ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ: 6 ನೇಹಂತದ ಚುನಾವಣೆಯಲ್ಲಿ ಬಿಜೆಪಿ, ಟಿಎಂಸಿ ನಡುವೆ ನಡೆಯಲಿದೆ ಪ್ರಬಲ ಪೈಪೋಟಿ

ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ: 6 ನೇಹಂತದ ಚುನಾವಣೆಯಲ್ಲಿ ಬಿಜೆಪಿ, ಟಿಎಂಸಿ ನಡುವೆ ನಡೆಯಲಿದೆ ಪ್ರಬಲ ಪೈಪೋಟಿ
ಮಮತಾ ಬ್ಯಾನರ್ಜಿ- ನರೇಂದ್ರ ಮೋದಿ

West Bengal Assembly Elections 2021: ಎಡಪಕ್ಷ-ಕಾಂಗ್ರೆಸ್- ಐಎಸ್ಎಫ್ ಮೈತ್ರಿಕೂಟವು ಮುಸ್ಲಿಂ ಮತಗಳನ್ನು ಒಡೆಯಲಿ ಎಂದು ಬಿಜೆಪಿ ಬಯಸುತ್ತಿದೆ. ಯಾಕೆಂದರೆ ಈ ಚುನಾವಣೆಯಲ್ಲಿ ಮುಸ್ಲಿಮರು ಮಮತಾ ಬ್ಯಾನರ್ಜಿಗೆ ಮತ ಹಾಕುತ್ತಾರೆ ಎಂಬುದು ಬಿಜೆಪಿಯ ಲೆಕ್ಕಾಚಾರ.

Rashmi Kallakatta

|

Apr 21, 2021 | 6:38 PM

ಪಶ್ಚಿಮ ಬಂಗಾಳದಲ್ಲಿ ನಡೆದ 5 ನೇ ಹಂತದ ಚುನಾವಣೆಯಂತೆ 6 ನೇ ಹಂತದ ಚುನಾವಣೆಯು ಬಂಗಾಳದ ಉತ್ತರ ಮತ್ತು ದಕ್ಷಿಣ ಜಿಲ್ಲೆಗಳ ನಡುವಿನ ಪೈಪೋಟಿ ಆಗಲಿದೆ. ಉತ್ತರ ಬಂಗಾಳದಲ್ಲಿರುವ ಉತ್ತರ ದಿನಜ್​ಪುರ್ ಮತ್ತು ನಾಡಿಯಾ, ಸೌತ್ 24 ಪರಗಣ, ಪೂರ್ವ ಬುರ್ದ್ವಾನ್ ಇವುಗಳೆಲ್ಲ ದಕ್ಷಿಣ ಬಂಗಾಳದಲ್ಲಿದೆ. ಏಪ್ರಿಲ್ 22 ಕ್ಕೆ ನಡೆಯುವ 6ನೇಹಂತದ ಚುನಾವಣೆಯಲ್ಲಿ 43 ಚುನಾವಣಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸೌತ್ 24 ಪರಗಣದ 17 ವಿಧಾನಸಭಾ ಕ್ಷೇತ್ರ, ಉತ್ತರ ದಿನಜ್​ಪುರ್ ಮತ್ತು ನಾಡಿಯಾದಲ್ಲಿನ ತಲಾ 9 ಕ್ಷೇತ್ರಗಳು, ಪೂರ್ವ ಬುರ್ದ್ವಾನ್ ನಲ್ಲಿರುವ 8 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ .

2016ರ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ 43 ಸೀಟು ಗಳ ಪೈಕಿ 33 ಸೀಟುಗಳನ್ನು ಗೆದ್ದುಕೊಂಡಿತ್ತು . ಕಾಂಗ್ರೆಸ್ 6, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಮೂರು ಮತ್ತು ಫಾರ್ವರ್ಡ್ ಬ್ಲಾಕ್ 1 ಸೀಟುಗಳಿಸಿತ್ತು. ಬಿಜೆಪಿ ಯಾವುದೇ ಸೀಟು ಗೆಲ್ಲಲಿಲ್ಲ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ಸಿಕ್ಕಿದ್ದು 19 ಸೀಟುಗಳಲ್ಲಿ ಮುನ್ನಡೆ ಸಾಧಿಸಿತ್ತು. ಅದೇ ವೇಳೆ ಟಿಎಂಸಿ 24 ಸೀಟುಗಳಲ್ಲಿ ಮೇಲುಗೈ ಸಾಧಿಸಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ದಿನಜ್​ಪುರ್ ಜಿಲ್ಲೆಯ 9 ಸೀಟುಗಳಲ್ಲಿ ಟಿಎಂಸಿಗೆ ಹಿನ್ನಡೆಯಾಗಿತ್ತು. ಇಲ್ಲಿನ ಒಳ ನುಸುಳುವಿಕೆಯನ್ನು ನಿಯಂತ್ರಿಸಲು  ಮಮತಾ ಬ್ಯಾನರ್ಜಿ ಪ್ರಸ್ತುತ ಜಿಲ್ಲೆಯ 6 ಅಭ್ಯರ್ಥಿಗಳನ್ನು ಬದಲಿಸಿದ್ದರು.

ನಾರ್ಥ್ 24 ಪರಗಣದ 17 ಸೀಟುಗಳಲ್ಲಿ ಆಡಳಿತಾರೂಢ ಪಕ್ಷವು 2019ರಲ್ಲಿ ಬಿಜೆಪಿಯಿಂದ 10ಸೀಟುಗಳಷ್ಟು ಹಿಂದೆ ಇತ್ತು . ಹಾಗಾಗಿ ವಿಧಾನಸಭಾ ಚುನಾವಣೆಯ ಹೊತ್ತಲ್ಲಿ ಟಿಎಂಸಿ 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಿದೆ. ನಾಡಿಯಾದಲ್ಲಿ 2019ರಲ್ಲಿ ಟಿಎಂಸಿ ಮೂರು ಸೀಟುಗಳಲ್ಲಿ ಹಿನ್ನಡೆ ಅನುಭವಿಸಿತ್ತು. ಹಾಗಾಗಿ ಟಿಎಂಸಿ ಇಲ್ಲಿನ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಿದೆ.

ಪೂರ್ವ ಬುರ್ದ್ವಾನ್​ನ ಎಂಟು ಕ್ಷೇತ್ರಗಳಿಗೆ ಏಪ್ರಿಲ್ 22ಕ್ಕೆ ಮತದಾನ ನಡೆಯಲಿದೆ. ಇಲ್ಲಿ ಎರಡು ಸೀಟುಗಳಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿದೆ. ಈ ಎರಡೂ ಕ್ಷೇತ್ರಗಳಲ್ಲಿ ಪಕ್ಷ ಅಭ್ಯರ್ಥಿಗಳನ್ನು ಬದಲಿಸಿದೆ.

ಒಟ್ಟಿನಲ್ಲಿ 2016 ವಿಧಾನಸಭೆ ಚುನಾವಣೆಯ ಪಟ್ಟಿಯನ್ನು ಗಮನಿಸಿದರೆ ಈ ಬಾರಿ ಟಿಎಂಸಿ 24ಅಭ್ಯರ್ಥಿಗಳನ್ನು ಬದಲಿಸಿದೆ. ಟಿವಿ9 ಚುನಾವಣಾ ಅಧ್ಯಯನ ತಂಡದ ಪ್ರಕಾರ ಇಲ್ಲಿ ಮುಸ್ಲಿಂ ಜನಸಂಖ್ಯೆ ಶೇ30 ರಷ್ಟಿದೆ. ಪರಿಶಿಷ್ಟ ಜಾತಿ ಶೇ 26ರಷ್ಟಿದ್ದು, ಪರಿಶಿಷ್ಟ ಪಂಗಡದವರು ಶೇ3ರಷ್ಟಿದ್ದಾರೆ.

