ವಕ್ಫ್ ಮಂಡಳಿಯ ಹಕ್ಕುಗಳ ಕಡಿತ, ಮುಸ್ಲಿಮೇತರರ ಪ್ರವೇಶ, ಮಸೂದೆಯಲ್ಲಿ ಏನೆಲ್ಲಾ ಬದಲಾವಣೆ ಇದೆ? ಇಲ್ಲಿದೆ ಮಾಹಿತಿ
1995ರ ವಕ್ಫ್ ಕಾಯ್ದೆಗೆ ಪ್ರಮುಖ ಬದಲಾವಣೆಗಳನ್ನು ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಪ್ರತಿಪಕ್ಷಗಳ ಟೀಕೆಯ ನಡುವೆ ಲೋಕಸಭೆಯಲ್ಲಿ ಗುರುವಾರ ಮಂಡಿಸಲಾಯಿತು. ಮಸೂದೆಯನ್ನು ಹೆಚ್ಚಿನ ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಬುಧವಾರ ಒತ್ತಾಯಿಸಿದ್ದವು.
1995ರ ವಕ್ಫ್ ಕಾಯ್ದೆಗೆ ಪ್ರಮುಖ ಬದಲಾವಣೆಗಳನ್ನು ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಪ್ರತಿಪಕ್ಷಗಳ ಟೀಕೆಯ ನಡುವೆ ಲೋಕಸಭೆಯಲ್ಲಿ ಗುರುವಾರ ಮಂಡಿಸಲಾಯಿತು. ಮಸೂದೆಯನ್ನು ಹೆಚ್ಚಿನ ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಬುಧವಾರ ಒತ್ತಾಯಿಸಿದ್ದವು.
ವಕ್ಫ್ ಮಂಡಳಿಗಳ ಅಧಿಕಾರದ ಸುತ್ತ ಚರ್ಚೆಯನ್ನು ಪುನರುಜ್ಜೀವನಗೊಳಿಸುತ್ತಾ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಚಿಸಿರುವ ಮಸೂದೆಯು ಈ ಅಧಿಕಾರಗಳನ್ನು ಮೊಟಕುಗೊಳಿಸಲು, ವಕ್ಫ್ ವಿಷಯಗಳಲ್ಲಿ ಕೇಂದ್ರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಲು, ಮುಸ್ಲಿಮೇತರ ಸದಸ್ಯರು ಮತ್ತು ಮಹಿಳೆಯರನ್ನು ವಕ್ಫ್ ಮಂಡಳಿಗಳಲ್ಲಿ ಸೇರಿಸಲು ಅವಕಾಶ ನೀಡುತ್ತದೆ. ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್ ಕೌನ್ಸಿಲ್‌ನೊಂದಿಗಿನ ಸಮಾಲೋಚನೆಯನ್ನು ಸರ್ಕಾರ ಬೈಪಾಸ್ ಮಾಡಿದೆ ಎಂದು ಆರೋಪಿಸಿ ವಕ್ಫ್ ಅಧಿಕಾರಿಗಳು ಮತ್ತು ಸಮುದಾಯದ ಸದಸ್ಯರು ಮಸೂದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಕ್ಫ್ಗೆ ಸಂಬಂಧಿಸಿದ ಎಷ್ಟು ಮಸೂದೆಗಳನ್ನು ಸರ್ಕಾರ ತಂದಿದೆ? ವಕ್ಫ್ ಬೋರ್ಡ್ನಲ್ಲಿ ಸುಧಾರಣೆಗೆ ಸಂಬಂಧಿಸಿದ ಮಸೂದೆಯ ಪ್ರತಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ವಕ್ಫ್ಗೆ ಸಂಬಂಧಿಸಿದ ಎರಡು ಮಸೂದೆಗಳನ್ನು ಸರ್ಕಾರ ಸಂಸತ್ತಿನಲ್ಲಿ ತರುತ್ತಿದೆ. ಮುಸ್ಲಿಂ ವಕ್ಫ್ ಕಾಯ್ದೆ 1923 ಅನ್ನು ಮಸೂದೆಯ ಮೂಲಕ ರದ್ದುಗೊಳಿಸಳಾಗುವುದು, ಎರಡನೇ ಮಸೂದೆಯ ಮೂಲಕ ವಕ್ಫ್ ಕಾಯ್ದೆ 1995ರಲ್ಲಿ ತಿದ್ದುಪಡಿಗಳನ್ನು ತರಲಾಗುವುದು. ಕಾಯ್ದೆಯ ಹೆಸರನ್ನು ಬದಲಾಯಿಸಲಾಗಿದೆಯೇ? ಇಲ್ಲಿಯವರೆಗೆ ವಕ್ಫ್ ಕಾಯ್ದೆ 1995 ಎಂದು ಹೆಸರಿತ್ತು, ಇದೀಗ ತಿದ್ದುಪಡಿ ತಂದ ಹೊಸ ಮಸೂದೆಗೆ ಹೊಸ ಹೆಸರನ್ನು ಇಡಲಾಗಿದೆ. ಸಮಗ್ರ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ 1995 ಎಂದು ಹೆಸರಿಡಲಾಗಿದೆ.
