AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವ್ಯಾಕ್ಸಿನ್ ಪಡೆದ 2 ತಿಂಗಳ ನಂತರ, ಕೊವಿಶೀಲ್ಡ್ ಪಡೆದ 3 ತಿಂಗಳ ನಂತರ ದೇಹದಲ್ಲಿ ಪ್ರತಿಕಾಯಗಳು ಕಮ್ಮಿಯಾಗುತ್ತಿವೆ: ICMR ಅಧ್ಯಯನ

ಕೊವಾಕ್ಸಿನ್ ಲಸಿಕೆ ಸ್ವೀಕರಿಸಿದವರಲ್ಲಿ ಉತ್ಪತ್ತಿಯಾದ ಪ್ರತಿಕಾಯಗಳ ಮಟ್ಟವು ಎರಡು ತಿಂಗಳ ನಂತರ ಕಡಿಮೆಯಾದರೆ, ಕೊವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡವರಲ್ಲಿ ಮೂರು ತಿಂಗಳ ನಂತರ ಪ್ರತಿಕಾಯಗಳ ಮಟ್ಟ ಕಡಿಮೆಯಾಗುತ್ತಿದೆ ಎಂದು ಅಧ್ಯಯನದ ಪ್ರಾಥಮಿಕ ವರದಿ ತಿಳಿಸಿದೆ.

ಕೊವ್ಯಾಕ್ಸಿನ್ ಪಡೆದ 2 ತಿಂಗಳ ನಂತರ, ಕೊವಿಶೀಲ್ಡ್ ಪಡೆದ 3 ತಿಂಗಳ ನಂತರ ದೇಹದಲ್ಲಿ ಪ್ರತಿಕಾಯಗಳು ಕಮ್ಮಿಯಾಗುತ್ತಿವೆ: ICMR ಅಧ್ಯಯನ
ಸಾಂದರ್ಭಿಕ ಚಿತ್ರ
TV9 Web
| Updated By: Skanda

Updated on: Sep 15, 2021 | 2:41 PM

Share

ಐಸಿಎಂಆರ್ ನೇತೃತ್ವದಲ್ಲಿ ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (ಆರ್‌ಎಮ್‌ಆರ್‌ಸಿ) ನಡೆಸಿದ ಇತ್ತೀಚಿನ ಅಧ್ಯಯನ ಒಂದರಲ್ಲಿ ಕೊವ್ಯಾಕ್ಸಿನ್​ ಹಾಗೂ ಕೊವಿಶೀಲ್ಡ್​​ ಕೊರೊನಾ ಲಸಿಕೆ ತೆಗೆದುಕೊಂಡವರಲ್ಲಿ ಕೆಲ ಕಾಲದ ಬಳಿಕ ಪ್ರತಿಕಾಯಗಳ ಪ್ರಮಾಣ ಕುಗ್ಗುತ್ತಿರುವುದು ಬೆಳಕಿಗೆ ಬಂದಿದೆ. ಕೊವಾಕ್ಸಿನ್ ಲಸಿಕೆ ಸ್ವೀಕರಿಸಿದವರಲ್ಲಿ ಉತ್ಪತ್ತಿಯಾದ ಪ್ರತಿಕಾಯಗಳ ಮಟ್ಟವು ಎರಡು ತಿಂಗಳ ನಂತರ ಕಡಿಮೆಯಾದರೆ, ಕೊವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡವರಲ್ಲಿ ಮೂರು ತಿಂಗಳ ನಂತರ ಪ್ರತಿಕಾಯಗಳ ಮಟ್ಟ ಕಡಿಮೆಯಾಗುತ್ತಿದೆ ಎಂದು ಅಧ್ಯಯನದ ಪ್ರಾಥಮಿಕ ವರದಿ ತಿಳಿಸಿದೆ.

