ಇ -ಕಾಮರ್ಸ್ ದಿಗ್ಗಜ, ಅತ್ಯಂತ ದೊಡ್ಡ ಆನ್ಲೈನ್ ಶಾಪಿಂಗ್ ಸಂಸ್ಥೆ ಅಮೇಜಾನ್ ಮತ್ತೊಮ್ಮೆ ವಿವಾದ ಸೃಷ್ಟಿಸಿದೆ. ಈ ಬಾರಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಮೇಜಾನ್ ಬಹಿಷ್ಕರಿಸಿ (Boycott Amazon), ಅಮೇಜಾನ್ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದೆ (Amazon_Insults_National_Flag)ಎಂಬಿತ್ಯಾದಿ ಹ್ಯಾಷ್ಟ್ಯಾಗ್ನಡಿ ಪೋಸ್ಟ್ ಹಾಕುತ್ತಿದ್ದಾರೆ. 73ನೇ ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಬೆನ್ನಲ್ಲೇ, ಅಮೇಜಾನ್ ಹೀಗೊಂದು ಎಡವಟ್ಟು ಮಾಡಿಕೊಂಡಿದೆ. ರಾಷ್ಟ್ರಧ್ವಜದ ಮುದ್ರೆ, ಚಿತ್ರವುಳ್ಳ ವಸ್ತುಗಳನ್ನು ಅಮೇಜಾನ್ ಮಾರಾಟ ಮಾಡುತ್ತಿರುವುದೇ ಇದಕ್ಕೆ ಕಾರಣ.
ಅಮೇಜಾನ್ ಇಂಡಿಯಾದಲ್ಲ, ಧ್ವಜದ ಚಿತ್ರ ಮುದ್ರಿಸಲಾದ ಟಿ-ಶರ್ಟ್ಗಳು, ಮಾಸ್ಕ್ಗಳು, ಕೀ ಚೈನ್ಗಳು, ಚಾಕಲೇಟ್ ಕವರ್ಗಳು , ಸೆರಾಮಿಕ್ ಮಗ್ಗಳು, ಮಕ್ಕಳ ಬಟ್ಟೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದು ರಾಷ್ಟ್ರಧ್ವಜಕ್ಕೆ ಮಾಡುವ ಅವಮಾನ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಧ್ವಜ ಸಂಹಿತೆ 2022ರ ಉಲ್ಲಂಘನೆ ಎಂದೂ ಹೇಳಲಾಗಿದೆ. ಈ ಸಂಹಿತೆಯ ಪ್ರಕಾರ, ಯಾವುದೇ ಉಡುಪಿನ ಭಾಗದಲ್ಲಿ ರಾಷ್ಟ್ರಧ್ವಜ ಮುದ್ರಿಸುವಂತಿಲ್ಲ. ಕುಶನ್ಗಳು, ಕರವಸ್ತ್ರಗಳು, ನ್ಯಾಪ್ಕಿನ್ ಅಥವಾ ಪೆಟ್ಟಿಗೆಗಳ ಮೇಲೆಲ್ಲ ಪ್ರಿಂಟ್ ಅಥವಾ ಕಸೂತಿ ಮಾಡುವಂತಿಲ್ಲ. ಆದರೆ ಅಮೇಜಾನ್ ತನ್ನ ಮಾರಾಟ ಪ್ರಮಾಣ ಹೆಚ್ಚಿಸಿಕೊಳ್ಳಲು, ಮಾರ್ಕೆಟಿಂಗ್ ಪ್ರಚಾರಕ್ಕಾಗಿ ಭಾರತದ ಧ್ವಜದ ಚಿತ್ರ ಬಳಸಿಕೊಳ್ಳುತ್ತಿದೆ ಎಂದು ಅನೇಕರು ತಮ್ಮ ಟ್ವಿಟರ್ನಲ್ಲಿ ಆರೋಪಿಸಿದ್ದಾರೆ.
