Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಿತ್ಯ-ಎಲ್ 1 ಜ. 6ರಂದು ಉದ್ದೇಶಿತ ಕಕ್ಷೆಗೆ ತಲುಪಲಿದೆ: ಎಸ್ ಸೋಮನಾಥ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಂಕ್ಷೆ ಯೋಜನೆ ಸೌರ ಮಿಷನ್ ಆದಿತ್ಯ-ಎಲ್ 1 ಜನವರಿ 6ರಂದು ಉದ್ದೇಶಿತ ಕಕ್ಷೆಗೆ ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಆದಿತ್ಯ-ಎಲ್ 1 ಜನವರಿ 6ರಂದು ಎಲ್ 1 ಪಾಯಿಂಟ್‌ಗೆ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

ಆದಿತ್ಯ-ಎಲ್ 1 ಜ. 6ರಂದು ಉದ್ದೇಶಿತ ಕಕ್ಷೆಗೆ ತಲುಪಲಿದೆ: ಎಸ್ ಸೋಮನಾಥ್
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್
Follow us
ಅಕ್ಷಯ್​ ಪಲ್ಲಮಜಲು​​
|

Updated on: Dec 23, 2023 | 3:22 PM

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಂಕ್ಷೆ ಯೋಜನೆ ಸೌರ ಮಿಷನ್ ಆದಿತ್ಯ-ಎಲ್ 1 ಜನವರಿ 6ರಂದು ಉದ್ದೇಶಿತ ಕಕ್ಷೆಗೆ ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ (S. Somanath) ಹೇಳಿದ್ದಾರೆ. ಆದಿತ್ಯ-ಎಲ್ 1 ಜನವರಿ 6ರಂದು ಎಲ್ 1 ಪಾಯಿಂಟ್‌ಗೆ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ. ಇದು ಯಾವ ಸಮಯಕ್ಕೆ ಅಲ್ಲಿಗೆ ತಲುಪಲಿದೆ ಎಂಬುದನ್ನು ಸೋಮನಾಥ್​​ ಅವರು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ವಿಜ್ಞಾನ ಭಾರತಿ (ವಿಭಾ) ಮತ್ತು ಗುಜರಾತ್ ಸರ್ಕಾರದ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಆದಿತ್ಯ-ಎಲ್ 1 ಅಲ್ಲಿ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆಯು ಮಾಹಿತಿ ನೀಡಿದ್ದಾರೆ. ಆದಿತ್ಯ-ಎಲ್ 1 ಮಿಷನ್​​​ ತನ್ನ ಉದ್ದೇಶಿತ ಕಕ್ಷೆಗೆ ತಲುಪಿದ ನಂತರ ಮಿಷನ್​​​​ನ​​​​ ಇಂಜಿನ್​​​ಗಳು ಸೂರ್ಯನ ಶಾಖಕ್ಕೆ ಬೆಂದು ಅಥವಾ ಮೆಲ್ಟ್​​​ ಆಗುವ ಹಂತಕ್ಕೆ ಹೋಗಬಹುದು. ಅದರೂ ಇದು ಕಾರ್ಯನಿರ್ವಹಿಸಲಿದೆ. ಇನ್ನು ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನಕ್ಕೆ ತಲುಪುವ ಮುನ್ನ ಸೂರ್ಯನ ಸುತ್ತಲೂ ತಿರುಗಿ ಎಲ್ 1 ಪಾಯಿಂಟ್​​​ನ್ನು ತಲುಪಲಿದೆ.

ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದ ನಂತರ ಮುಂದಿನ 5 ವರ್ಷಗಳ ಕಾಲ ಸೂರ್ಯನ ಸುತ್ತ ನಡೆಯುವ ಘಟನೆಗಳನ್ನು ಹಾಗೂ ಬದಲಾವಣೆಗಳನ್ನು ಅಧ್ಯಯನ ಮಾಡಿ ನಮಗೆ ಮಾಹಿತಿ ನೀಡಿತ್ತದೆ. ಒಮ್ಮೆ ಇದು ಯಶಸ್ವಿಯಾಗಿ L1 ಪಾಯಿಂಟ್‌ನಲ್ಲಿ ಇಳಿದ ನಂತರ ಮುಂದಿನ ಐದು ವರ್ಷಗಳ ಕಾಲ ಅಲ್ಲಿಯೇ ಇರಲಿದೆ ಎಂದು ಎಸ್​​​ ಸೋಮನಾಥ್ ಹೇಳಿದ್ದಾರೆ. ಇದು ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆ ಬೇಕಾದ ಎಲ್ಲ ಡೇಟಾಗಳನ್ನು ನೀಡುತ್ತದೆ. ಆದಿತ್ಯ-ಎಲ್ 1ನ ಈ ಅಧ್ಯಯನದಿಂದ ಸೂರ್ಯ ಮನುಷ್ಯನ ಮೇಲೆ ಉಂಟು ಮಾಡುವ ಪರಿಣಾಮವನ್ನು ತಿಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತ್ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ:

ಇನ್ನು ಪ್ರಧಾನಿ ಮೋದಿ ಅವರು ಸೂಚನೆಯಂತೆ ಅಮೃತ್ ಕಾಲ್ ಸಮಯದ ವೇಳೆಗೆ ಭಾರತವು ತನ್ನದೇ ಆದ ‘ಭಾರತ್ ಬಾಹ್ಯಾಕಾಶ ನಿಲ್ದಾಣ’ವನ್ನು ಹೊಂದಲಿದೆ ಎಂದು ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಇದೆ ಸಮಯದಲ್ಲಿ ಮುಂದಿನ 25 ವರ್ಷಗಳಲ್ಲಿ ಭಾರತೀಯ ವಿಜ್ಞಾನಿಗಳು ಚಂದ್ರನ ಮೇಲೆ ಇಳಿಯಲಿದ್ದಾರೆ. ವಿಜ್ಞಾನ ವಿದ್ಯಾರ್ಥಿಗಳು ಜ್ಞಾನ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದ್ದಾರೆ.

ಇದನ್ನೂ ಓದಿ: ಆದಿತ್ಯ-ಎಲ್1 ಸೂರ್ಯನ ಬಳಿ ಸಾಗುತ್ತದೆಯೇ? ತಪ್ಪು ಕಲ್ಪನೆಗಳ ಬಗ್ಗೆ ಇಸ್ರೋ ನೀಡಿದ ಸ್ಪಷ್ಟನೆ ಇಲ್ಲಿದೆ

ಲ್ಯಾಗ್ರೇಂಜ್ ಬಿಂದು ಅಥವಾ ಎಲ್​1 ಪಾಯಿಂಟ್ ಎಂದರೇನು?

ಭೂಮಿ ಮತ್ತು ಸೂರ್ಯರ ನಡುವೆ 15 ಕೋಟಿ ಕಿಲೋಮೀಟರ್ ಅಂತರವಿದೆ ಎನ್ನಲಾಗಿದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಎಲ್1 ಲ್ಯಾಗ್ರೇಂಜ್ ಬಿಂದುವಿದೆ. ಲ್ಯಾಗ್ರೇಂಜ್ ಬಿಂದು ಎಂದರೆ ಎರಡು ಗ್ರಹಗಳ ನಡುವಣ ಗುರುತ್ವ ಶಕ್ತಿ ಶೂನ್ಯವಾಗಿರುವ ಪ್ರದೇಶ ಅಥವಾ ಬಿಂದು ಆಗಿದೆ. ಭೂಮಿಯ ಮತ್ತು ಸೂರ್ಯನ ಗುರುತ್ವಾಕರ್ಷಣೆಯು ಪರಸ್ಪರ ಶೂನ್ಯವಾಗಿರುವ ಬಿಂದುವನ್ನು ಲ್ಯಾಗ್ರೇಂಜ್ ಬಿಂದು 1 ಅಥವಾ ಎಲ್​​1 ಎಂದು ಕರೆಯಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