AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Agnipath Scheme: ಅಗ್ನಿಪಥ್ ಯೋಜನೆಗೆ ವಿರೋಧವೇಕೆ? ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾರಣವೇನು?

ಅಗ್ನಿಪಥ ಹೆಸರು ಕೇಳಿದರೆ ಈಗ ಉತ್ತರ ಭಾರತದಲ್ಲಿ ಸೇನಾ ಉದ್ಯೋಗಾಕಾಂಕ್ಷಿಗಳು ಬೆಂಕಿಯಾಗುತ್ತಿದ್ದಾರೆ. ರೈಲು, ಬಸ್​ಗಳಿಗೆ ಅಕ್ಷರಶಃ ಬೆಂಕಿ ಹಚ್ಚಿದ್ದಾರೆ. ರಸ್ತೆಯಲ್ಲಿ ಟೈರ್​ಗಳಿಗೆ ಬೆಂಕಿ ಹಚ್ಚಿ ಅಗ್ನಿಪಥ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Agnipath Scheme: ಅಗ್ನಿಪಥ್ ಯೋಜನೆಗೆ ವಿರೋಧವೇಕೆ? ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾರಣವೇನು?
ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆImage Credit source: amar ujala
S Chandramohan
| Updated By: ಸುಷ್ಮಾ ಚಕ್ರೆ|

Updated on: Jun 16, 2022 | 5:27 PM

Share

ನವದೆಹಲಿ: ಕೇಂದ್ರದ ರಕ್ಷಣಾ ಇಲಾಖೆ ಮೊನ್ನೆ ದಿನ ಭಾರತೀಯ ಸೇನೆಯ (Indian Army) ಮೂರು ದಳಗಳ ನೇಮಕಾತಿಗೆ ಅಗ್ನಿಪಥ ಎಂಬ ಹೊಸ ಯೋಜನೆ ಘೋಷಿಸಿತ್ತು. ಆದರೆ, ಈಗ ದೇಶದಲ್ಲಿ ಸೇನೆಗೆ ಸೇರುವ ಆಕಾಂಕ್ಷಿಗಳಿಂದ ಅಗ್ನಿಪಥ ಯೋಜನೆಗೆ (Agnipath Scheme) ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬಿಹಾರ, ಉತ್ತರ ಪ್ರದೇಶ, ದೆಹಲಿ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಗ್ನಿಪಥ ನೇಮಕಾತಿ ಯೋಜನೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ಹಾಗಾದರೇ, ಅಗ್ನಿಪಥ ನೇಮಕಾತಿ ಯೋಜನೆಗೆ ವಿರೋಧ ಏಕೆ? ಸೇನೆಗೆ ಸೇರುವ ಆಕಾಂಕ್ಷಿಗಳ ಬೇಡಿಕೆ ಏನು? ಎನ್ನುವುದರ ಪೂರ್ತಿ ಮಾಹಿತಿ ಇಲ್ಲಿದೆ.

ಭಾರತೀಯ ಸೇನೆಯ ಅಗ್ನಿಪಥ ನೇಮಕಾತಿ ಯೋಜನೆ. ಈ ಅಗ್ನಿಪಥ ಹೆಸರು ಕೇಳಿದರೆ ಈಗ ಉತ್ತರ ಭಾರತದಲ್ಲಿ ಸೇನಾ ಉದ್ಯೋಗಾಕಾಂಕ್ಷಿಗಳು ಬೆಂಕಿಯಾಗುತ್ತಿದ್ದಾರೆ. ರೈಲು, ಬಸ್​ಗಳಿಗೆ ಅಕ್ಷರಶಃ ಬೆಂಕಿ ಹಚ್ಚಿದ್ದಾರೆ. ರಸ್ತೆಯಲ್ಲಿ ಟೈರ್​ಗಳಿಗೆ ಬೆಂಕಿ ಹಚ್ಚಿ ಅಗ್ನಿಪಥ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಹಾರದ ಚಾಪ್ರಾ, ಕ್ಯಾಮೂರು, ಗೋಪಾಲ್ ಗಂಜ್‌ ಸೇರಿದಂತೆ ವಿವಿಧೆಡೆ ಉದ್ರಿಕ್ತರು ಯುವಕರು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ.

