ಹೊಸ ಸಂಸತ್ ಭವನದ ನಿರ್ಮಾಣ ವೆಚ್ಚ ಶೇ.29 ರಷ್ಟು ಹೆಚ್ಚಳ; ಸೆಂಟ್ರಲ್ ವಿಸ್ಟಾ ಯೋಜನೆಯ ಖರ್ಚು ಎಷ್ಟು?

Central Vista: ವರ್ಷದ ಹಿಂದೆ, ಡಿಸೆಂಬರ್ 2020 ರಲ್ಲಿ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಟಾಟಾ ಪ್ರಾಜೆಕ್ಟ್ಸ್ ಮೂಲಕ ಯೋಜನೆಯ ಶೇಕಡಾ 40 ರಷ್ಟು ಕೆಲಸ ಆಗಿದೆ ಎಂದು ತಿಳಿದುಬಂದಿದೆ.

ಹೊಸ ಸಂಸತ್ ಭವನದ ನಿರ್ಮಾಣ ವೆಚ್ಚ ಶೇ.29 ರಷ್ಟು ಹೆಚ್ಚಳ; ಸೆಂಟ್ರಲ್ ವಿಸ್ಟಾ ಯೋಜನೆಯ ಖರ್ಚು ಎಷ್ಟು?
ಸೆಂಟ್ರಲ್ ವಿಸ್ಟಾ
Follow us
TV9 Web
| Updated By: ganapathi bhat

Updated on: Jan 21, 2022 | 9:22 AM

ದೆಹಲಿ: ಭಾರತದ ಹೊಸ ಸಂಸತ್ ಭವನ, ಸೆಂಟ್ರಲ್ ವಿಸ್ಟಾ ಯೋಜನೆಗೆ ಮತ್ತೆ 282 ಕೋಟಿ ರೂಪಾಯಿ ಹೆಚ್ಚು ಖರ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ. ಯೋಜನೆಗೆ ಮೀಸಲಿಟ್ಟಿದ್ದ ಸಂಪೂರ್ಣ ಬಜೆಟ್​ಗೆ ಹೋಲಿಸಿದರೆ ಶೇಕಡಾ 29 ರಷ್ಟು ಹೆಚ್ಚಳ ಇದಾಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಗೆ 977 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ವರ್ಷದ ಹಿಂದೆ, ಡಿಸೆಂಬರ್ 2020 ರಲ್ಲಿ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಟಾಟಾ ಪ್ರಾಜೆಕ್ಟ್ಸ್ ಮೂಲಕ ಯೋಜನೆಯ ಶೇಕಡಾ 40 ರಷ್ಟು ಕೆಲಸ ಆಗಿದೆ ಎಂದು ತಿಳಿದುಬಂದಿದೆ.

ಬಜೆಟ್​ನಲ್ಲಿ ಬದಲಾವಣೆ ಆದರೂ ಕಟ್ಟಡ ನಿರ್ಮಾಣ ಯೋಜನೆಯ ಅವಧಿ ಮೊದಲು ತಿಳಿಸಿದಷ್ಟೇ ಇರಲಿದೆ ಎಂದು ಹೇಳಲಾಗಿದೆ. ಸೆಂಟ್ರಲ್ ವಿಸ್ಟಾ ಯೋಜನೆ, ನೂತನ ಸಂಸತ್ ಭವನವು 13 ಎಕರೆಗಳಷ್ಟು ಪ್ರದೇಶದಲ್ಲಿ ನಿರ್ಮಾಣ ಆಗಲಿದೆ. ಈ ಮೊದಲು ಕಟ್ಟಡ ನಿರ್ಮಾಣವನ್ನು ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಅವಧಿಯ ಒಳಗಾಗಿ ಪೂರ್ಣಗೊಳಳಿಸಬೇಕು ಎಂದು ನಿಗದಿಪಡಿಸಲಾಗಿತ್ತು. ಬಳಿಕ ಅವಧಿಯನ್ನು ಅಕ್ಟೋಬರ್​ಗೆ ವಿಸ್ತರಿಸಲಾಗಿದೆ.