ಮತ್ತಷ್ಟು ಓದಿ: ವಕ್ಫ್ ಕಾಯ್ದೆ ಎಂದರೇನು? ವಕ್ಫ್ ಮಂಡಳಿ ಯಾರದ್ದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದೇ? ಇಲ್ಲಿದೆ ಮಾಹಿತಿ
ಹೊಸ ಮಸೂದೆಯಲ್ಲಿ ಎಷ್ಟು ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ? ತಿದ್ದುಪಡಿ ಮಸೂದೆ 2024 ಮೂಲಕ 44 ತಿದ್ದುಪಡಿಗಳನ್ನು ಮಾಡಲು ಹೊರಟಿದೆ. ವಕ್ಫ್ ಆಸ್ತಿಗಳನ್ನು ಉತ್ತಮವಾಗಿ ನಿರ್ವಹಿಸುವ ಮಸೂದೆ ತರುವುದು ಸರ್ಕಾರದ ಉದ್ದೇಶವಾಗಿದೆ.
ವಕ್ಫ್ ವ್ಯಾಖ್ಯಾನ ಬದಲಾಗಿದೆಯೇ? ವಕ್ಫ್ ಕಾಯ್ದೆಯಲ್ಲಿ ಮುಸ್ಲಿಂ ಕಾನೂನಿನಿಂದ ಗುರುತಿಸಲ್ಪಟ್ಟ ವಿವಿಧ ರೀತಿಯ ವಕ್ಫ್ ಸೇರಿದೆ. ಆದರೆ ತಿದ್ದುಪಡಿ ಮಸೂದೆಯಲ್ಲಿ ಕನಿಷ್ಠ ಐದು ವರ್ಷಗಳಿಂದ ಮುಸ್ಲಿಂ ಧರ್ಮವನ್ನು ಅನುಸರಿಸುತ್ತಿರುವ ವ್ಯಕ್ತಿ ಮಾತ್ರ ತನ್ನ ಚರ ಮತ್ತು ಸ್ಥಿರ ಆಸ್ತಿಯನ್ನು ವಕ್ಫ್ಗೆ ದಾನ ಮಾಡಬಹುದು. ವಕ್ಫ್-ಅಲಾಲ್-ಔಲಾದ್ ಮಹಿಳೆಯರ ಉತ್ತರಾಧಿಕಾರ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಖಚಿತಪಡಿಸಿದೆ.
ಸೆಕ್ಷನ್ 40ರಲ್ಲಿ ಯಾವ ಬದಲಾವಣೆಗಾಗಲಿವೆ? ವಕ್ಫ್ ಕಾಯ್ದೆ 1995ರ ಸೆಕ್ಷನ್ 40 ಅನ್ನು ತೆಗೆದು ಹಾಕುತ್ತಿದೆ. ಈ ಕಾನೂನಿನ ಅಡಿಯಲ್ಲಿ ವಕ್ಫ್ ಮಂಡಳಿಯು ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುವ ಹಕ್ಕನ್ನು ಹೊಂದಿತ್ತು. ಆದರೆ ಈಗ ಆಸ್ತಿ ಹಕ್ಕು ಮೊಟಕುಗೊಳಿಸಿದೆ. ವಾಸ್ತವವಾಗಿ, ವಕ್ಫ್ ಕಾಯ್ದೆಯ ಸೆಕ್ಷನ್ 40ರ ವಿರುದ್ಧ ವಿವಾದಗಳಿವೆ, ವಕ್ಫ್ ಬೋರ್ಡ್ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿದರೆ,ಅದಕ್ಕೆ ನೋಟಿಸ್ ನೀಡಿ ತನಿಖೆ ನಂತರ ಅದು ವಕ್ಫ್ ಭೂಮಿಯೇ ಎಂದು ನಿರ್ಧರಿಸಬಹುದು ಎಂದು ಸೆಕ್ಷನ್ 40ರಲ್ಲಿ ನಿಬಂಧನೆ ಇದೆ. ಅದು ಶಿಯಾ ವಕ್ಫ್ ಅಥವಾ ಸುನ್ನಿಯೇ ಎಂಬುದನ್ನು ಅವರು ನಿರ್ಧರಿಸಬಹುದು, ವಕ್ಫ್ ಮಂಡಳಿಯ ತೀರ್ಪಿನ ವಿರುದ್ಧ ನ್ಯಾಯಾಧೀಕರಣದ ಮೊರೆ ಹೋಗುವ ಹಕ್ಕು ಮಾತ್ರ ಇದೆ.
