ಆಕ್ಸಿಜನ್ ಕೊರತೆಗೆ ಪರಿಹಾರ: ಆಕ್ಸಿಜನ್ ರೀಸೈಕ್ಲಿಂಗ್ ಸಿಸ್ಟಂ ನಿರ್ಮಿಸಿದ ಭಾರತೀಯ ನೌಕಾಪಡೆ

ಆಕ್ಸಿಜನ್ ಕೊರತೆಗೆ ಪರಿಹಾರ: ಆಕ್ಸಿಜನ್ ರೀಸೈಕ್ಲಿಂಗ್ ಸಿಸ್ಟಂ ನಿರ್ಮಿಸಿದ ಭಾರತೀಯ ನೌಕಾಪಡೆ
ಆಕ್ಸಿಜನ್ ರೀಸೈಕಲಿಂಗ್ ಸಿಸ್ಟಂ

Oxygen Recycling System: ಪತ್ರಿಕಾ ಪ್ರಕಟಣೆಯ ಪ್ರಕಾರ, ಒಆರ್​ಎಸ್ ಅನ್ನು ಅಸ್ತಿತ್ವದಲ್ಲಿರುವ ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ಅವಧಿಗಿಂತ ಎರಡರಿಂದ ನಾಲ್ಕು ಪಟ್ಟು ವಿಸ್ತರಿಸಲು ವಿನ್ಯಾಸಗೊಳಿಸಲಾಗಿದೆ. ರೋಗಿಯು ಉಸಿರಾಡುವ ಅಲ್ಪ ಪ್ರಮಾಣದ ಆಮ್ಲಜನಕವನ್ನು ಮಾತ್ರ ಶ್ವಾಸಕೋಶದಿಂದ ಹೀರಿಕೊಳ್ಳಲಾಗುತ್ತದೆ

Rashmi Kallakatta

|

May 20, 2021 | 5:38 PM

ದೆಹಲಿ: ಕೊವಿಡ್ ಎರಡನೇ ಅಲೆ ಮಧ್ಯೆ ಭಾರತೀಯ ನೌಕಾಪಡೆಯ ದಕ್ಷಿಣ ನೌಕಾ ಕಮಾಂಡ್‌ನ ಡೈವಿಂಗ್ ಸ್ಕೂಲ್ ದೇಶದಲ್ಲಿನ ಆಮ್ಲಜನಕದ ಕೊರತೆಯನ್ನು ನೀಗಿಸಲು ಆಕ್ಸಿಜನ್ ಮರುಬಳಕೆ ವ್ಯವಸ್ಥೆಯನ್ನು (ORS) ವಿನ್ಯಾಸಗೊಳಿಸಿದೆ. ಅಧಿಕೃತ  ಪ್ರಕಟಣೆಯ ಪ್ರಕಾರ, ಒಆರ್​ಎಸ್ ಅನ್ನು ಡೈವಿಂಗ್ ಶಾಲೆಯ ಲೆಫ್ಟಿನೆಂಟ್ ಕಮಾಂಡರ್ ಮಯಾಂಕ್ ಶರ್ಮಾ ವಿನ್ಯಾಸಗೊಳಿಸಿದ್ದಾರೆ. ಸಿಸ್ಟಮ್ ವಿನ್ಯಾಸಕ್ಕೆ ಪೇಟೆಂಟ್ ನೀಡಲಾಗಿದೆ, ಮತ್ತು ಈ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಮೇ 13 ರಂದು ಅರ್ಜಿ ಸಲ್ಲಿಸಿದೆ.

ಡೈವಿಂಗ್ ಸ್ಕೂಲ್ ಈ ಕ್ಷೇತ್ರದಲ್ಲ ಪರಿಣತಿಯನ್ನು ಹೊಂದಿದೆ. ಏಕೆಂದರೆ ಶಾಲೆಯು ಬಳಸುವ ಕೆಲವು ಡೈವಿಂಗ್ ಸೆಟ್‌ಗಳಲ್ಲಿ ಮೂಲ ಪರಿಕಲ್ಪನೆಯನ್ನು ಬಳಸಲಾಗುತ್ತದೆ. ಇದಕ್ಕೂ ಮೊದಲು ಮಾರ್ಚ್ 6 ರಂದು ಕೆವಾಡಿಯಾದಲ್ಲಿ ನಡೆದ ಸಂಯೋಜಿತ ಕಮಾಂಡರ್ಸ್ ಸಮ್ಮೇಳನದಲ್ಲಿ ಮಿನಿಯೇಚರೈಸ್ಡ್ ಲ್ಯಾಬ್ ಮಾದರಿಯಲ್ಲಿ ಇದೇ ರೀತಿಯ ವಿಚಾರವನ್ನು ಪ್ರಧಾನ ಮಂತ್ರಿ ಮುಂದೆ ಪ್ರದರ್ಶಿಸಲಾಗಿತ್ತು.

