AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್​ 1; ಭಾರತದ ಇನ್ನೆರಡು ಸಿಟಿಗಳು ಯಾವವು ಗೊತ್ತಾ?

Delhi Air Pollution: ದೆಹಲಿ ನೆರೆಹೊರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯದ ಬೆಂಕಿಯಿಂದ ಉಂಟಾಗುವ ಹೊಗೆಯ ಅಪಾಯಕಾರಿ ಸಂಯೋಜನೆ ಮತ್ತು ವಾಹನಗಳ ಹೊರಸೂಸುವಿಕೆಯಿಂದ ನಗರದ ಮಾಲಿನ್ಯ ಮೂಲಗಳು ಆರೋಗ್ಯ ತುರ್ತುಸ್ಥಿತಿಯ ಆತಂಕವನ್ನು ಉಂಟುಮಾಡಿವೆ.

ವಿಶ್ವದ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್​ 1; ಭಾರತದ ಇನ್ನೆರಡು ಸಿಟಿಗಳು ಯಾವವು ಗೊತ್ತಾ?
ದೆಹಲಿ ವಾಯುಮಾಲಿನ್ಯದ ಚಿತ್ರಣ
S Chandramohan
| Edited By: |

Updated on: Nov 13, 2021 | 5:04 PM

Share

ರಾಷ್ಟ್ರ ರಾಜಧಾನಿ ದೆಹಲಿಯಲ್ಲೀಗ ವಾಯುಗುಣಮಟ್ಟ (Delhi Air Pollution) ಅತ್ಯಂತ ಕಳಪೆಯಾಗಿದ್ದು ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಆದರೆ ನೆನಪಿರಲಿ, ಇದು ನಮ್ಮ ದೇಶದ ದೆಹಲಿಗೆ ಎದುರಾದ ಪರಿಸ್ಥಿತಿ ಮಾತ್ರವಲ್ಲ..ಇಡೀ ವಿಶ್ವದಲ್ಲಿ ಹಲವು ನಗರಗಳು ಅತ್ಯಂತ ಕಳಪೆ ಮಟ್ಟದ ವಾಯುಗುಣಮಟ್ಟ ಹೊಂದಿವೆ. ಆದರೆ ಒಂದು ಬೇಸರದ ಸಂಗತಿಯೆಂದರೆ ಜಗತ್ತಿನಾದ್ಯಂತ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೆಹಲಿಯೇ ಟಾಪ್​ ಒನ್​​ರಲ್ಲಿದೆ. ಈ ಪಟ್ಟಿಯಲ್ಲಿ ದೆಹಲಿ ಸೇರಿ ಭಾರತದ ಮೂರು ನಗರಗಳು ಇವೆ. ಹಾಗಾದರೇ, ಭಾರತದ ಇನ್ನೂಳಿದ ಆ ಎರಡು ನಗರಗಳು ಯಾವುವು? ದೆಹಲಿಯಲ್ಲಿ ವಾಯುವಿನ ಗುಣಮಟ್ಟ ಕುಸಿಯಲು ಕಾರಣವೇನು? ಎನ್ನುವುದರ ಸಮಗ್ರ ಮಾಹಿತಿ ಇಲ್ಲಿದೆ ನೋಡಿ..

