ಬಾಟ್ಲಾ ಹೌಸ್ ಎನ್​ಕೌಂಟರ್ ನಕಲಿ ಎಂದು ಹೇಳಿದ ರಾಜಕೀಯ ನಾಯಕರು ಈಗ ಕ್ಷಮೆ ಕೇಳಲಿ: ರವಿಶಂಕರ್ ಪ್ರಸಾದ್

Batla House Encounter Case: ಬಾಟ್ಲಾ ಹೌಸ್ ಎನ್​ಕೌಂಟರ್​ನ್ನು ಪ್ರಶ್ನಿಸಿದ್ದ ಕಾಂಗ್ರೆಸ್, ಮಮತಾ ದೀದಿ ಈಗ ಯಾಕೆ ಸುಮ್ಮನಾಗಿದ್ದಾರೆ? ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.

ಬಾಟ್ಲಾ ಹೌಸ್ ಎನ್​ಕೌಂಟರ್ ನಕಲಿ ಎಂದು ಹೇಳಿದ ರಾಜಕೀಯ ನಾಯಕರು ಈಗ ಕ್ಷಮೆ ಕೇಳಲಿ: ರವಿಶಂಕರ್ ಪ್ರಸಾದ್
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 09, 2021 | 6:18 PM

ದೆಹಲಿ: 2008ರ ಬಾಟ್ಲಾ ಹೌಸ್ ಎನ್​ಕೌಂಟರ್ ಬಗ್ಗೆ ದೆಹಲಿ ಪೊಲೀಸರನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ಮಂಗಳವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್, ಬಾಟ್ಲಾ ಹೌಸ್ ಎನ್​ಕೌಂಟರ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ನೀಡಿದ ತೀರ್ಪನ್ನು ಶ್ಲಾಘಿಸಿದ್ದಾರೆ. 2008ರ ಬಾಟ್ಲಾ ಎನ್​​ಕೌಂಟರ್ ಪ್ರಕರಣದಲ್ಲಿ ನಿಷೇಧಿತ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ನ ಆರಿಜ್ ಖಾನ್ ದೋಷಿ ಎಂದು ದೆಹಲಿ ನ್ಯಾಯಾಲಯ ಸೋಮವಾರ ತೀರ್ಪು ನೀಡಿತ್ತು. ಬಾಟ್ಲಾ ಹೌಸ್ ಉಗ್ರರ ಎನ್​ಕೌಂಟರ್ ವೇಳೆ ದೆಹಲಿ ಪೊಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ ಅವರನ್ನು ಕೊಂದಿದ್ದ ಆರೋಪ ಆರಿಜ್ ಮೇಲಿತ್ತು. ಇದೀಗ ಅರೀಜ್​ನನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ. ಎನ್​ಕೌಂಟರ್ ನಡೆದಾಗ ಪೊಲೀಸರ ನಡೆಯನ್ನು ರಾಜಕೀಯ ಪಕ್ಷ ಮತ್ತು ನಾಯಕರು ಪ್ರಶ್ನಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ರವಿಶಂಕರ್ ಪ್ರಸಾದ್ ಹೇಳಿದ್ದೇನು? ದೇಶದ ರಕ್ಷಣೆ ಮತ್ತು ಉಗ್ರರ ವಿರುದ್ಧದ ಹೋರಾಟದ ವಿಷಯ ಬಂದಾಗ ಕಾಂಗ್ರೆಸ್ ಮತ್ತು ವಿಪಕ್ಷಗಳು ಉಗ್ರರ ಪರವಾಗಿ ನಿಂತು ದೆಹಲಿಯಲ್ಲಿ ಉಗ್ರರ ವಿರುದ್ಧ ಹೋರಾಟ ನಡೆಸಿದ ಪೊಲೀಸರ ಕ್ರಮವನ್ನೇ ಪ್ರಶ್ನಿಸುತ್ತವೆ. ಬಾಟ್ಲಾ ಎನ್​ಕೌಂಟರ್ ಪ್ರಕರಣದಲ್ಲಿ ನಿನ್ನೆ ನ್ಯಾಯಾಲಯ ಆರಿಜ್ ಖಾನ್ ಅವರನ್ನು ದೋಷಿ ಎಂದು ಹೇಳಿತ್ತು.

