ಶರಮ್ ಹೆಸರಿನ ಚೀಸ್; ವೈರಲ್ ಆಗಿದ್ದು AI ಫೋಟೋ, ಫೇಕ್ ಚಿತ್ರ ನಂಬಬೇಡಿ ಎಂದ ಅಮುಲ್
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಅಮುಲ್ , ಕೃತಕ ಬುದ್ದಮತ್ತೆ ಬಳಸಿ ಯಾರೋ ಈ ಚಿತ್ರವನ್ನು ರಚಿಸಿದ್ದು ಇದು ನಮ್ಮ ಉತ್ಪನ್ನವಲ್ಲ ಎಂದು ಹೇಳಿದೆ. ಪೋಸ್ಟ್‌ನ ಲೇಖಕರು ಅದನ್ನು ರಚಿಸುವ ಮತ್ತು ಪೋಸ್ಟ್ ಮಾಡುವ ಮೊದಲು ಬ್ರ್ಯಾಂಡ್‌ನ ಅನುಮತಿಯನ್ನು ಹೊಂದಿರಲಿಲ್ಲ ಎಂದು ಸಂಸ್ಥೆ ಹೇಳಿದೆ.
ದೆಹಲಿ ಡಿಸೆಂಬರ್ 21: ಶರಮ್ (Sharam) ಎಂಬ ಹೆಸರು ಇರುವ ಅಮುಲ್ ಚೀಸ್ (Amul cheese) ಪ್ಯಾಕೆಟ್ ಚಿತ್ರವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಹಿಂದಿಯಲ್ಲಿ ಶರಮ್ ಅಂದರೆ ಲಜ್ಜೆ, ನಾಚಿಕೆ. ಶರಮ್ ನಾಮ್ ಕೀ ಚೀಜ್ ಭೀ ಹೋತಿ ಹೈ ಎಂದು ಹಿಂದಿಯಲ್ಲಿ ಗಾದೆ ಮಾತೊಂದಿದೆ. ಕನ್ನಡದಲ್ಲಿ ಸರಳವಾಗಿ ಹೇಳುವುದಾದರೆ ಮಾನ ಮರ್ಯಾದೆ ಇರ್ಬೇಕು ಎಂಬುದು ಈ ಮಾತಿನ ಅರ್ಥ. Cheese ಪ್ಯಾಕೆಟ್ನ ಹೆಸರು ಶರಮ್ ಎಂದಿದ್ದು, ಇದನ್ನು ಹಿಂದಿಯಲ್ಲಿ ಓದುವಾಗ ‘ಶರಮ್ ಚೀಜ್’ ಎಂದಾಗುತ್ತದೆ. ಅಂದಹಾಗೆ ಅಮುಲ್ ಈ ರೀತಿ ಹೆಸರಿನ ಚೀಸ್ ಮಾರುಕಟ್ಟೆಗೆ ಪರಿಚಯಿಸಿದೆಯೇ?
ಇಲ್ಲ. ಈ ವೈರಲ್ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಅಮುಲ್ , ಕೃತಕ ಬುದ್ದಮತ್ತೆ ಬಳಸಿ ಯಾರೋ ಈ ಚಿತ್ರವನ್ನು ರಚಿಸಿದ್ದು ಇದು ನಮ್ಮ ಉತ್ಪನ್ನವಲ್ಲ ಎಂದು ಹೇಳಿದೆ. ಪೋಸ್ಟ್‌ನ ಲೇಖಕರು ಅದನ್ನು ರಚಿಸುವ ಮತ್ತು ಪೋಸ್ಟ್ ಮಾಡುವ ಮೊದಲು ಬ್ರ್ಯಾಂಡ್‌ನ ಅನುಮತಿಯನ್ನು ಹೊಂದಿರಲಿಲ್ಲ ಎಂದು ಸಂಸ್ಥೆ ಹೇಳಿದೆ.
ISSUED IN PUBLIC INTEREST BY AMUL pic.twitter.com/VjDQXtE6VF
— Amul.coop (@Amul_Coop) December 20, 2023
ಹೊಸ ರೀತಿಯ ಅಮುಲ್ ಚೀಸ್ ಬಗ್ಗೆ ಸುಳ್ಳು ಸಂದೇಶವನ್ನು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅಮುಲ್‌ನಿಂದ ಅನುಮತಿ ಪಡೆಯದೆ, ಪೋಸ್ಟ್‌ನ ಲೇಖಕರು ಅದನ್ನು ಪೋಸ್ಟ್ ಮಾಡಲು ತಮ್ಮದೇ ಆದ ಸೃಜನಶೀಲತೆಯನ್ನು ಬಳಸಿದ್ದಾರೆ. ಈ ಪ್ಯಾಕ್ ಅನ್ನು ಕೃತಕ ಬುದ್ಧಿಮತ್ತೆಯೊಂದಿಗೆ ರಚಿಸಲಾಗಿದೆ. ಇಲ್ಲಿ ಅಮುಲ್ ಬ್ರಾಂಡ್ ಬಗ್ಗೆ ಅನುಚಿತ ಮತ್ತು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ.
“ಎಐ ಬಳಸಿ ಪ್ಯಾಕ್ ಅನ್ನು ರಚಿಸಲಾಗಿದೆ. ಅಮುಲ್ ಬ್ರ್ಯಾಂಡ್ ಹೆಸರನ್ನು ಕೆಟ್ಟದಾಗಿ ಬಿಂಬಿಸಿದ್ದನ್ನು ನಾವು ಪೋಸ್ಟ್‌ನಲ್ಲಿ ಗಮನಿಸಿದ್ದೇವೆ. ಈ ಪೋಸ್ಟ್‌ನಲ್ಲಿ ತೋರಿಸಿರುವ ಪ್ಯಾಕ್ ಅಮುಲ್ ಚೀಸ್ ಅಲ್ಲ ಎಂದು ನಾವು ನಿಮಗೆ ಭರವಸೆ ನೀಡಲು ಬಯಸುತ್ತೇವೆ” ಎಂದು ಅಮುಲ್ ಹೇಳಿಕೆ ನೀಡಿದೆ.
ಇದೇ ರೀತಿ ಫೆಬ್ರವರಿಯಲ್ಲಿ ಚೀನಾದಲ್ಲಿ ಅಮುಲ್ ಬೆಣ್ಣೆಯನ್ನು ಪ್ಯಾಕ್ ಮಾಡಲಾಗಿದೆ ಎಂಬ ನಕಲಿ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಡೈರಿ ಸಂಸ್ಥೆಯು ಇದು ಫೇಕ್ ಎಂದು ಹೇಳಿದ್ದು, ನಕಲಿ ಮಾಹಿತಿಯ ಬಗ್ಗೆ ಎಚ್ಚರವಹಿಸಿ ಎಂದಿತ್ತು.
” ಅಮುಲ್ ಬೆಣ್ಣೆಯನ್ನು ಚೀನಾದಲ್ಲಿ ಪ್ಯಾಕ್ ಮಾಡಲಾಗಿದೆ ಎನ್ನುವ ಬಗ್ಗೆ ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂದೇಶವನ್ನು ಫಾರ್ವರ್ಡ್ ಮಾಡಲಾಗುತ್ತಿದೆ. ಅದು ನಕಲಿ ಎಂದು ಅಮುಲ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಫೀಡ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಹೇಳಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