ದೆಹಲಿ ನೆರೆಹೊರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯದ ಬೆಂಕಿಯಿಂದ ಉಂಟಾಗುವ ಹೊಗೆಯ ಅಪಾಯಕಾರಿ ಸಂಯೋಜನೆ ಮತ್ತು ವಾಹನಗಳ ಹೊರಸೂಸುವಿಕೆಯಿಂದ ನಗರದ ಮಾಲಿನ್ಯ ಮೂಲಗಳು ಆರೋಗ್ಯ ತುರ್ತುಸ್ಥಿತಿಯ ಆತಂಕವನ್ನು ಉಂಟುಮಾಡಿವೆ. ಏತನ್ಮಧ್ಯೆ, ಯುನೈಟೆಡ್ ನೇಷನ್ಸ್ ಎನ್ವಿರಾನ್​​ಮೆಂಟಲ್ ಪ್ರೋಗ್ರಾಂನ ತಂತ್ರಜ್ಞಾನ ಪಾಲುದಾರರಾಗಿರುವ ಸ್ವಿಟ್ಜರ್ಲೆಂಡ್ ಮೂಲದ ಹವಾಮಾನ ಗುಂಪಿನ IQAir ನಿಂದ ವಾಯು ಗುಣಮಟ್ಟ ಮತ್ತು ಮಾಲಿನ್ಯ ನಗರ ಟ್ರ್ಯಾಕಿಂಗ್ ಸೇವೆಯು ವಿಶ್ವದ ಹತ್ತು ನಗರಗಳ ಪಟ್ಟಿಯಲ್ಲಿ ಭಾರತದಿಂದ ಮೂರು ನಗರಗಳಿವೆ ಎಂದು ತೋರಿಸಿದೆ. ಕೆಟ್ಟ ಗಾಳಿಯ ಗುಣಮಟ್ಟದ ಸೂಚ್ಯಂಕಗಳಿಂದಾಗಿ ವಿಶ್ವದಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯವಾಗಿರುವ ಟಾಪ್ 10 ನಗರಗಳ ಪಟ್ಟಿಯಲ್ಲಿ ಭಾರತದ 3 ನಗರಗಳಿರುವುದು ಆತಂಕಕ್ಕೆ ಕಾರಣವಾಗಿದೆ.

IQAir ನಿಂದ ಪಟ್ಟಿ ಮಾಡಲಾದ ಸರಾಸರಿ AQI 556 ನೊಂದಿಗೆ ದೆಹಲಿ ಅಗ್ರಸ್ಥಾನದಲ್ಲಿದ್ದರೆ, ಇಡೀ ಪಟ್ಟಿಯಲ್ಲಿ ಕೋಲ್ಕತ್ತಾ ನಾಲ್ಕನೇ ಮತ್ತು ಮುಂಬೈ ಆರನೇ ಸ್ಥಾನದಲ್ಲಿದೆ. ಕೆಟ್ಟ AQI ಸೂಚ್ಯಂಕಗಳನ್ನು ಹೊಂದಿರುವ ನಗರಗಳಲ್ಲಿ ಪಾಕಿಸ್ತಾನದ ಲಾಹೋರ್ ಮತ್ತು ಚೀನಾದ ಚೆಂಗ್ಡು ಕೂಡ ಸೇರಿವೆ.

IQAir ಪ್ರಕಾರ, ಕೆಟ್ಟ ಗಾಳಿಯ ಗುಣಮಟ್ಟದ ಸೂಚಕಗಳು ಮತ್ತು ಮಾಲಿನ್ಯ ಶ್ರೇಯಾಂಕಗಳನ್ನು ಹೊಂದಿರುವ ಹತ್ತು ನಗರಗಳು ಇಲ್ಲಿವೆ: 1. ದೆಹಲಿ, ಭಾರತ (AQI: 556) 2. ಲಾಹೋರ್, ಪಾಕಿಸ್ತಾನ (AQI: 354) 3. ಸೋಫಿಯಾ, ಬಲ್ಗೇರಿಯಾ (AQI: 178) 4. ಕೋಲ್ಕತ್ತಾ, ಭಾರತ (AQI: 177) 5. ಜಾಗ್ರೆಬ್, ಕ್ರೊಯೇಷಿಯಾ (AQI: 173) 6. ಮುಂಬೈ, ಭಾರತ (AQI: 169) 7. ಬೆಲ್ಗ್ರೇಡ್, ಸರ್ಬಿಯಾ (AQI: 165) 8. ಚೆಂಗ್ಡು, ಚೀನಾ (AQI: 165) 9. ಸ್ಕೋಪ್ಜೆ, ಉತ್ತರ ಮ್ಯಾಸಿಡೋನಿಯಾ (AQI: 164) 10.ಕ್ರಾಕೋವ್, ಪೋಲೆಂಡ್ (AQI: 160)

