ಸ್ಕ್ರೀನಿಂಗ್, ಟೆಸ್ಟಿಂಗ್: ಮಂಕಿಪಾಕ್ಸ್ ಕುರಿತು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಹೊಸ ಮಾರ್ಗಸೂಚಿ
ಕೇಂದ್ರ ಸರ್ಕಾರವು ಮಂಕಿಪಾಕ್ಸ್ ಕಾಯಿಲೆ ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಮಾರ್ಗಸೂಚಿಯನ್ನು ರವಾನಿಸಿದೆ. ಇದುವರೆಗೆ ಭಾರತದಲ್ಲಿ ಯಾವುದೇ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದರು.
ಕೇಂದ್ರ ಸರ್ಕಾರವು ಮಂಕಿಪಾಕ್ಸ್ ಕಾಯಿಲೆ ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಮಾರ್ಗಸೂಚಿಯನ್ನು ರವಾನಿಸಿದೆ. ಇದುವರೆಗೆ ಭಾರತದಲ್ಲಿ ಯಾವುದೇ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದರು. ಎಲ್ಲಾ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ತೆರಳುವಾಗ ಗಡಿ ಪ್ರದೇಶಗಳಲ್ಲಿ ಆರೋಗ್ಯ ತಪಾಣೆ, ರೋಗದ ಲಕ್ಷಣ ಪತ್ತೆಹಚ್ಚುವಿಕೆ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳುವಂತೆ ಕೇಂದ್ರ ಸೂಚಿಸಿದೆ.
ಹಾಗೆಯೇ ಮಂಕಿಪಾಕ್ಸ್ ಕುರಿತು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಸೇರಿದಂತೆ ಎಲ್ಲರೂ ಜಾಗ್ರತರಾಗಿರುವಂತೆ ಕೇಳಿಕೊಳ್ಳಲಾಗಿದೆ. ಮಂಕಿಪಾಕ್ಸ್ನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಾಗ, ತಕ್ಷಣವೇ ಪರೀಕ್ಷೆಯನ್ನು ನಡೆಸಬೇಕು ಎಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಲಾಗಿದೆ.
#Monkeypox |Union Health Secretary Rajesh Bhushan writes to Additional Chief Secretary/Principal Secretary/Secretary (Health) of all States/UTs, reiterating some of the key actions that are required to be taken by all States/UTs in line with MoHFW’s guidance issued on the subject pic.twitter.com/fb7jdZPz8U
— ANI (@ANI) July 14, 2022
ಕೇರಳದಲ್ಲಿ ಯುಎಇಯಿಂದ ಬಂದಿರುವ ವ್ಯಕ್ತಿಯಲ್ಲಿ ಮಂಕಿಪಾಕ್ಸ್ನ ಲಕ್ಷಣಗಳು ಕಂಡುಬಂದಿರುವ ಕುರಿತು ಮಾಹಿತಿ ಲಭ್ಯವಾಗಿತ್ತು, ಈ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪುಣೆಯಲ್ಲಿರುವ ವೈರಾಲಜಿ ಲ್ಯಾಬ್ಗೆ ಸ್ಯಾಂಪಲ್ಗಳನ್ನು ಕಳುಹಿಸಿದ್ದರು. ಮಂಕಿಪಾಕ್ಸ್ ರೋಗವು ಮೊದಲು ಕೋತಿಗಳಲ್ಲಿ ಮಾತ್ರ ಕಂಡುಬರುತ್ತಿತ್ತು. ಆಫ್ರಿಕಾ, ಯುರೋಪ್, ಅಮೆರಿಕದಲ್ಲಿ ಈ ಮೊದಲು ಹೆಚ್ಚಾಗಿ ಕಾಣಿಸಿಕೊಂಡಿತ್ತು.
ಸುಮಾರು 60 ದೇಶಗಳಲ್ಲಿ ಜುಲೈ 13ರವರೆಗೆ 10,400ಕ್ಕೂ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದವು. ಮಂಕಿಪಾಕ್ಸ್ ವೈರಾಣು ಸಿಡುಬು ಉಂಟುಮಾಡುವ ವೈರಾಣುವಿಗೆ ಸಂಬಂಧಿಸಿದ್ದಾಗಿದ್ದು, ಸಿಡುಬು ವೈರಾಣುವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆದರೆ ಇವೆರಡೂ ಪೋಕ್ಸ್ವಿರಿಡೆ ಎಂಬ ತಳಿಯ ಪೈಕಿ ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದ್ದಾಗಿದ್ದು ಮಂಕಿಪಾಕ್ಸ್ ನ ಮೊದಲ ಪ್ರಕರಣವನ್ನು 1958 ರಲ್ಲಿ ಸಂಶೋಧನೆಗಾಗಿ ಹಿಡಿದಿಟ್ಟಿದ್ದ ಮಂಗಗಳಿಂದ ಪತ್ತೆ ಮಾಡಲಾಗಿತ್ತು.
1970 ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಈ ಖಾಯಿಲೆ ಪತ್ತೆಯಾಗಿತ್ತು. 2020 ರಲ್ಲಿ ಡಬ್ಲ್ಯುಹೆಚ್ಒ ನೀಡಿದ ಮಾಹಿತಿಯ ಪ್ರಕಾರ 4,594 ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, 171 ಸಾವು ಸಂಭವಿಸಿದೆ (ಮರಣ ಪ್ರಮಾಣ ಶೇ.3.7 ರಷ್ಟಿದೆ) ಈ ಪ್ರಣಗಳು ಪತ್ತೆಯಾದಲ್ಲಿ ಪಿಸಿಆರ್ ಪರೀಕ್ಷೆ ಸೌಲಭ್ಯಗಳು ಲಭ್ಯವಿಲ್ಲದ ಕಾರಣ ಇವುಗಳನ್ನು ಶಂಕಿತ ಪ್ರಕರಣಗಳೆಂದು ಗುರುತಿಸಲಾಗಿದೆ.
ಲಕ್ಷಣಗಳು
ಜ್ವರ, ತಲೆ ನೋವು, ಬೆನ್ನು ನೋವು, ಸ್ನಾಯು ನೋವು, ಚಳಿ ಹಾಗೂ ಬಳಲಿಕೆ, ಜ್ವರದೊಂದಿಗೆ ದೇಹದ ಬೇರೆ ಭಾಗಗಳಿಗೆ ಹರಡುವುದಕ್ಕೂ ಮುನ್ನ, ಮುಖ, ಕೈ ಕಾಲುಗಳಲ್ಲಿ ದದ್ದು ಹೊರಹೊಮ್ಮುತ್ತದೆ. ಬಳಿಕ ಬಾಯಿಯ ಒಳಗೆ, ಕಾರ್ನಿಯಾ, ಜನನಾಂಗಗಳಲ್ಲೂ ಕಾಣಿಸಿಕೊಳ್ಳಬಹುದಾಗಿದೆ.