ICMR-RMRC ಸಹಭಾಗಿತ್ವದಲ್ಲಿ ಈ ಅಧ್ಯಯನವನ್ನು ಕೈಗೊಳ್ಳಲಾಗಿದ್ದು, ತಜ್ಞರು ರೂಪಿಸಿದ ನಿರ್ದಿಷ್ಟ ವಿಧಾನವನ್ನು ಅನುಸರಿಸುವ ಮೂಲಕ ಅಧ್ಯಯನವನ್ನು ಮುನ್ನಡೆಸಲಾಗುತ್ತಿದೆ. ಈ ಕುರಿತು ಇಂಡಿಯಾ ಟುಡೆ ಮಾಧ್ಯಮದ ಜತೆಗೆ ಮಾತನಾಡಿದ ಐಸಿಎಂಆರ್-ಆರ್​ಎಮ್​ಸಿಆರ್​ ವಿಜ್ಞಾನಿ ಡಾ.ದೇವದತ್ತ ಭಟ್ಟಾಚಾರ್ಯ, ಅಧ್ಯಯನಕ್ಕಾಗಿ 614 ಜನರನ್ನು ಒಳಪಡಿಸಲಾಗಿತ್ತು. ಅವರಿಂದ ಅಗತ್ಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. 614 ಮಂದಿ ಪೈಕಿ 308 (ಶೇ. 50.2) ಮಂದಿ ಕೊವಿಶೀಲ್ಡ್ ಲಸಿಕೆ ಪಡೆದವರು ಹಾಗೂ ಉಳಿದ 306 (ಶೇ. 49.8) ಮಂದಿ ಕೊವಾಕ್ಸಿನ್ ಲಸಿಕೆ ಪಡೆದವರು ಎಂದು ತಿಳಿಸಿದ್ದಾರೆ.

ಒಟ್ಟು 614 ಜನರಲ್ಲಿ 81 ಮಂದಿಗೆ ಲಸಿಕೆ ಪಡೆದ ನಂತರವೂ ಕೊರೊನಾ ಸೋಂಕು ತಗುಲಿದ್ದು ಅದು ಬೂಸ್ಟರ್​ ಡೋಸ್​ ರೀತಿ ಕಾರ್ಯ ನಿರ್ವಹಿಸಿದೆ ಎನ್ನುವುದು ಗಮನಾರ್ಹ ಎಂದು ತಿಳಿಸಿದ್ದಾರೆ. ಉಳಿದಂತೆ ಲಸಿಕೆ ಪಡೆದ ನಂತರ ಸೋಂಕಿನ ಯಾವುದೇ ಲಕ್ಷಣಗಳನ್ನು ತೋರ್ಪಡಿಸದ 533 ಆರೋಗ್ಯ ಕಾರ್ಯಕರ್ತರಲ್ಲಿ ಪ್ರತಿಕಾಯಗಳ ಪ್ರಮಾಣ ಗಮನಾರ್ಹವಾಗಿ ಇಳಿಕೆಯಾಗಿದೆ ಎನ್ನುವುದು ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಅಧ್ಯಯನವನ್ನು ಒಂದೇ ಬಾರಿಗೆ ನಿರ್ಧರಿಸುವುದು ಸಾಧುವಲ್ಲ. ಹೀಗಾಗಿ ಇದರಲ್ಲಿ ನಿರಂತರವಾಗಿ ತೊಡಗಿಕೊಂಡು ಕೆಲಸ ಮಾಡಬೇಕಾಗುತ್ತದೆ. ಪ್ರತಿಕಾಯದ ಪ್ರಮಾಣದ ಏರಿಳಿತವನ್ನು ನೋಡಲು ಸುಮಾರು ಎರಡು ವರ್ಷಗಳ ಕಾಲ ಈ ಅಧ್ಯನವನ್ನು ಮುಂದುವರೆಸಲಾಗುವುದು ಎಂದು ಇದೇ ವೇಳೆ ತಜ್ಞರು ಹೇಳಿದ್ದಾರೆ.