ಪತ್ರಿಕಾ ಪ್ರಕಟಣೆಯ ಪ್ರಕಾರ, ಒಆರ್​ಎಸ್ ಅನ್ನು ಅಸ್ತಿತ್ವದಲ್ಲಿರುವ ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ಅವಧಿಗಿಂತ ಎರಡರಿಂದ ನಾಲ್ಕು ಪಟ್ಟು ವಿಸ್ತರಿಸಲು ವಿನ್ಯಾಸಗೊಳಿಸಲಾಗಿದೆ. ರೋಗಿಯು ಉಸಿರಾಡುವ ಅಲ್ಪ ಪ್ರಮಾಣದ ಆಮ್ಲಜನಕವನ್ನು ಮಾತ್ರ ಶ್ವಾಸಕೋಶದಿಂದ ಹೀರಿಕೊಳ್ಳಲಾಗುತ್ತದೆ. ದೇಹದಲ್ಲಿ ಹೊರ ಹೋಗುವ ಕಾರ್ಬನ್ ಡೈಆಕ್ಸೈಡ್ ಜೊತೆಗೆ ಉಳಿದವುಗಳನ್ನು ಹೊರ ಬಿಡಲಾಗುತ್ತದೆ.

ಒಆರ್​ಎಸ್​ನ ಮೊದಲ ಸಂಪೂರ್ಣ ಕಾರ್ಯಾಚರಣೆಯ ಮೂಲಮಾದರಿಯನ್ನು ಏಪ್ರಿಲ್ 22 ರಂದು ಪ್ರದರ್ಶಿಸಲಾಯಿತು. ಐಎಸ್ಒ-ಪ್ರಮಾಣೀಕೃತ ಸಂಸ್ಥೆಗಳಿಂದ ತೃತೀಯ ವೀಕ್ಷಕರೊಂದಿಗೆ ಸದರ್ನ್ ನೇವಲ್ ಕಮಾಂಡ್ ನಲ್ಲಿ ಆಂತರಿಕ ಪ್ರಯೋಗಗಳು ಮತ್ತು ವಿನ್ಯಾಸ ಸುಧಾರಣೆಗಳನ್ನು ನಡೆಸಲಾಗಿದೆ. ಅದರ ನಂತರ, ನೀತಿ ಆಯೋಗದ ನಿರ್ದೇಶನದ ಮೇರೆಗೆ, ಈ ವ್ಯವಸ್ಥೆಯು ತಿರುವನಂತಪುರಂನ ಶ್ರೀ ಚಿತ್ರ ತಿರುನಾಳ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ (SCTIMST) ಯ ತಜ್ಞರ ತಂಡದಿಂದ ವಿವರವಾದ ವಿಶ್ಲೇಷಣೆ ಮತ್ತು ಮೌಲ್ಯಮಾಪನಕ್ಕೆ ಒಳಗಾಯಿತು.

SCTIMST ಯ ತಜ್ಞರ ತಂಡವು ಆಕ್ಸಿಜನ್ ಮರುಬಳಕೆ ವ್ಯವಸ್ಥೆಯ ಪರಿಕಲ್ಪನೆ ಮತ್ತು ವಿನ್ಯಾಸವನ್ನು ಕಾರ್ಯಸಾಧ್ಯವೆಂದು ಕಂಡುಹಿಡಿದಿದೆ. ಕೆಲವು ಹೆಚ್ಚುವರಿ ಬದಲಾವಣೆಗಳನ್ನೂ ಸಹ ಸೂಚಿಸಿತ್ತು. ಒಆರ್​ಎಸ್ ಮೂಲ ಮಾದರಿಯ ಒಟ್ಟಾರೆ ವೆಚ್ಚವನ್ನು 1000 ರೂ ಆಗಿದ್ದು ಮರುಬಳಕೆ ಮಾಡುವ ಮೂಲಕ ಪ್ರತಿದಿನ 3,000 ರೂ ಉಳಿತಾಯ ಮಾಡಬಹುದಾಗಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ಆಮ್ಲಜನಕದ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವುದರ ಜೊತೆಗೆ ಪರ್ವತಾರೋಹಿಗಳು / ಸೈನಿಕರು ಬಳಸುವ ಆಮ್ಲಜನಕ ಸಿಲಿಂಡರ್‌ಗಳ ಅವಧಿ ವಿಸ್ತರಿಸಲು ORS ಅನ್ನು ಬಳಸಬಹುದು.

ಇದನ್ನೂ ಓದಿ:  ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕರ್ನಾಟಕದಲ್ಲಿ ಎದುರಾಗಿದೆ ತಜ್ಞರ ಕೊರತೆ: ಸಚಿವ ಜಗದೀಶ್ ಶೆಟ್ಟರ್ ಕಳವಳ

ಚಾಮರಾಜನಗರ ಆಕ್ಸಿಜನ್​ ದುರಂತದಲ್ಲಿ ಸತ್ತವರ ಕುಟುಂಬಕ್ಕೆ ತಕ್ಷಣ 2 ಲಕ್ಷ ರೂಪಾಯಿ ಪರಿಹಾರ ಕೊಡಿ: ಹೈಕೋರ್ಟ್ ವಿಭಾಗೀಯ ಪೀಠ

Follow us on

Related Stories

Most Read Stories

Click on your DTH Provider to Add TV9 Kannada