15 ವಿಧಾನಸಭಾ ಕ್ಷೇತ್ರದಲ್ಲಿ ಶೇ 20ಕ್ಕಿಂತಲೂ ಹೆಚ್ಚು ಮಟುವಾ ಮತದಾರರಿದ್ದಾರೆ. 5 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 20ಕ್ಕಿಂತಲೂ ಹೆಚ್ಚು ರಾಜೂಬೋಂಗಶಿಸ್ ಮತದಾರರಿದ್ದು 29 ಚುನಾವಣಾ ಕ್ಷೇತ್ರಗಳಲ್ಲಿ ಶೇ 20ಕ್ಕಿಂತಲೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ.

ಮಟುವಾ ಮತ್ತು ರಾಜಬೋಂಗಶಿಶ್ ಅವರ ಓಲೈಕೆಯೇ ಬಿಜೆಪಿಯ ಕಾರ್ಯತಂತ್ರ ಆಗಿದೆ. ಬಾಂಗ್ಲಾದೇಶದಿಂದ ವಲಸೆ ಬಂದು ಬಂಗಾಳದಲ್ಲಿ ನೆಲೆಸಿರುವ ದಲಿತ ಸಮುದಾಯವಾಗಿದೆ ಮಟುವಾ. 100 ವರ್ಷಕ್ಕಿಂತಲೂ ಹಳೆಯ ಸಮುದಾಯವಾಗಿದೆ ಇದು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿರುವ ಬಿಜೆಪಿ ಪಿ ಈ ಮೂಲಕ ಮಟುವಾ ಸಮುದಾಯಕ್ಕೆ ಪೌರತ್ವ ನೀಡುತ್ತೇವೆ ಎಂಬ ಭರವಸೆ ನೀಡಿದೆ.

6 ನೇಹಂತದ ಮತದಾನ ನಡೆಯಲಿರುವ ನಾಡಿಯಾ, ನಾರ್ಥ್ 24 ಪರಗಣ ಮತ್ತು ಪೂರ್ವ ಬುರ್ದ್ವಾನ್​ನಲ್ಲಿ ಮಟುವಾ ಮತದಾರರು ಹೆಚ್ಚಿನ ಪ್ರಭಾವ ಬೀರಲಿದ್ದಾರೆ. ರಾಜಬೋಂಗಶಿಶ್ ಉತ್ತರ ಬಂಗಾಳದ ಮೂಲದವರಾಗಿದ್ದು, ಈ ಸಮುದಾಯದ ಯುವಕರಿಗೆ ಕೇಂದ್ರೀಯ ಭದ್ರತಾ ಪಡೆ (ರಾಜಬೋಂಗಶಿಶ್)ಯಲ್ಲಿ ನಾರಾಯಣಿಸೇನಾ ಮೂಲಕ ಉದ್ಯೋಗ ನೀಡಿ, ಪ್ರಸ್ತುತ ಸಮುದಾಯದ ಉದ್ಧಾರ ಮಾಡುವುದಾಗಿ ಬಿಜೆಪಿ ಭರವಸೆ ನೀಡಿದೆ.

ಎಡಪಕ್ಷ-ಕಾಂಗ್ರೆಸ್- ಐಎಸ್ಎಫ್ ಮೈತ್ರಿಕೂಟವು ಮುಸ್ಲಿಂ ಮತಗಳನ್ನು ಒಡೆಯಲಿ ಎಂದು ಬಿಜೆಪಿ ಬಯಸುತ್ತಿದೆ. ಯಾಕೆಂದರೆ ಈ ಚುನಾವಣೆಯಲ್ಲಿ ಮುಸ್ಲಿಮರು ಮಮತಾ ಬ್ಯಾನರ್ಜಿಗೆ ಮತ ಹಾಕುತ್ತಾರೆ ಎಂಬುದು ಬಿಜೆಪಿಯ ಲೆಕ್ಕಾಚಾರ.

