ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಲು ಸುಗ್ರೀವಾಜ್ಞೆ ಪ್ರಕಟಿಸಿದ ಆಂಧ್ರಪ್ರದೇಶ

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಲು ಸುಗ್ರೀವಾಜ್ಞೆ ಪ್ರಕಟಿಸಿದ ಆಂಧ್ರಪ್ರದೇಶ
ಜಗನ್ ಮೋಹನ್ ರೆಡ್ಡಿ

Andhra Pradesh ಜೂನ್ 2014 ರಲ್ಲಿಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು(Chandrababu Naidu) ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಏರಿಕೆ ಮಾಡಿತ್ತು.

TV9kannada Web Team

| Edited By: Rashmi Kallakatta

Jan 31, 2022 | 7:45 PM

ಅಮರಾವತಿ: ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು(Retirement age)60 ವರ್ಷದಿಂದ 62 ವರ್ಷಕ್ಕೆ ಏರಿಸುವ ಸುಗ್ರೀವಾಜ್ಞೆಯನ್ನು ಜನವರಿ 1, 2022 ರಿಂದ ಜಾರಿಗೆ ತರಲು ಆಂಧ್ರಪ್ರದೇಶ (Andhra Pradesh)ಸರ್ಕಾರ ಸೋಮವಾರ ಪ್ರಕಟಣೆ ಹೊರಡಿಸಿದೆ. ಜೂನ್ 2014 ರಲ್ಲಿಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು(Chandrababu Naidu) ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ಏರಿಕೆ ಮಾಡಿತ್ತು. ನಿವೃತ್ತಿ ವಯೋಮಿತಿ ಹೆಚ್ಚಳಕ್ಕೆ ಒತ್ತಾಯಿಸದ ಸರ್ಕಾರಿ ನೌಕರರು ಸೇರಿದಂತೆ ಹಲವರಿಗೆ ಈ ಕ್ರಮ ಅಚ್ಚರಿ ಮೂಡಿಸಿದೆ ಎಂದು ವರದಿಯಾಗಿದೆ.ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿದ ಸ್ಥಳೀಯ ಮಾಧ್ಯಮ ವರದಿಗಳು, ರಾಜ್ಯ ಸರ್ಕಾರಿ ಯಂತ್ರದಲ್ಲಿ ಲಭ್ಯವಿರುವ ಮಾನವಶಕ್ತಿಯ ಉತ್ತಮ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರೆ, ಇನ್ನು ಕೆಲವರು ದಕ್ಷಿಣ ರಾಜ್ಯದ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಿರುವುದರಿಂದ ಆಂಧ್ರ ರಾಜ್ಯದ ನೌಕರರ ನಿವೃತ್ತಿ ವಯಸ್ಸನ್ನು 62 ಕ್ಕೆ ಹೆಚ್ಚಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನಿರ್ಧಾರವು ಅನೇಕ ಸಿಬ್ಬಂದಿಗೆ ನಿವೃತ್ತಿ ಪ್ರಯೋಜನಗಳ ಪಾವತಿಯನ್ನು ಎರಡು ವರ್ಷಗಳವರೆಗೆ ಮುಂದೂಡಬಹುದು.

ನಿವೃತ್ತಿ ಪ್ರಯೋಜನಗಳು ರಾಜ್ಯ ಸರ್ಕಾರದ ವೆಚ್ಚದ ಪ್ರಮುಖ ಭಾಗವಾಗಿದೆ.ಕೆಲವೊಂದು ಮಾಧ್ಯಮಗಳ ಪ್ರಕಾರ ನಿರ್ಧಾರವು ಸರ್ಕಾರಿ ಸಿಬ್ಬಂದಿಗಳ ನಿವೃತ್ತಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸುತ್ತದೆ, ಹೀಗಾಗಿ ಅವರ ಪಿಂಚಣಿ ಮತ್ತು ಇತರ ನಿವೃತ್ತಿ ಪ್ರಯೋಜನಗಳ ಮೇಲೆ ಸರ್ಕಾರವು ಮಾಡುವ ವೆಚ್ಚವನ್ನು ಮುಂದೂಡುತ್ತದೆ.

ವರದಿಯ ಪ್ರಕಾರ, ಆಂಧ್ರಪ್ರದೇಶದ ಸರ್ಕಾರಿ ನೌಕರರ ಭವಿಷ್ಯ ನಿಧಿ, ಗ್ರಾಚ್ಯುಟಿ ಮತ್ತು ಇತರ ಪ್ರಯೋಜನಗಳು ಸರಾಸರಿ ಸುಮಾರು 30 ಲಕ್ಷ ರೂ. ಆಗಿದೆ.

ಈ ಹಿಂದೆ ತೆಲಂಗಾಣ ಮತ್ತು ಮಧ್ಯಪ್ರದೇಶದಂತಹ ಇತರ ಸರ್ಕಾರಗಳು ನೌಕರರ ನಿವೃತ್ತಿ ವಯಸ್ಸನ್ನು ಬದಲಾಯಿಸಿವೆ. ತೆಲಂಗಾಣದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58 ರಿಂದ 61ಕ್ಕೆ ಬದಲಾಯಿಸಲಾಗಿದೆ. ಮಧ್ಯಪ್ರದೇಶದಲ್ಲಿ ನಿವೃತ್ತಿ  ವಯಸ್ಸು 62. ಕೇಂದ್ರ ಸರ್ಕಾರದಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ಆಗಿದೆ.

ಇದನ್ನೂ ಓದಿ:Budget 2022: ಈ ಬಾರಿಯ ಬಜೆಟ್​ನಲ್ಲಿ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಾಧ್ಯತೆ; ಶಿಕ್ಷಣ, ನೀರಾವರಿ ಕ್ಷೇತ್ರದ ನಿರೀಕ್ಷೆಗಳೇನು?

Follow us on

Related Stories

Most Read Stories

Click on your DTH Provider to Add TV9 Kannada