ಬೆಂಗಳೂರು, (ಆಗಸ್ಟ್ 22): ಭಾರತದ ಮಹತ್ವದ ಯೋಜನೆಯಾದ ಚಂದ್ರಯಾನ 3(Chandrayana 3) ತನ್ನ ಗುರಿಯನ್ನ ಭಾಗಶಃ ತಲುಪಿದೆ. ಚಂದ್ರಯಾನ-3 ಮತ್ತು ಚಂದ್ರಯಾನ-2 ಆರ್ಬಿಟರ್ ಮಧ್ಯೆ ಸಂವಹನ ಕಾರ್ಯ ಜೋಡಿಸುವ ಕೆಲಸ ಯಶಸ್ವಿಯಾಗಿದೆ. ಚಂದ್ರಯಾನ-2 ಆರ್ಬಿಟರ್ ವಾಹನವು ಚಂದ್ರಯಾನ 3 ಸ್ವಾಗತಿಸಿದೆ. ಇಬ್ಬರ ದ್ವಿಮುಖ ಸಂವಹನ ಯಶಸ್ವಿಯಾಗಿ ನಡೆದಿದೆ ಎಂದು ಇಸ್ರೋ ಬಿಗ್ ಅಪ್‌ಡೇಟ್ ಕೊಟ್ಟಿದೆ. ನಾಳೆ(ಆಗಸ್ಟ್ 23) ಚಂದ್ರಯಾನ 3ನ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿನ ಧ್ರುವದ ಭಾಗದಲ್ಲಿ ಇಳಿಯಲಿದೆ. ಸರಿಯಾಗಿ ನಾಳೆ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರ ಮೇಲೆ ಲ್ಯಾಂಡ್ ಆಗಲಿದೆ. ಲ್ಯಾಂಡಿಂಗ್ ಕ್ಷಣವನ್ನ ಇಡೀ ಜಗತ್ತಿಗೆ ತಿಳಿಸಲು ಇಸ್ರೋ ಲೈವ್ ವ್ಯವಸ್ಥೆ ಕೂಡ ಮಾಡಿದೆ. ಈ ಮೂಲಕ ಇತಿಹಾಸ ಬರೆಯಲು ಭಾರತದ ಇಸ್ರೋ ಎಲ್ಲಾ ರೀತಿ ಸಿದ್ಧತೆ ನಡೆಸಿದೆ. ಇದು ಯಶಸ್ವಿಯಾದರೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ಜಗತ್ತಿನ ನಾಲ್ಕನೇ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈ ಕೀರ್ತಿಗೆ ಪಾತ್ರವಾಗಿವೆ.
ನಾಳೆ ಚಂದ್ರಯಾನ 3ನ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿನ ಧ್ರುವದ ಭಾಗದಲ್ಲಿ ಇಳಿಯುವ ದೃಶ್ಯವನ್ನು ನೀವು ಸಹ ಇದ್ದಲ್ಲೇ ನೋಡಬಹುದು. ಹಾಗಾದ್ರೆ ಎಲ್ಲೆಲ್ಲಿ ಲೈವ್ ನೋಡಬಹುದು ಎನ್ನುವುದು ಈ ಕೆಳಗಿನಂತಿದೆ ನೋಡಿ.
ಇದನ್ನೂ ಓದಿ: ಆಗಸ್ಟ್ 23ರಂದು ಚಂದ್ರಯಾನ-3 ಲ್ಯಾಂಡಿಂಗ್ ಆಗದಿದ್ದರೆ ಆಗಸ್ಟ್ 27ಕ್ಕೆ ಮತ್ತೊಮ್ಮೆ ಪ್ರಯತ್ನ
ವಿಜ್ಞಾನಿಗಳಿಗೆ ಕುತೂಹಲ ಕೆರಳಿಸಿರುವ ಚಂದ್ರನ ಭಾಗವೆಂದರೆ ಅದು ದಕ್ಷಿಣ ಧ್ರುವ ಮಾತ್ರ. ಏಕೆಂದರೆ ಚಂದ್ರನ ದಕ್ಷಿಣ ಧ್ರುವ ವಿಸ್ಮಯಗಳ ಖಜಾನೆ ಇದ್ದಂತೆ. ಈ ಭಾಗದಲ್ಲಿ ಉಷ್ಣಾಂಶ ಮೈನಸ್ 230 ಡಿಗ್ರಿಗಿಂತ ಕಡಿಮೆ ಇದೆ. ಬೆಳಕನ್ನೇ ಕಾಣದ ಎಷ್ಟೊಂದು ಪ್ರದೇಶಗಳು ಇಲ್ಲಿವೆ. ಇದೀಗ ಭಾರತ ಕೂಡ ದಕ್ಷಿಣ ಧ್ರುವದಲ್ಲೇ ವಿಕ್ರಮ್ ಲ್ಯಾಂಡರ್ ಇಳಿಸಲು ತೀರ್ಮಾನಿಸಿದೆ.. ಕಳೆದ ಬಾರಿ ಚಂದ್ರಯಾನ2ನಲ್ಲಿ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗ ಸ್ವಲ್ಪ ಎಡವಟ್ಟಾಗಿತ್ತು. ಇದೇ ಕಾರಣಕ್ಕೆ ಈ ಬಾರಿ ಎಚ್ಚರಿಕೆ ವಹಿಸಲಾಗಿದೆ. ಲ್ಯಾಂಡರ್ ಇಳಿಸುವ ಪ್ರತಿಕ್ಷಣ ಇಸ್ರೋಗೆ ಗೊತ್ತಾಗಲಿದೆ. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ ಮತ್ತು ಅಪಾಯ ತಪ್ಪಿಸುವ ಕ್ಯಾಮರಾ ಕೂಡ ಇದರಲ್ಲಿದೆ. ಜೊತೆಗೆ ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಈ ಪೇಲೋಡ್ ಒಟ್ಟಿಗೆ ಕೆಲಸ ಮಾಡುತ್ತದೆ.
ಚಂದ್ರಯಾನ-3 ಗಗನನೌಕೆಯು ಚಂದ್ರನ ಸನಿಹದಿಂದ ಫೋಟೋಗಳನ್ನು ಕ್ಲಿಕ್ಕಿಸಿದೆ. ವಿಕ್ರಮ್ ಲ್ಯಾಂಡರ್ ಕ್ಲಿಕ್ಕಿಸಿದ ಈ ಫೋಟೋಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಭೂಮಿಗೆ ಕಾಣಿಸದ ಚಂದ್ರನ ಮತ್ತೊಂದು ಮುಖ ಕಾಣಿಸಿದೆ. ಚಂದ್ರನ ಮಗ್ಗಲಿನಲ್ಲಿ ಸಾಕಷ್ಟು ಕುಳಿಗಳು ಇರುವುದು ಫೋಟೋದಲ್ಲಿ ಕಂಡು ಬಂದಿದೆ. ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್ ಅವಾಯಿಡೆನ್ಸ್ ಕ್ಯಾಮೆರಾ ಮೂಲಕ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.
ಒಟ್ಟಾರೆ ಭಾರತ ಮಾತ್ರವಲ್ಲ ಇಡೀ ಜಗತ್ತನ್ನೇ ಚಂದ್ರಯಾನ 3ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವುದನ್ನು ಕಣ್ಣರಳಿಸಿ ಕಾಯುತ್ತಿದೆ.
ಇನ್ನಷ್ಟು ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:15 am, Tue, 22 August 23