ನೆಟ್ಟಿಗರೊಬ್ಬರು ತ್ರಿವರ್ಣ ಧ್ವಜದ ಮಾದರಿಯಲ್ಲಿ ಹೊಲಿಯಲಾದ ಮಾಸ್ಕ್ ಚಿತ್ರ ಶೇರ್ ಮಾಡಿಕೊಂಡು, ಇದು ಅಮೇಜಾನ್ನಲ್ಲಿ ಮಾರಾಟಕ್ಕಿದೆ. ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ. ಮಾಸ್ಕ್ನ್ನು ಬಳಸಿ ಸುಡುತ್ತಾರೆ ಇಲ್ಲವೇ ಬಿಸಾಡುತ್ತಾರೆ. ಹೀಗೆ ಮಾಡಿದರೆ ನಮ್ಮ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತೆ ಆಗುತ್ತದೆ. ಅಮೇಜಾನ್ ಕೂಡಲೇ ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹೀಗೆ ಇನ್ನೊಬ್ಬರು ಟ್ವೀಟ್ ಮಾಡಿ, ರಾಷ್ಟ್ರಧ್ವಜದ ಚಿತ್ರವಿರುವ ಎಲ್ಲ ಉತ್ಪನ್ನಗಳನ್ನೂ ಅಮೇಜಾನ್ ಹಿಂಪಡೆಯಬೇಕು. ಬೇಷರತ್ತು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. ರಾಷ್ಟ್ರ ಧ್ವಜ ಸಂಹಿತೆಯನ್ನು ಅವಮಾನಿಸಿದ ಅಮೇಜಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಅನೇಕರು ಆಗ್ರಹಿಸಿದ್ದಾರೆ.
ಇದೇ ಮೊದಲಲ್ಲ:
ಅಮೇಜಾನ್ ಹೀಗೆ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. 2019ರಲ್ಲಿ ಇಂಥದ್ದೇ ಒಂದು ಕೆಲಸ ಮಾಡಿತ್ತು. ಹಿಂದು ದೇವತೆಗಳು, ದೇವರ ಚಿತ್ರ ಮುದ್ರಿಸಲಾದ ಟಾಯ್ಲೆಟ್ ಸೀಟ್ ಕವರ್ಗಳು, ಬಾಗಿಲು ಮ್ಯಾಟ್ಗಳನ್ನು ಮಾರಾಟಕ್ಕಿಟ್ಟಿತ್ತು. ಆಗಲೂ ಸಹ ಅಮೇಜಾನ್ ಬಹಿಷ್ಕರಿಸಿ ಎಂಬ ಅಭಿಯಾನ ಇಂಟರ್ನೆಟ್ನಲ್ಲಿ ನಡೆದಿತ್ತು. ಅಮೇಜಾನ್ ಕ್ಷಮೆ ಕೋರಿತ್ತು. ಅದಕ್ಕೂ ಮೊದಲು 2017ರಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಬಾಗಿಲಿಗೆ ಹಾಕುವ ಮ್ಯಾಟ್ಗಳು ಅಮೇಜಾನ್ನ ಕೆನಡಾ ವಿಭಾಗದ ವೆಬ್ಸೈಟ್ನಲ್ಲಿ ಮಾರಾಟಕ್ಕೆ ಇದ್ದವು. ಆಗಲೂ ಸಹ ಬಹಿಷ್ಕಾರ ಅಭಿಯಾನ ನಡೆದಿತ್ತು.
ಇಲ್ಲಿವೆ ನೋಡಿ ಅಮೇಜಾನ್ ವಿರುದ್ಧದ ಕೆಲವು ಟ್ವೀಟ್ಗಳು
#Amazon_insults_national_flag#Amazoninsultsnationalflag
Earning in India and insulting Indian flag will not be tolerated. Stop this. Remove the these type items. pic.twitter.com/sxQFfsX6e3— Sampada Chandelkar (@sampada022) January 24, 2022
Amazon has often insulted India’s tricolor flag by selling shoes, shoes and toilet seat covers, masks, etc.#Amazon_Insults_National_Flag pic.twitter.com/ofzdGZH1Oo
— $OWMYA D.K? (@Sowmyadk2023) January 24, 2022
The idea of designing Tricolour on masks is complete disgrace to Indian flag. If people buy these masks, then there is a possibility of improper disposal, which will be disrespectful to the National flag as per flag code.@amazonIN take down these.#Amazon_Insults_National_Flag pic.twitter.com/OEfJIoWreW
— Siddhi Chaudhari (@Siddhi_C123) January 24, 2022
#Amazon_Insults_National_Flag
“Amazon must tender unconditional apology. They must withdraw all products insulting our national flag immediately. ✊✊ pic.twitter.com/BHshmEHXZM— Rakshitha (@Rakshit69214957) January 24, 2022
ಇದನ್ನೂ ಓದಿ: ಸಾಧನೆಗೆ ವಯಸ್ಸಿನ ಹಂಗಿಲ್ಲ, 60ರ ಇಳಿ ವಯಸ್ಸಿನಲ್ಲೂ ಅರಬ್ಬಿ ಸಮುದ್ರದಲ್ಲಿ ಈಜಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