Ashwini Vaishnaw: 6ಜಿ ತಂತ್ರಜ್ಞಾನದಲ್ಲಿ ಜಗತ್ತಿನ ಮುಂದಾಳತ್ವ ವಹಿಸಬಹುದು ಭಾರತ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಗಂಗೋತ್ರಿಯಲ್ಲಿ 2 ಲಕ್ಷ 5ಜಿ ಸೈಟ್​ಗೆ ಮತ್ತು ಡೆಹ್ರಾಡೂನ್​ನಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜತೆಗೂಡಿ ಚಾರ್​ಧಾಮ್ ಫೈಬರ್ ಕನೆಕ್ಟಿವಿಟಿಗೆ ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಿದರು.

Ashwini Vaishnaw: 6ಜಿ ತಂತ್ರಜ್ಞಾನದಲ್ಲಿ ಜಗತ್ತಿನ ಮುಂದಾಳತ್ವ ವಹಿಸಬಹುದು ಭಾರತ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್
Follow us
Ganapathi Sharma
|

Updated on: May 24, 2023 | 10:14 PM

ಡೆಹ್ರಾಡೂನ್‌: ದೇಶದಲ್ಲಿ ಎಂಜಿನಿಯರ್‌ಗಳು 6ಜಿ ತಂತ್ರಜ್ಞಾನದಲ್ಲಿ (6G Technology) ಪೇಟೆಂಟ್‌ಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಇದು ಈವರೆಗೆ ಸುಮಾರು 100 ರಷ್ಟಾಗಿದೆ ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದರು. ಗಂಗೋತ್ರಿಯಲ್ಲಿ 2 ಲಕ್ಷ 5ಜಿ ಸೈಟ್​ಗೆ ಮತ್ತು ಡೆಹ್ರಾಡೂನ್​ನಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜತೆಗೂಡಿ ಚಾರ್​ಧಾಮ್ ಫೈಬರ್ ಕನೆಕ್ಟಿವಿಟಿಗೆ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಬಗ್ಗೆ ಉಲ್ಲೇಖಿಸಿದ ಅವರು, 5ಜಿ ವಿಚಾರದಲ್ಲಿ ಭಾರತವು ವಿಶ್ವದ ಇತರ ದೇಶಗಳೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುತ್ತದೆ. ಆದರೆ 6ಜಿ ತಂತ್ರಜ್ಞಾನದಲ್ಲಿ ದೇಶವು ಮುಂದಾಳತ್ವ ಸಾಧಿಸಬಹುದು ಎಂದು ಹೇಳಿದರು.

ಈಗಿನ ವೇಗದ ಬೆಳವಣಿಗೆಯನ್ನು ಗಮನಿಸಿದರೆ, ಡಿಸೆಂಬರ್ 31 ರ ವೇಳೆಗೆ 3 ಲಕ್ಷ 5ಜಿ ಸೈಟ್​ಗಳನ್ನು ಹೊಂದಬಹುದಾಗಿದೆ ಎಂದು ಅವರು ಹೇಳಿದರು. ಟೆಲಿಕಾಂ ಟವರ್‌ನಲ್ಲಿರುವ ಅತ್ಯಂತ ಸುಧಾರಿತ ಮತ್ತು ಸಂಕೀರ್ಣ ಸಾಧನವೆಂದರೆ ರೇಡಿಯೊ ಉಪಕರಣ. ಈ ವಿಷಯದಲ್ಲಿ, ಭಾರತದಲ್ಲಿ ತಯಾರಿಸಿದ ಉಪಕರಣಗಳನ್ನೇ ಅಮೆರಿಕದಲ್ಲಿ ಹೆಚ್ಚಾಗಿ ಸ್ಥಾಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತವು 2022 ರ ಅಕ್ಟೋಬರ್​​ನಲ್ಲಿ 5ಜಿ ಸೇವೆ ಪ್ರಾರಂಭಿಸಿತು ಮತ್ತು ಈ ಸೇವೆ ದೇಶದಾದ್ಯಂತ ವೇಗವಾಗಿ ಜಾರಿಗೆ ಬರುತ್ತಿದೆ.

ಪ್ರಸ್ತುತ ಇರುವ ಮಾಹಿತಿಯ ಪ್ರಕಾರ, ದೂರಸಂಪರ್ಕ ಸೇವಾ ಪೂರೈಕೆದಾರರು (TSPs) ಪ್ರತಿ ವಾರ ಸುಮಾರು 10,000 ಬೇಸ್ ಟ್ರಾನ್ಸ್‌ಸಿವರ್ ಸ್ಟೇಷನ್‌ಗಳನ್ನು (BTS) ಸ್ಥಾಪಿಸುತ್ತಿದ್ದಾರೆ. ಮಾರ್ಚ್ ಅಂತ್ಯದ ವೇಳೆಗೆ ದೇಶದಾದ್ಯಂತ 500 ನಗರಗಳಲ್ಲಿ ಸೇವೆ ಲಭ್ಯವಾಗಲಿದೆ ಮತ್ತು 5ಜಿ ನೆಟ್‌ವರ್ಕ್ ಈಗ 685 ಜಿಲ್ಲೆಗಳಲ್ಲಿ ಹರಡಿರುವ 3,000 ನಗರಗಳನ್ನು ಮುಟ್ಟಿದೆ.

ಇದನ್ನೂ ಓದಿ: ಭಾರತದ ಯುಪಿಐ ಪಾವತಿ ವ್ಯವಸ್ಥೆ ಅಳವಡಿಕೆಗೆ ಮುಂದಾದ ಜಪಾನ್; ಧನ್ಯವಾದ ಹೇಳಿದ ಅಶ್ವಿನಿ ವೈಷ್ಣವ್

ಭಾರತದ 4ಜಿ ಮತ್ತು 5ಜಿ ಸ್ಟಾಕ್‌ನ ನಿಯೋಜನೆಯು ಬಿಎಸ್​ಎನ್​ಎಲ್​​ನೊಂದಿಗೆ ಪ್ರಾರಂಭವಾಯಿತು. ಚಂಡೀಗಢ ಮತ್ತು ಡೆಹ್ರಾಡೂನ್ ನಡುವೆ, 200 ಸೈಟ್‌ಗಳಲ್ಲಿ, ಅನುಷ್ಟಾನ ಪೂರ್ಣಗೊಂಡಿದೆ ಮತ್ತು ಮುಂದಿನ ಎರಡು ವಾರಗಳಲ್ಲಿ ಅದು ಲೈವ್ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಬಿಎಸ್​ಎನ್​ಎಲ್ ಸ್ಟಾಕ್ ಮೂಲತಃ 4ಜಿ ಆಗಿದ್ದು, 5ಜಿ ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ, ಸಣ್ಣ ಸಾಫ್ಟ್‌ವೇರ್ ಹೊಂದಾಣಿಕೆಯೊಂದಿಗೆ ಬಿಎಸ್​ಎನ್​ಎಲ್ ನೆಟ್‌ವರ್ಕ್ 5ಜಿ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತದ 4ಜಿ ಮತ್ತು 5ಜಿ ಅನ್ನು ಬಳಸುವುದು ಮುಖ್ಯವಾಗಿದೆ, ಇದರಿಂದಾಗಿ ಸೈಬರ್ ಭದ್ರತೆಗೆ ಸಂಬಂಧಿಸಿದ ಆತಂಕಗಳನ್ನು ಕಡಿಮೆ ಮಾಡಬಹುದು ಎಂದೂ ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್