ಬಾಟ್ಲಾ ಹೌಸ್ ಎನ್​ಕೌಂಟರ್​ನ್ನು ಪ್ರಶ್ನಿಸಿದ್ದ ಕಾಂಗ್ರೆಸ್, ಮಮತಾ ದೀದಿ ಈಗ ಯಾಕೆ ಸುಮ್ಮನಾಗಿದ್ದಾರೆ? ಬಾಟ್ಲಾ ಹೌಸ್ ಎನ್​ಕೌಂಟರ್ ಪ್ರಕರಣದಲ್ಲಿ ಇಡೀ ದೇಶದ ದಾರಿ ತಪ್ಪಿಸಿದ ಸೋನಿಯಾ ಗಾಂಧಿ, ಅರವಿಂದ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಈಗ ಕ್ಷಮೆ ಕೇಳುತ್ತಾರೆಯೇ? ರಾಜಕೀಯ ಹಿತಾಸಕ್ತಿಗಾಗಿ ದೆಹಲಿ ಪೊಲೀಸರ ವಿರುದ್ಧ ನಡೆದ ಅಭಿಯಾನದ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ನಮ್ಮನ್ನು ಕಾಪಾಡಿ ಎಂದು ದೆಹಲಿ ಪೊಲೀಸರು ಪರೋಕ್ಷವಾಗಿ ನಮ್ಮಲ್ಲಿ ಬೇಡಿಕೊಂಡಿದ್ದರು. ನಾವು ದಾಳಿಕೋರರು ಎಂದು ಬಿಂಬಿಸಿ ನಮ್ಮ ವಿರುದ್ಧ ಅಭಿಯಾನ ನಡೆಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನಮ್ಮ ದೇಶವನ್ನು ಕಾಪಾಡಲು ನಾವೇನು ಮಾಡಬೇಕು ಎಂದು ದೆಹಲಿ ಪೊಲೀಸರು ನಮ್ಮಲ್ಲಿ ಕೇಳಿದ್ದರು. ಬಾಟ್ಲಾ ಹೌಸ್ ಎನ್​​ಕೌಂಟರ್ ಬಗ್ಗೆ ಸಂದೇಹ ವ್ಯಕ್ತಪಡಿಸಿ ದೆಹಲಿ ಪೊಲೀಸರ ಮನೋಬಲವನ್ನು ಕುಗ್ಗಿಸಿ, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಉಗ್ರರಿಗೆ ಕೆಲ ರಾಜಕಾರಿಣಿಗಳು ಬೆಂಬಲ ನೀಡಿದ್ದರು. ಇಬ್ಬರು ಉಗ್ರರು ಹತರಾದಾಗ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರು ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದನ್ನು ನೀವು ಕೇಳಿರಬಹುದು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಸಮಾಜವಾದಿ ಪಕ್ಷ, ಬಿಎಸ್ ಪಿ, ಕಾಂಗ್ರೆಸ್, ಎಡಪಕ್ಷ ಮತ್ತು ಮಮತಾ ಬ್ಯಾನರ್ಜಿ ಬಾಟ್ಲಾ ಹೌಸ್ ಪ್ರಕರಣವನ್ನು ರಾಷ್ಟ್ರೀಯ ಸಮಸ್ಯೆಯನ್ನಾಗಿ ಮಾಡಿದ್ದರು. ಉಗ್ರರ ವಿರುದ್ಧದ ಹೋರಾಟವು ಮತಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆಯೇ? ಆರಿಜ್ ಖಾನ್ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವನು, ಅವನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈಗ ಈ ಎಲ್ಲ ಪಕ್ಷಗಳು ದೇಶದ ಜನರ ಮುಂದೆ ಕ್ಷಮೆ ಕೇಳುತ್ತವೆಯೇ ಎಂದು ಸಚಿವರು ಪ್ರಶ್ನಿಸಿದ್ದಾರೆ.