ಕೊವಾಕ್ಸಿನ್ ಅಥವಾ ಕೊವಿಶೀಲ್ಡ್‌ ಲಸಿಕೆಯ ಸಂಪೂರ್ಣ ಡೋಸ್ ಅರ್ಥಾತ್​ ಎರಡು ಡೋಸ್​ ಪಡೆದ ಆರೋಗ್ಯ ಕಾರ್ಯಕರ್ತರಲ್ಲಿ ಐಜಿಜಿ (ಇಮ್ಯುನೊಗ್ಲಾಬ್ಯುಲಿನ್ ಜಿ, ಅತ್ಯಂತ ಸಾಮಾನ್ಯವಾದ ಪ್ರತಿಕಾಯ) ಪ್ರತಿಕಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಅಧ್ಯಯನವನ್ನು ಕೈಗೊಳ್ಳಲಾಗಿದೆ. SARS-CoV-2 ಪ್ರತಿಕಾಯಗಳ ಬದಲಾವಣೆಗಳನ್ನು ದಾಖಲಿಸುವ ಸಲುವಾಗಿ ಕೊವ್ಯಾಕ್ಸಿನ್ ಅಥವಾ ಕೊವಿಶೀಲ್ಡ್​ ಲಸಿಕೆಯ ಮೊದಲ ಡೋಸ್ ಪಡೆದ ನಂತರದ 24 ವಾರಗಳವರೆಗೆ ನಿರಂತರವಾಗಿ ನಿಗಾ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಅಧ್ಯಯನವನ್ನು ಮಾರ್ಚ್ 2021 ರಲ್ಲಿ ಆರಂಭಿಸಲಾಗಿದ್ದು, ಭುವನೇಶ್ವರದ ICMR-RMRC ನಿರ್ದೇಶಕ ಸಂಘಮಿತ್ರ ಪತಿ ಹೇಳುವಂತೆ ಪ್ರತಿಕಾಯಗಳಲ್ಲಿ ಇಳಿಕೆ ಕಂಡುಬಂದರೂ ಅವುಗಳು ನಿರ್ಮೂಲನೆ ಆಗುವುದು ಕಂಡುಬಂದಿಲ್ಲ. ತಕ್ಕಮಟ್ಟಿಗೆ ಪ್ರತಿಕಾಯಗಳು ದೇಹದಲ್ಲಿ ಉಳಿದುಕೊಂಡಿರುತ್ತವೆ. ಅದನ್ನು ಕಂಡುಹಿಡಿಯಲೆಂದೇ ನಾವು ಅಧ್ಯಯನದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಎಂಟು ವಾರಗಳಲ್ಲಿ, ಪ್ರತಿಕಾಯಗಳು ಕ್ಷೀಣಿಸುವುದು ಕಂಡುಬಂದಿದೆ. ಇದನ್ನು ಆರು ತಿಂಗಳ ನಂತರ ಮತ್ತೊಮ್ಮೆ ಪರಿಶೀಲಿಸಲಾಗುವುದು. ಇನ್ನೂ ಸ್ವಲ್ಪ ಸಮಯದವರೆಗೆ ಅಧ್ಯಯನ ಮುಂದುವರಿಸುವ ಯೋಜನೆ ಇದೆ. ಆ ನಂತರ ಮಾತ್ರ ನಾವು ಬೂಸ್ಟರ್ ಡೋಸ್​ ಅಗತ್ಯವಿದೆಯೋ ಇಲ್ಲವೋ ಮತ್ತು ಅಗತ್ಯವಿದ್ದರೆ, ಯಾವಾಗ ಎನ್ನುವುದನ್ನು ಹೇಳಬಹುದು ಎಂದು ಮಾಹಿತಿ ನೀಡಿದ್ದಾರೆ.

(Antibodies in covaxin recipients decline after 2 months and 3 months in covishield recipients icmr rmrc study)

ಇದನ್ನೂ ಓದಿ: Corbevax Covid 19 Vaccine: 5-18ವರ್ಷದವರ ಮೇಲೆ ’ಕಾರ್ಬ್​ವ್ಯಾಕ್ಸ್’ ಲಸಿಕೆ ಕ್ಲಿನಿಕಲ್​ ಟ್ರಯಲ್​ ನಡೆಸಲು ಡಿಸಿಜಿಐ ಅನುಮೋದನೆ 

ZyCov-D Vaccine: ಅಕ್ಟೋಬರ್​ನಲ್ಲಿ 12ರಿಂದ 17 ವರ್ಷದೊಳಗಿನ ಮಕ್ಕಳಿಗೆ ಜೈಕೋವ್-ಡಿ ಲಸಿಕೆ ಲಭ್ಯ

‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ಡಿಕೆಶಿ ಸಿಎಂ ಆಗಬೇಕು ಎಂಬ ಆಸೆ ಇದೆ, ಆದರೆ: ರಂಗನಾಥ್ ಹೇಳಿದ್ದೇನು ನೋಡಿ
ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ
ವೃಥಾ ಹೇಳಿಕೆ ನೀಡುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ತಗೊಳ್ಳುತ್ತೆ: ಸಚಿವ