನ್ನು ಬ್ಲಾಕ್​ ಮಾಡುತ್ತಿರುವ ವಿಷಯ ತರ್ಕಕ್ಕೆ ನಿಲುಕದ್ದು ಎಂದು ಅವರು ಹೇಳಿದ್ದಾರೆ.

‘ನಾನಂದುಕೊಳ್ಳುವ ಹಾಗೆ ಇದನ್ನು ಕೇವಲ ತಾಂತ್ರಿಕ ಅಂಶದ ಆಧಾರದಲ್ಲಿ ಹಾಗೆ ಮಾಡಲಾಗಿದೆ, ಯಾಕಂದರೆ ಆಸ್ಟ್ರಜೆನಿಕಾ ಲಸಿಕೆಯು ಯೂರೋಪ್ ರಾಷ್ಟ್ರಗಳಲ್ಲಿ ಬೇರೆ ಹೆಸರಿನಲ್ಲಿ ಸಿಗುತ್ತಿದೆ,’ ಎಂದು ಡಾ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ವ್ಯಾಕ್ಸಿನ್ ಪಾಸ್​ಪೋರ್ಟ್​ಗಳಲ್ಲಿ ಕೋವಿಷೀಲ್ಡ್​ ಲಸಿಕೆಯನ್ನು ಸೇರಿಸಿಕೊಳ್ಳುವಂತೆ ಯುರೋಪಿಯನ್ ವೈದ್ಯಕೀಯ ರೆಗ್ಯುಲೇಟರ್​ ಜೊತೆ ವಿಶ್ವ ಆರೋಗ್ಯ ಸಂಸ್ಥೆ ಮಾತುಕತೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಕೋವಿಷೀಲ್ಡ್ ಲಸಿಕೆಯು ಏಜೆನ್ಸಿಯ ಅನೊಮೋದನೆ ಪಡೆದುಕೊಳ್ಳುವಲ್ಲಿ ಯಶ ಕಾಣುವುದೇ ಎಂದು ಸುದ್ದಿಸಂಸ್ಥೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ ಸ್ವಾಮಿನಾಥನ್ ಅವರು ಆಗಸ್ಟ್ ಎರಡನೇ ವಾರದಲ್ಲಿ ಒಂದು ನಿರ್ಧಾರ ಹೊರ ಬೀಳಲಿದೆ ಎಂದು ಹೇಳಿದರು.

ಡೆಲ್ಟಾ ಸ್ಟ್ರೇನ್​ನ ಹೊಸ ರೂಪಾಂತರಿಯಾಗಿರುವ ಡೆಲ್ಟಾ ಪ್ಲಸ್​ ಪ್ರಥಮ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿದ್ದು ಕಳವಳಕಾರಿ ರೂಪಾಂತರಿಯೆಂದು ವರ್ಗೀಕರಣಗೊಂಡಿದೆ ಮತ್ತು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಎಚ್ಚರಿಕೆಯೊಂದನ್ನು ರವಾನಿಸಿ ಈ ರೂಪಾಂತರಿ ಬಗ್ಗೆ ಜಾಗರೂಕರಾಗಿರಬೇಕೆಂದು ಹೇಳಿತ್ತು. ಭಾರತ ಎರಡನೇ ಅಲೆಯಿಂದ ಚೇತರಿಸಿಕೊಂಡು ಸಾವು ಮತ್ತು ಸೋಂಕಿನ ಪ್ರಕಣಗಳು ಇಳಿಮುಖಗೊಳ್ಳುತ್ತಿರುವ ಸಂದರ್ಭದಲ್ಲಿ ಡೆಲ್ಟಾ ಪ್ಲಸ್​ನಿಂದ ಸೋಂಕಿಗೊಳಗಾದವರು ಕನಿಷ್ಟ 12 ರಾಜ್ಯಗಳಲ್ಲಿ ಪತ್ತೆಯಾಗಿದ್ದಾರೆ. ಜಾಗತಿಕವಾಗಿ 12ಕ್ಕಿಂತ ಹೆಚ್ಚು ರಾಷ್ಟ್ರಗಳಲ್ಲಿ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ,.

ಹೊಸ ಡೆಲ್ಟಾ ಪ್ಲಸ್ ರೂಪಾಂತರಿಯನ್ನು ತಾಂತ್ರಿಕವಾಗಿ B.1.617.2.1 ಇಲ್ಲವೇ AY.1 ಎಂದು ಕರೆಯಲಾಗುತ್ತದೆ. ತಜ್ಞರ ಪ್ರಕಾರ ಇದು K417N ಡೆಲ್ಟಾನಲ್ಲಿ ಇಲ್ಲವೇ B.1.617.2 ಸಂಯೋಗಗೊಂಡ ನಂತರ ರಚನೆಯಾಗಿದೆ. ತಜ್ಞರೇ ಹೇಳುವ ಪ್ರಕಾರ, ರೂಪಾಂತರವು SARS-COV-2 ನ ಸ್ಪೈಕ್ ಪ್ರೋಟೀನ್‌ನಲ್ಲಿದ್ದು, ಇದು ವೈರಸ್​ಗೆ ಮಾನವ ದೇಹವನ್ನು ಪ್ರವೇಶಿಸಿ ಜೀವಕೋಶಗಳಿಗೆ ಸೋಂಕು ತಾಕಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Delta Variant: ಡೆಲ್ಟಾ ವೈರಾಣು ಮಿದುಳಿಗೆ ಅಟ್ಯಾಕ್​ ಆದ್ರೆ ಏನಾಗುತ್ತದೆ?-ಐಸಿಎಂಆರ್​ ಮಾಜಿ ಮುಖ್ಯ ವಿಜ್ಞಾನಿ ನೀಡಿದ್ದಾರೆ ಮತ್ತೊಂದು ಎಚ್ಚರಿಕೆ..

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್