ಎನ್​ಕೌಂಟರ್ ಬಗ್ಗೆ ಪ್ರಶ್ನೆ ಎತ್ತಿದ್ದರು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪೊಲೀಸರು ಬಾಟ್ಲಾ ಹೌಸ್ ಎನ್​ಕೌಂಟರ್ ನಡೆಸಿದಾಗ ಪೊಲೀಸರ ನಡೆ ಬಗ್ಗೆ ಕಾಂಗ್ರೆಸ್ ನೇತಾರ ದಿಗ್ವಿಜಯ್ ಸಿಂಗ್ ಸಂದೇಹ ವ್ಯಕ್ತ ಪಡಿಸಿದ್ದರು. ಈ ಎನ್​ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಒತ್ತಾಯಿಸಿತ್ತು,

ಮಾರ್ಚ್ 15ಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟ ಮಾರ್ಚ್ 15ರಂದು ನ್ಯಾಯಾಲಯ ಆರಿಜ್ ಖಾನ್​​ಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಆರಿಜ್ ಖಾನ್​ಗೆ ನೇಣು ಇಲ್ಲವೇ ಜೀವಾವಧಿ ಶಿಕ್ಷೆ ವಿಧಿಸಲಾಗುವುದು. ಪ್ರಕರಣ ನಡೆದು 10 ವರ್ಷಗಳ ನಂತರ ಭಾರತ- ನೇಪಾಳದ ಗಡಿ ಪ್ರದೇಶ ಬಂಬಾಸದಲ್ಲಿ 2018 ಫೆಬ್ರವರಿ 14ರಂದು ಆರಿಜ್ ಖಾನ್ ನ್ನು ಬಂಧಿಸಲಾಗಿತ್ತು. ಉತ್ತರ ಪ್ರದೇಶದ ಅಜಾಂಗಡ ನಿವಾಸಿಯಾಗಿರುವ ಖಾನ್, 2008ರಲ್ಲಿ ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಉತ್ತರಪ್ರದೇಶದಲ್ಲಿ ನಡೆದ ಸರಣಿ ಬಾಂಬ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾನೆ. ಈ ಸರಣಿ ಬಾಂಬ್ ಸ್ಫೋಟದಲ್ಲಿ 165 ಮಂದಿ ಸಾವಿಗೀಡಾಗಿದ್ದು, 500 ಮಂದಿ ಗಾಯಗೊಂಡಿದ್ದರು.

ಏನಿದು ಬಾಟ್ಲಾ ಹೌಸ್ ಎನ್​​ಕೌಂಟರ್ ಪ್ರಕರಣ? ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟ ನಡೆದ 6 ದಿನಗಳ ನಂತರ ದೆಹಲಿಯ ಜಾಮಿಯಾ ನಗರದಲ್ಲಿರುವ ಎಲ್-18 ಬಾಟ್ಲಾ ಹೌಸ್​ನಲ್ಲಿ ಎನ್​ಕೌಂಟರ್ ನಡೆಿದಿತ್ತು. ದೆಹಲಿ ಸರಣಿ ಬಾಂಬ್ ಸ್ಫೋಟದಲ್ಲಿ 30 ಮಂದಿ ಹತ್ಯೆಗೀಡಾಗಿದ್ದರು. ಉಗ್ರರು ಬಾಟ್ಲಾ ಹೌಸ್​ನಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ದೆಹಲಿ ಪೊಲೀಸ್ ವಿಶೇಷ ಪಡೆ 2008 ಸೆಪ್ಟೆಂಬರ್ 19ರಂದು ದಾಳಿ ನಡೆಸಿತ್ತು. ದೆಹಲಿ ಪೊಲೀಸ್ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ದೆಹಲಿ ಪೊಲೀಸ್ ಇನ್ಸ್​​ಪೆಕ್ಟರ್ ಮೋಹನ್​ ಚಂದ್ ಶರ್ಮಾ ಪ್ರಾಣ ಕಳೆದುಕೊಂಡರು. ಆರಿಜ್ ಖಾನ್, ಶಹಜಾದ್ ಮತ್ತು ಜುನೈದ್ ಎಂಬವರು ತಪ್ಪಿಸಿಕೊಂಡರು. ಶಂಕಿತ ಉಗ್ರರಾದ ಆತಿಫ್ ಅಮೀನ್, ಮೊಹಮ್ಮದ್ ಸಾಜಿದ್ ಶೂಟೌಟ್​ನಲ್ಲಿ ಹತ್ಯೆಗೀಡಾಗಿದ್ದು, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರ ಮೊಹಮ್ಮದ್ ಸೈಫ್ ಶರಣಾಗಿದ್ದನು.