ಬಿಹಾರದ ನಳಂದಾ, ಜೆಹಾನಾಬಾದ್, ಬಕ್ಸರ್, ನವಾಡಾ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ. ರೈಲು ಸಂಚಾರಕ್ಕೂ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದಾರೆ. ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಅಗ್ನಿ ಪಥ ಯೋಜನೆಯ ವಿರುದ್ಧ ಭಾರೀ ಪ್ರತಿಭಟನೆ ನಡೆದಿದೆ. ಬಿಹಾರ ಮಾತ್ರವಲ್ಲದೆ ಉತ್ತರ ಪ್ರದೇಶದ ಬುಲಂದ್ ಶಹರ್​ನಲ್ಲಿ ಗ್ಯಾಂಗ್‌ ಟ್ರಕ್ ಹೈವೇಯನ್ನೇ ಸೇನೆಯ ಉದ್ಯೋಗಾಕಾಂಕ್ಷಿಗಳು ಬಂದ್ ಮಾಡಿದ್ದರು. ಉತ್ತರ ಪ್ರದೇಶದ ಗೋಂಡಾ, ಉನ್ನಾವೋ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆದಿದೆ. ಹರಿಯಾಣದ ಗುರುಗ್ರಾಮ, ರಿವಾರಿಯಲ್ಲೂ ಪ್ರತಿಭಟನೆ ನಡೆದಿದೆ. ದೆಹಲಿಯ ನಂಗ್ಲೋಯಿ ರೈಲು ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಾಗಿದೆ. ಸೇನೆಯ ಉದ್ಯೋಗಾಕಾಂಕ್ಷಿಗಳು ಅಗ್ನಿಪಥ ಯೋಜನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
Agnipath Scheme: ಅಗ್ನಿಪಥ್​ ಯೋಜನೆ ಕುರಿತ ವದಂತಿಗಳೇನು; ಸರ್ಕಾರ ನೀಡಿದ ಸ್ಪಷ್ಟನೆಯೇನು?
Image
ಕೇಂದ್ರದ ಅಗ್ನಿಪಥ್​​ ಯೋಜನೆ ವಿರುದ್ಧ ಬಿಹಾರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಪೊಲೀಸರಿಂದ ಅಶ್ರುವಾಯು ಪ್ರಯೋಗ
Image
Agnipath Scheme: ಅಗ್ನಿ ಪಥ್ ಯೋಜನೆ ವೇತನ, ಅರ್ಹತೆ ಮತ್ತಿತರ ಸವಲತ್ತಿನ ವಿವರ ಇಲ್ಲಿದೆ
Image
Agnipath Scheme: ಕೇವಲ 3 ವರ್ಷಗಳಿಗೆ ಸೈನಿಕರನ್ನು ನೇಮಿಸುವ ಕೇಂದ್ರದ ‘ಅಗ್ನಿಪಥ’ ಯೋಜನೆಗೆ ಚಾಲನೆ

ಇದನ್ನೂ ಓದಿ: Agnipath Entry: ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಅಗ್ನಿಪಥ್​ ಯೋಜನೆ ಘೋಷಣೆ; ದೇಶಸೇವೆಯ ಬಯಕೆ ಇರುವವರಿಗೆ ಸುವರ್ಣಾವಕಾಶ !

ಇಷ್ಟಕ್ಕೂ ಭಾರತೀಯ ಸೇನೆಯ ಅಗ್ನಿಪಥ ನೇಮಕಾತಿ ಯೋಜನೆಗೆ ವಿರೋಧ ಏಕೆ? ಈ ಹೊಸ ನೇಮಕಾತಿ ಯೋಜನೆಯಿಂದ ಯುವಕರಿಗೆ ಉದ್ಯೋಗದ ಅನುಕೂಲವಿಲ್ಲವೇ? ಅನ್ನೋ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಅಗ್ನಿಪಥ ಯೋಜನೆಯಡಿ ಸೇನೆಗೆ ನೇಮಕಗೊಂಡರೆ 4 ವರ್ಷ ಮಾತ್ರ ಸೇವೆಗೆ ಅವಕಾಶ ಸಿಗಲಿದೆ. ಹದಿನೇಳೂವರೆ ವರ್ಷದಿಂದ 22 ವರ್ಷದೊಳಗಿನವರು ಅಗ್ನಿ ಪಥ ಯೋಜನೆಯಡಿ ಸೇನೆ ಸೇರಬಹುದು. ಕನಿಷ್ಠ ಹತ್ತನೇ ತರಗತಿ ಪಾಸಾಗಿದ್ದರೂ ಸೇನೆಗೆ ಸೇರಲು ಅವಕಾಶ ಇದೆ. ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ ನಾಲ್ಕು ವರ್ಷ ಪೂರೈಸಿದ ಬಳಿಕ ಸೇನೆ ಕೆಲಸ ಬಿಟ್ಟು ಬರಬೇಕು. ಅಗ್ನಿ ಪಥ ಯೋಜನೆಯಡಿ ಸೇವೆ ಸಲ್ಲಿಸಿದ ಶೇ.25ರಷ್ಟು ಮಂದಿಗೆ ಮಾತ್ರ ಸೇನೆಯಲ್ಲಿ ರೆಗ್ಯುಲರ್ ಆಗಿ ನೌಕರಿ ನೀಡಲಾಗುತ್ತದೆ. ಉಳಿದ ಶೇ.75ರಷ್ಟು ಮಂದಿಗೆ ಸೇನೆಯಲ್ಲಿ ಖಾಯಂ ನೌಕರಿ ಸಿಗಲ್ಲ. ಅಗ್ನಿ ಪಥ ಯೋಜನೆಯಿಂದ ಇಷ್ಟು ವರ್ಷಗಳ ಕಾಲ ಮಾಡುತ್ತಿದ್ದ ಸೈನಿಕರ ನೇಮಕಾತಿ ಸಂಖ್ಯೆ ಕಡಿತವಾಗಲಿದೆ.