ಸಂಸತ್ ಭವನ ಸೆಂಟ್ರಲ್ ವಿಸ್ಟಾ ಯೋಜನೆಯು ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿಲ್ಲ. ಈ ಯೋಜನೆಯ ರಾಷ್ಟ್ರೀಯ ಅಗತ್ಯ, ಆಸಕ್ತಿಯ ಭಾಗ ಆಗಿರುವುದರಿಂದ ಕೊರೊನಾ ನಿಯಮಗಳನ್ನು ಸಂಸತ್ ಭವನ ನಿರ್ಮಾಣಕ್ಕೆ ಅಳವಡಿಸಲಾಗಿಲ್ಲ. ಈಗಿರುವ ಸಂಸತ್ ಭವನವು ಬ್ರಿಟೀಷ್ ನಿರ್ಮಿತ ಕಟ್ಟಡವಾಗಿದ್ದು 1927ರಲ್ಲಿ ನಿರ್ಮಾಣಗೊಂಡಿದೆ. ಆಧುನಿಕ ಕಾಲಕ್ಕೆ ಅಗತ್ಯ ಸೌಲಭ್ಯಗಳನ್ನು ಹಳೆಯ ಕಟ್ಟಡ ಹೊಂದಿಲ್ಲ. ಕಟ್ಟಡ ಶಿಥಿಲಗೊಳ್ಳುತ್ತಿದೆ. ಹಾಗೂ ಹಳೆಯ ಕಟ್ಟಡವು ಭೂಕಂಪ, ಅಗ್ನಿ ಅವಘಢ ತಡೆಯುವ ಸುರಕ್ಷತಾ ಅಗತ್ಯಗಳನ್ನು ಹೊಂದಿಲ್ಲ.

ಸಂಸತ್ ಭವನದ ಹೊಸ ಕಟ್ಟಡವು ಲೋಕಸಭೆಯ ಚೇಂಬರ್​ನಲ್ಲಿ 888 ಸದಸ್ಯರಿಗೆ ಆಸನ ವ್ಯವಸ್ಥೆ ಹೊಂದಿರಲಿದೆ. ಮತ್ತು ಜಂಟಿ ಅಧಿವೇಶನ ಸಂದರ್ಭ ಅದನ್ನು 1,224 ಸದಸ್ಯರವರೆಗೂ ವಿಸ್ತರಣೆ ಮಾಡಬಹುದಾಗಿದೆ. ರಾಜ್ಯಸಭೆಯ ಚೇಂಬರ್ 384 ಸದಸ್ಯರಿಗೆ ಆಸನ ವ್ಯವಸ್ಥೆ ಹೊಂದಿರಲಿದೆ. ಸಂಸತ್​ನ ಪ್ರತಿ ಸದಸ್ಯರಿಗೆ 40 ಸ್ಕ್ವಾರ್ ಮೀಟರ್​​ನ ಕಚೇರಿ ಸ್ಥಳ ಇರಲಿದೆ. ಇದು 2024ರ ವೇಳೆಗೆ ಸಂಪೂರ್ಣಗೊಳ್ಳಲಿದೆ. ಹೊಸ ಸಂಸತ್ ಭವನವು ಭಾರತ ದೇಶದ ವಾಸ್ತುಶಿಲ್ಪ, ಕಲೆಯನ್ನು ದೇಶದ ವಿವಿಧ ಭಾಗಗಳಿಂದ ಹೊಂದಿರಲಿದೆ.

ಇದನ್ನೂ ಓದಿ: ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಸೈಟ್‌ನ ಭೂ ಬಳಕೆಯಲ್ಲಿ ಬದಲಾವಣೆ ಪ್ರಶ್ನಿಸಿದ ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಇದನ್ನೂ ಓದಿ: ಸೆಂಟ್ರಲ್ ವಿಸ್ಟಾ ನಿರ್ಮಾಣ ಸ್ಥಳ ಪರಿಶೀಲಿಸಲು ಬಂದ ಮೋದಿ ಫೋಟೊ ಕ್ಲಿಕ್ಕಿಸಲು ನೆಲದಲ್ಲಿ ಮಲಗಿದ ಫೋಟೊಗ್ರಾಫರ್; ವೈರಲ್ ಫೋಟೊ ಫೇಕ್

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್