ಆಡಳಿತಾತ್ಮಕ ಪಾತ್ರಗಳು ಯಾವುವು? ಮೂಲ ಕಾಯ್ದೆಯಲ್ಲಿ ವಕ್ಫ್ ಆಸ್ತಿಗಳ ಸಮೀಕ್ಷೆಗಾಗಿ ಸರ್ವೆ ಆಯುಕ್ತರ ನೇಮಕಕ್ಕೆ ಅವಕಾಶವಿದೆ ಆದರೆ ತಿದ್ದುಪಡಿ ವಿಧೇಯಕದಲ್ಲಿ ಜಿಲ್ಲಾಧಿಕಾರಿ ಅಥವಾ ಡೆಪ್ಯೂಟಿ ಕಲೆಕ್ಟರ್ ಸರ್ವೆ ಆಯುಕ್ತರಾಗಿರುತ್ತಾರೆ.
ಮುಸ್ಲಿಮೇತರರ ಪ್ರಾತಿನಿಧ್ಯವೂ ಇರಲಿದೆ ಹೊಸ ಮಸೂದೆಯಲ್ಲಿ ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಪಾತ್ರವನ್ನೂ ಬದಲಾಯಿಸಲಾಗಿದೆ. ಈ ಸಂಸ್ಥೆಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯವೂ ಇರಲಿದೆ. ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಯಲ್ಲಿ ಮುಸ್ಲಿಮರು ಹಾಗೂ ಮುಸ್ಲಿಮೇತರರ ಸೂಕ್ತ ಪ್ರಾತಿನಿಧ್ಯವಿರಲಿದೆ. ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗುವುದು, ಸೆಂಟ್ರಲ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಬೋರ್ಡ್ನಲ್ಲಿ ಇಬ್ಬರು ಮಹಿಳೆಯರನ್ನು ಹೊಂದಿರುವುದು ಕಡ್ಡಾಯವಾಗಿದೆ.
ವಕ್ಫ್ ಮಂಡಳಿಯಲ್ಲಿ ಯಾರು ಇರುತ್ತಾರೆ? ವಕ್ಫ್ ಕೌನ್ಸಿಲ್ನಲ್ಲಿ ಒಬ್ಬ ಕೇಂದ್ರ ಸಚಿವರು, ಮೂವರು ಸಂಸದರು, ಮೂವರು ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು, ಮುಸ್ಲಿಂ ಕಾನೂನಿನ ಮೂವರು ತಜ್ಞರು, ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ನ ಇಬ್ಬರು ಮಾಜಿ ನ್ಯಾಯಮೂರ್ತಿಗಳು, ಜಂಟಿ ಕಾರ್ಯದರ್ಶಿಗಳನ್ನು ಒಳಗೊಂಡಿರುತ್ತದೆ.
ವಕ್ಫ್ ಆಸ್ತಿಗಳಿಗೆ ಯಾವ ವಿಶೇಷ ಸ್ಥಾನಮಾನ ಸಿಕ್ಕಿದೆ? ವಕ್ಫ್ ಆಸ್ತಿಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಅದು ಯಾವುದೇ ನಂಬಿಕೆಗಿಂತ ಮೇಲಿರುತ್ತದೆ. ಔಕಾಫ್ ಅನ್ನು ನಿಯಂತ್ರಿಸಲು ಈ ಕಾಯ್ದೆ ತರಲಾಗಿದೆ. ವಾಕಿಫ್ ದಾನ ಮಾಡಿದ ಮತ್ತು ವಕ್ಫ್ ಎಂದು ಗೊತ್ತುಪಡಿಸಿದ ಆಸ್ತಿಯನ್ನು ಔಕಾಫ್ ಎಂದು ಕರೆಯಲಾಗುತ್ತದೆ. ತಿದ್ದುಪಡಿಯಾದ ವಕ್ಫ್ ಕಾಯ್ದೆ 1995 ಪ್ರಕಾರ ಯಾವುದೇ ಆಸ್ತಿಯನ್ನು ಯಾವುದೇ ಉದ್ದೇಶಕ್ಕಾಗಿ ಧಾರ್ಮಿಕ ದತ್ತಿ ಎಂದು ಪರಿಗಣಿಸಿದರೆ ಅದು ವಕ್ಫ್ ಆಸ್ತಿಯಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