ಭಾರತದಲ್ಲಿ 2032ರ ವೇಳೆಗೆ ಸೇನೆಯಲ್ಲಿ ಶೇ. 50ರಷ್ಟು ಅಗ್ನಿಪಥ ಯೋಜನೆಯಡಿ ನೇಮಕಗೊಂಡ ಅಗ್ನಿವೀರರ ಕಾರ್ಯನಿರ್ವಹಣೆ ಮಾಡುವ ಲೆಕ್ಕಾಚಾರ ಇದೆ. ಇನ್ನೂ 90 ದಿನಗಳಲ್ಲಿ ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ವರ್ಷ 45 ಸಾವಿರ‌ ಮಂದಿ ಅಗ್ನಿಪಥ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅಗ್ನಿಪಥ ಯೋಜನೆಯಿಂದ ರೆಗ್ಯುಲರ್ ಸೈನಿಕರ ನೇಮಕಾತಿ ಸಂಖ್ಯೆ ಕಡಿತವಾಗಲಿದೆ. ಹಾಲಿ ಇರುವ ವ್ಯವಸ್ಥೆಯಡಿ ಸೇನೆಯಲ್ಲಿ ಸೈನಿಕರಾಗಿ ನೇಮಕವಾದರೆ 12ರಿಂದ 15 ವರ್ಷ ಸೇವೆಗೆ ಅವಕಾಶ ಇದೆ. ಆದರೆ, ಅಗ್ನಿಪಥದಲ್ಲಿ ಬರೀ 4 ವರ್ಷ ಮಾತ್ರ ಸೇವೆಗೆ ಅವಕಾಶ ಇದೆ. ಹೀಗಾಗಿ, ಸೇನೆಗೆ ಸೇರುವ ಆಕಾಂಕ್ಷೆ ಇರುವ ನಿರುದ್ಯೋಗಿ ಯುವಕರಿಗೆ ನಿರಾಸೆ ಆಗಿದೆ. ಈ ನಿರಾಸೆ ಈಗ ಆಕ್ರೋಶವಾಗಿ ಪರಿವರ್ತನೆಯಾಗಿದೆ. ಆಕ್ರೋಶದ ಕಟ್ಟೆ ಹೊಡೆದು ಬಿಹಾರ, ಉತ್ತರ ಪ್ರದೇಶ, ದೆಹಲಿ, ಹರಿಯಾಣ ಸೇರಿದಂತೆ ಉತ್ತರ ಭಾರತದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗಿದೆ.

ಸೇನಾ ಉದ್ಯೋಗ ಆಕಾಂಕ್ಷಿಗಳ ಬೇಡಿಕೆ ಏನು?: – ಸೇನೆಯಲ್ಲಿ 15 ವರ್ಷ ಸೈನಿಕ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು. – 4 ವರ್ಷದ ಅಗ್ನಿಪಥ ಯೋಜನೆಯ ಘೋಷಣೆ ಸರಿಯಲ್ಲ. – ಕಳೆದ 2 ವರ್ಷಗಳಿಂದ ಸೇನೆಗೆ ಸೈನಿಕರ ನೇಮಕಾತಿಯೇ ನಡೆದಿಲ್ಲ. – ಶೀಘ್ರವಾಗಿ ಹಳೆ ಪದ್ದತಿಯಡಿ ಸೈನಿಕರ ನೇಮಕಾತಿಗೆ ಆಗ್ರಹ. – ಅಗ್ನಿಪಥ ಯೋಜನೆಯಿಂದ ಉಜ್ವಲ ಭವಿಷ್ಯ ಇಲ್ಲ. – ಅಗ್ನಿಪಥ ಯೋಜನೆಯಡಿ ಪಿಂಚಣಿ ವ್ಯವಸ್ಥೆ ಇಲ್ಲ. – ಸೇನೆಯಲ್ಲಿ ನಾಲ್ಕು ‌ವರ್ಷದ ಸೇವೆ ಬಳಿಕ ಮತ್ತೆ ನಿರುದ್ಯೋಗಿಗಳಾಗಬೇಕು. ಇಲ್ಲವೇ ಸೆಕ್ಯೂರಿಟಿ ಗಾರ್ಡ್ ಆಗಿ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಹೀಗಾಗಿ ಅಗ್ನಿಪಥ ಯೋಜನೆಗೆ ಯುವಕರ ತೀವ್ರ ವಿರೋಧ ಕೇಳಿಬಂದಿದೆ.