ಬಾಟ್ಲಾಹೌಸ್ ಎನ್​ಕೌಂಟರ್ ಘಟನಾವಳಿ

ಜನವರಿ 1, 2010: ತಲೆಮರಿಸಿಕೊಂಡಿದ್ದ ಉಗ್ರಗಾಮಿ ಶಹಜಾದ್​ನನ್ನು ಉತ್ತರಪ್ರದೇಶದ ಆಜಂಗಡ್​ನಲ್ಲಿ ಬಂಧಿಸಲಾಯಿತು. ಏಪ್ರಿಲ್ 2010: ದೆಹಲಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಕೆ. 2008 ಸೆಪ್ಟೆಂಬರ್ 13 ರಂದು ಕರೋಲ್ ಭಾಗ್, ಕನೌಟ್ ಪ್ಲೇಸ್, ಗ್ರೇಟರ್ ಕೈಲಾಶ್, ಇಂಡಿಯಾಗೇಟ್ ಬಳಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಭಾಗವಾಗಿತ್ತು ಈ ಎನ್​ಕೌಂಟರ್ ಎಂದು ಆರೋಪಪಟ್ಟಿಯಲ್ಲಿ ಹೇಳಿತ್ತು. ಜುನೈದ್​ನನ್ನು ಅಪರಾಧಿ ಎಂದು ಘೋಷಿಸಲಾಯಿತು. ಫೆಬ್ರವರಿ 15, 2011: ಶಹಜಾದ್ ಮೇಲೆ ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಜುಲೈ 20, 2013 : ತೀರ್ಪು ಕಾಯ್ದಿರಿಸಿದ ನ್ಯಾಯಾಲಯ ಜುಲೈ 25, 2013: ಪೊಲೀಸ್ ಅಧಿಕಾರಿ ಶರ್ಮಾ ಅವರ ಹತ್ಯೆ ಪ್ರಕರಣದಲ್ಲಿ ಶಹಜಾದ್ ದೋಷಿ ಎಂದ ನ್ಯಾಯಾಲಯ ಜುಲೈ 30 , 2013: ಶಹಜಾದ್​ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ ಫೆಬ್ರವರಿ 13, 2018: ಆರಿಜ್ ಖಾನ್ ಬಂಧನ ಮಾರ್ಚ್ 8, 2021: ಆರಿಜ್ ಖಾನ್ ದೋಷಿ ಎಂದ ನ್ಯಾಯಾಲಯ, ಮಾರ್ಚ್15ಕ್ಕೆ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ, ದೆಹಲಿ ಮಹಿಳೆಯರ ಬಗ್ಗೆ ನರೇಂದ್ರ ಮೋದಿ ಯೋಚಿಸಲಿ: ಮಮತಾ ಬ್ಯಾನರ್ಜಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್