AstraZeneca Side Effects: ಆಸ್ಟ್ರಾಜೆನಿಕಾ ಲಸಿಕೆಯ ಅಡ್ಡಪರಿಣಾಮಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಿದ ಭಾರತ

ಜನೆವರಿ 16ರಂದು ಆರಂಭಗೊಂಡ ಲಸಿಕಾ ಅಭಿಯಾನದಲ್ಲಿ ಮಾರ್ಚ್​ 12 ರಂದು 20 ಲಕ್ಷಕ್ಕೂ (20,53,537) ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಇದುವರೆಗೆ ಒಂದು ದಿನದಲ್ಲಿ ಗರಿಷ್ಠ ಪ್ರಮಾಣದ ಲಸಿಕೆಗಳನ್ನು ನೀಡಿದ ದಾಖಲೆ ಇದಾಗಿದೆ.

AstraZeneca Side Effects: ಆಸ್ಟ್ರಾಜೆನಿಕಾ ಲಸಿಕೆಯ ಅಡ್ಡಪರಿಣಾಮಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಿದ ಭಾರತ
ಆಸ್ಟ್ರಾಜೆನೆಕಾ ಲಸಿಕೆ (ಪ್ರಾತಿನಿಧಿಕ ಚಿತ್ರ)
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ರಾಜೇಶ್ ದುಗ್ಗುಮನೆ

Updated on: Mar 13, 2021 | 6:09 PM

ನವದೆಹಲಿ: ಆಸ್ಟ್ರಾಜೆನಿಕಾ ಕೊವಿಡ್​ ಲಸಿಕೆ ಅಡ್ಡ ಪರಿಣಾಮಗಳ ಕುರಿತು ಆಳವಾದ ಪರಿಶೀಲನೆಯೊಂದನ್ನು ಮುಂದಿನವಾರದಲ್ಲಿ ನಡೆಸಲು ಭಾರತ ಸರ್ಕಾರ ನಿರ್ಧರಿಸಿದೆ. ಡೆನ್ಮಾರ್ಕ್, ನಾರ್ವೆ, ಐಸ್​ಲ್ಯಾಂಡ್​ ಮತ್ತು ಥೈಲ್ಯಾಂಡ್ ಮೊದಲಾದ ದೇಶಗಳಲ್ಲಿ ಲಸಿಕೆ ಹಾಕಿಸಿಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳು ತಲೆದೋರಿದ ನಂತರ ಭಾರತ ಆಸ್ಟ್ರಾಜೆನಿಕಾ ಲಸಿಕೆಯ ಪರೀಕ್ಷಣೆ ನಡೆಸಲು ನಿರ್ಧರಿಸಿದೆ.

‘ಅಡ್ಡ ಪರಿಣಾಮದ ಎಲ್ಲ ಆಯಾಮಗಳ ಅದರಲ್ಲೂ ವಿಶೇಷವಾಗಿ ಮರಣ ಮತ್ತು ಆಸ್ಪತ್ರೆಗೆ ಸೇರಿಸುವಂಥ ಅನಿವಾರ್ಯತೆ ಸೃಷ್ಟಿಸುವ ಗಂಭೀರ ಸ್ವರೂಪದ ಆಯಾಮಗಳನ್ನು ನಾವು ಪರಿಶಿಲಿಸಲಿದ್ದೇವೆ. ಕಳವಳ ಹುಟ್ಟಿಸುವಂಥದ್ದೇನಾದರೂ ನಮ್ಮ ಗಮನಕ್ಕೆ ಬಂದರೆ, ನಾವು ಅದನ್ನು ಬಹಿರಂಗಪಡಿಸಲಿದ್ದೇವೆ,’ ಎಂದು ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡಿದ ಕೊವಿಡ್-19 ರಾಷ್ಟ್ರೀಯ ಟಾಸ್ಕ್​ಫೋರ್ಸ್​ ಸದಸ್ಯ ಎನ್​ ಕೆ ಅರೋರಾ ಹೇಳಿದರು.

ಕಳವಳಪಡುವ ಸಂಗತಿಯೇನೂ ಇದಲ್ಲವೆಂದು ಹೇಳಿರುವ ಅರೋರಾ, ‘ಭಾರತದಲ್ಲಿ ವರದಿಯಾಗಿರುವ ಅಡ್ಡ ಪರಿಣಾಮಗಳ ಸಂಖ್ಯೆ ತೀರಾ, ತೀರಾ ಕಡಿಮೆ. ಹಾಗೆ ಸಮಸ್ಯೆಗೊಳಗಾದವವರಲ್ಲಿ ರಕ್ತ ಹೆಪ್ಪುಗಟ್ಟುವುದು ಸಂಭವಿಸಿದೆಯೇ ಎನ್ನುವುದನ್ನು ನಾವು ಪರಿಶೀಲಿಸಲಿದ್ದೇವೆ,’ ಎಂದರು.