ಗಮನಾರ್ಹವಾಗಿ, ದೆಹಲಿಯ ಗಾಳಿಯ ಗುಣಮಟ್ಟ ಮತ್ತು ಮಾಲಿನ್ಯದ ಅಂಶಗಳನ್ನು ಗುರುತಿಸುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿಯ (ಐಐಟಿಎಂ) ನಿರ್ಧಾರ ಬೆಂಬಲ ವ್ಯವಸ್ಥೆ (ಡಿಎಸ್ಎಸ್) ಅಂದಾಜಿನ ಪ್ರಕಾರ, ಶುಕ್ರವಾರ, ದೆಹಲಿಯು ಇತರ ನಗರಗಳಿಂದ ಮಾಲಿನ್ಯಕಾರಕಗಳನ್ನು ಸ್ವೀಕರಿಸಿದೆ ಎಂದು ಹೇಳಲಾಗಿದೆ.. ಜಾಜ್ಜರ್, ಗುರ್​ಗಾಂವ್​, ಬಾಗ್ಪತ್, ಗಾಜಿಯಾಬಾದ್ ಮತ್ತು ಸೋನೆಪತ್ ಜಿಲ್ಲೆಗಳಿಂದ ಹೆಚ್ಚಿನ ವಾಯು ಮಾಲಿನ್ಯಕಾರಕಗಳು ದೆಹಲಿಗೆ ಬಂದಿವೆ. ಇದರಿಂದಾಗಿ ದೆಹಲಿಯಲ್ಲಿ ವಾಯುವಿನ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಡಿಎಸ್​​ಎಸ್​ ವಿಶ್ಲೇಷಣೆಯು ಶುಕ್ರವಾರದಂದು, ದೆಹಲಿಯ PM 2.5 (2.5 ಮೈಕ್ರೋಮೀಟರ್ಗಳಿಗಿಂತ ಕಡಿಮೆ ವ್ಯಾಸದ ಅಲ್ಟ್ರಾಫೈನ್ ಪರ್ಟಿಕ್ಯುಲೇಟ್ ಮ್ಯಾಟರ್) ನ ಶೇ.15 ರಷ್ಟು ಭತ್ತದ ಕಡ್ಡಿಗಳ ಬೆಂಕಿಗೆ ಕೊಡುಗೆ ನೀಡಿದೆ ಎಂದು ಹೇಳಲಾಗಿದೆ.

ಸ್ಥಳೀಯ ವಾಹನ ಹೊರಸೂಸುವಿಕೆಗಳು 25% ರಷ್ಟು ಪಾಲನ್ನು ಹೊಂದಿದ್ದು, ಮನೆಗಳಿಂದ ಮಾಲಿನ್ಯದ ಹೊರಸೂಸುವಿಕೆಯು ಶೇ.7ಕ್ಕೆ ಕೊಡುಗೆ ನೀಡಿದೆ. ದೆಹಲಿ ಮತ್ತು ಅದರ ಪರಿಧಿಯಲ್ಲಿನ ಕಣಗಳ ಮಟ್ಟಗಳು ಮತ್ತು ಕೈಗಾರಿಕೆಗಳ ಶೇಕಡಾ 9-10 ರಷ್ಟು ನಗರದ ಮಾಲಿನ್ಯಕ್ಕೆ ಕಾರಣ ಆಗಿವೆ ಎಂಬ ವಿವರವನ್ನು ಹೊಂದಿದೆ. ಕೇಂದ್ರ ಭೂ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರವಾದ SAFAR, ಶುಕ್ರವಾರ ಗಾಳಿಯಲ್ಲಿ ಕನಿಷ್ಠ 35 ಪ್ರತಿಶತದಷ್ಟು ಮಾಲಿನ್ಯಕಾರಕಗಳಿಗೆ ಕೃಷಿ ತ್ಯಾಜ್ಯದ ಕಾರಣವಾಗಿದೆ ಎಂದು ಹೇಳಿದೆ.

– ಚಂದ್ರಮೋಹನ್, ನ್ಯಾಷನಲ್ ಬ್ಯೂರೋ. ಟಿವಿ9

ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ; ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳು ಸ್ಥಳಾಂತರ?

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್