ಇದನ್ನೂ ಓದಿ: Agnipath Scheme: ಅಗ್ನಿಪಥ್​ ಯೋಜನೆ ಕುರಿತ ವದಂತಿಗಳೇನು; ಸರ್ಕಾರ ನೀಡಿದ ಸ್ಪಷ್ಟನೆಯೇನು?

ಆದರೆ ಕೇಂದ್ರ ಸರ್ಕಾರವು ನೆನ್ನೆಯಿಂದ ಅಗ್ನಿಪಥ ಯೋಜನೆಯ ಆಕ್ಷೇಪಗಳಿಗೆ ಉತ್ತರ ನೀಡುತ್ತಿದೆ. ಅಗ್ನಿಪಥ ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ. ಅಗ್ನಿವೀರರಿಗೆ ಪ್ರಾರಂಭದಲ್ಲಿ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದರೇ, ಉತ್ತಮ ಕೌಶಲ್ಯದ ತರಬೇತಿ ಸಿಗಲಿದೆ. ಹೀಗಾಗಿ, ಅಗ್ನಿ ಪಥ ಯೋಜನೆಯ ಸೇವೆ ಸಲ್ಲಿಸಿ, ಸೇನೆಯಿಂದ ಹೊರ ಬಂದ ಬಳಿಕ ಬೇರೆ ಉದ್ಯೋಗಾವಕಾಶಗಳು ಸಿಗುತ್ತಾವೆ. ಬೇರೆ ಉದ್ಯೋಗಾವಕಾಶಗಳಲ್ಲಿ ಸೇನೆಯಲ್ಲಿ ತರಬೇತಿ ಪಡೆದ ಅಗ್ನಿವೀರರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ. ಸೇನೆಯಿಂದ ಹೊರ ಬಂದ ಬಳಿಕ ಕೌಶಲ್ಯಯುತ ಯುವಕರಾಗಿರುತ್ತಾರೆ. ಕೇಂದ್ರದ ಗೃಹ ಇಲಾಖೆಯ ಉದ್ಯೋಗದಲ್ಲಿ ಅಗ್ನಿ ವೀರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತೆ ಎಂದು ಕೇಂದ್ರದ ಗೃಹ ಇಲಾಖೆ ಹೇಳಿದೆ.

ಕೇಂದ್ರೀಯ ಪೊಲೀಸ್ ಪಡೆಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತೆದೆ ಇದೇ ರೀತಿ ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯ ಸರ್ಕಾರದಿಂದಲೂ ಪೊಲೀಸ್ ನೇಮಕಾತಿಯಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಮೂರು ರಾಜ್ಯ ಸರ್ಕಾರಗಳು ಹೇಳಿವೆ. ಅಗ್ನಿವೀರರು ಅಗ್ನಿಪಥ ಯೋಜನೆಗೆ ಆಯ್ಕೆಯಾದ ಬಳಿಕ ಶಿಕ್ಷಣ ಮುಂದುವರಿಸಲು ಕೂಡ ಅವಕಾಶ ಮಾಡಿಕೊಡಲು ಕೇಂದ್ರದ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಅಗ್ನಿವೀರರಿಗೆ ಕೌಶಲ್ಯಯುತ ಶಿಕ್ಷಣ ಪಡೆಯಲು ಇಗ್ನೋ ದಿಂದ ಪದವಿ ಕೋರ್ಸ್ ಆರಂಭಿಸುವುದಾಗಿ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
4 ಸಿಕ್ಸ್, 8 ಫೋರ್: 56 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮ್ಯಾಕ್ಸಿ ಪಡೆ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