ಟಿಎಂಸಿ ಕೂಡಾ ಮಟುವಾ ಸಮುದಾಯವನ್ನು ಓಲೈಸುವಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿ ಚುನಾವಣೆಗೆ ಮುನ್ನ ಮಟುವಾ ಸಮುದಾಯದವರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರಿಗೆ ಸಮುದಾಯವನ್ನು ಉದ್ಧಾರ ಮಾಡುವ ಯಾವುದೇ ಆಸಕ್ತಿ ಇಲ್ಲ. ನಮ್ಮ ಸರ್ಕಾರ ಇಷ್ಟು ವರ್ಷ ಮಟುವಾ ಸಮುದಾಯದವರಿಗಾಗಿ ಕೆಲಸ ಮಾಡಿದೆ ಎಂದು ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರು ಮಟುವಾ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದು ಸುಮಾರು 25,000 ಮಟವಾ ಜನರಿಗೆ ಜಮೀನಿನ ಹಕ್ಕು ನೀಡಲಾಗಿದೆ.

ಅದೇ ವೇಳೆ ಟಿಎಂಸಿ ಮುಸ್ಲಿಂ ಸಮುದಾಯವನ್ನು ಓಲೈಸುವ ಕೆಲಸ ಮಾಡುತ್ತಿದೆ. ರಾಜಕೀಯ ತಜ್ಞರ ಪ್ರಕಾರ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಮತ ಹಾಕಲಿದ್ದಾರೆ. ಒಳ ನುಸುಳುವಿಕೆಯನ್ನು ತಡೆಯುವುದಕ್ಕಾಗಿ ಟಿಎಂಸಿ 43 ಸೀಟುಗಳಲ್ಲಿ 24 ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ 2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ (ಎಂ) 10 ಸೀಟುಗಳನ್ನು ಗೆದ್ದುಕೊಂಡಿತ್ತು. ಆದಾಗ್ಯೂ 2019ರ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಗಳು ಯಾವುದೇ ಚುನಾವಣಾ ಕ್ಷೇತ್ರ ದಲ್ಲಿ ಮುನ್ನಡೆ ಸಾಧಿಸಿಲ್ಲ. ಹೀಗಿರುವಾಗ ಅಭ್ಯರ್ಥಿಗಳ ಮೂಲಕವೇ ಬದಲಾವಣೆ ತರಲು ಪಕ್ಷಗಳು ಪ್ರಯತ್ನಿಸುತ್ತಿವೆ.

ವಿಶ್ಲೇಷಣೆಯ ಪ್ರಕಾರ ಉತ್ತರ ದಿನಜ್​ಪುರ್​ನಲ್ಲಿ ಟಿಎಂಸಿ ಪರ ಹೆಚ್ಚು ಒಲವುಇದೆ. ಅದೇ ವೇಳೆ ನಾಡಿಯಾದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲವಿದೆ. ನಾರ್ಥ್ 24 ಪರಗಣದಲ್ಲಿ ಉಭಯ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದ್ದರೂ ಟಿಎಂಸಿ ಪರ ಮತದಾರರಿಗೆ ತುಸು ಒಲವು ಹೆಚ್ಚು ಇದೆ. ಬುರ್ದ್ವಾನ್ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ.

ಇದನ್ನೂ ಓದಿ:ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ; ಈ ಬಾರಿ ಯಾರ ಕೈ ಹಿಡಿಯಲಿದ್ದಾರೆ ಮಹಿಳಾ ಮತದಾರರು?

ರಾಜಕೀಯ ವಿಶ್ಲೇಷಣೆ | ಪಶ್ಚಿಮ ಬಂಗಾಳದಲ್ಲಿ ಹಾಲಿ ಸಂಸದರು, ಅರ್ಥಶಾಸ್ತ್ರಜ್ಞ, ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದ ಬಿಜೆಪಿ

Follow us on

Related Stories

Most Read Stories

Click on your DTH Provider to Add TV9 Kannada