Vaccination Programme in India

ಭಾರತದಲ್ಲಿ ಲಸಿಕಾ ಅಭಿಯಾನ

‘ನಿನ್ನೆಯವರೆಗೆ (ಶುಕ್ರವಾರ) 59 ರಿಂದ 60 ಸಾವುಗಳು ಸಂಭವಿಸಿವೆ. ಅದರೆ ಅವೆಲ್ಲ ಕಾಕತಾಳೀಯ ಸಾವುಗಳು. ಅಸ್ಪತ್ರೆ ಸೇರಿಸಬೇಕಾದ ಸ್ಥಿತಿ ಎದುರಿಸಿದ ಪ್ರಕರಣಗಳನ್ನು ನಾವು ಮರು-ಪರೀಕ್ಷಣೆ ನಡೆಸಲಿದ್ದೇವೆ,’ ಎಂದು ಅರೋರಾ ಹೇಳಿದರು.

ಜನೆವರಿ 16ರಂದು ಆರಂಭಗೊಂಡ ಲಸಿಕಾ ಅಭಿಯಾನದಲ್ಲಿ ಮಾರ್ಚ್​ 12 ರಂದು 20 ಲಕ್ಷಕ್ಕೂ (20,53,537) ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಇದುವರೆಗೆ ಒಂದು ದಿನದಲ್ಲಿ ಗರಿಷ್ಠ ಪ್ರಮಾಣದ ಲಸಿಕೆಗಳನ್ನು ನೀಡಿದ ದಾಖಲೆ ಇದಾಗಿದೆ.

ಲಸಿಕೆ ನೀಡಿಕೆ ಪ್ರಮಾಣದ ಶೇಕಡಾ 74ರಷ್ಟು 8 ರಾಜ್ಯಗಳಲ್ಲಿ ನಡೆದಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶ ಎಲ್ಲರಿಗಿಂತ ಮುಂದಿದ್ದು ರಾಜ್ಯದಲ್ಲಿ 3.3 ಲಕ್ಷ ಲಸಿಕಾ ಡೋಸ್​ಗಳನ್ನು ನೀಡಲಾಗಿದೆ.

ಒಟ್ಟಾರೆಯಾಗಿ ಭಾರತದಲ್ಲಿ ಇದುವರೆಗೆ 2.82 ಕೋಟಿ ಲಸಿಕಾ ಡೋಸ್​ಗಳನ್ನು ನೀಡಲಾಗಿದೆ. ಸಾಮೂಹಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಭಾರತವು ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಗಳನ್ನು ಬಳಸುತ್ತಿದೆ.

ಪ್ರಸ್ತುವಾಗಿ ಭಾರತದಲ್ಲಿ 2.02 ಲಕ್ಷ ಸಕ್ರಿಯ ಕೊವಿಡ್​-19 ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 24,882 ಹೊಸ ಪ್ರಕರಣಗಳು ದಾಖಲಾಗಿದ್ದು ಇದು ಈ ವರ್ಷ ದಾಖಲಾಗಿರುವ ಗರಿಷ್ಠ ಪ್ರಕರಣಗಳ ಸಂಖ್ಯೆಯಾಗಿದೆ. ಓದುಗರಿಗೆ ನೆನಪಿರಬಹುದು, ಕಳೆದ ವರ್ಷ ಡಿಸೆಂಬರ್​ 20ರಂದು 26,624 ಪ್ರಕರಣಗಳು ವರದಿಯಾಗಿದ್ದವು. ಭಾರತದ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಪ್ರಸಕ್ತ ವರ್ಷ ಇದುವರೆಗೆ 1,13,33,728 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: Covid 19 Vaccination: ಇಂದಿನಿಂದ ಎರಡನೇ‌ ಹಂತದ ಕೊರೊನಾ ಲಸಿಕಾ ಅಭಿಯಾನ ಶುರು.. 60 ವರ್ಷ ಮೇಲ್ಪಟ್ಟವರಿಗೆ ಕೊಡಲಿದ್ದಾರೆ ಲಸಿಕೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್