ಚಂದ್ರಯಾನ-3: ಮತ್ತೊಂದು ಮಹತ್ವ ಮೈಲಿಗಲ್ಲು ಸಾಧಿಸಿದ ಇಸ್ರೋ, ಅಭಿನಂದನೆ ತಿಳಿಸಿದ ಮೋದಿ
ಚಂದ್ರಯಾನ-3ರಲ್ಲಿ ಇಸ್ರೋ ಮಹತ್ವ ಮೈಲಿಗಲ್ಲು ಸಾಧಿಸಿದೆ. ಈ ಮೂಲಕ ಭಾರತದ ವಿಜ್ಞಾನಕ್ಕೆ ಗರ್ವದ ಕೊಡುಗೆಯನ್ನು ನೀಡಿದೆ. ಈ ಬಗ್ಗೆ ಇಸ್ರೋ ಎಕ್ಸ್ನಲ್ಲಿ ಹಂಚಿಕೊಂಡಿದೆ. ಈ ಸಾಧನೆಗೆ ಪ್ರಧಾನಿ ಮೋದಿ ಅವರು ಕೂಡ ಎಕ್ಸ್ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಮತ್ತೊಂದು ತಾಂತ್ರಿಕ ಮೈಲಿಗಲ್ಲನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅಭಿನಂದನೆ ಸಲ್ಲಿಸಿದ್ದಾರೆ. ಚಂದ್ರಯಾನ-3ರ (Chandrayaan-3) ಪ್ರೊಪಲ್ಷನ್ ಮಾಡ್ಯೂಲ್ (Propulsion Module)ನ್ನು ಭೂಮಿಗೆ ತರಲು ಹೊಸ ಮಾರ್ಗ ಕಂಡುಕೊಳ್ಳಲಾಗಿದೆ. ಈ ಮೂಲಕ ಮತ್ತೊಂದು ವಿಶಿಷ್ಟ ಪ್ರಯೋಗದಿಂದ ಪ್ರೊಪಲ್ಷನ್ ಮಾಡ್ಯೂಲ್ನ್ನು ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ತರಲಾಗುತ್ತದೆ.
ಈ ಸಾಧನೆಯ ಬಗ್ಗೆ ಇಸ್ರೋ ತನ್ನ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿತ್ತು. ಇದಕ್ಕೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಅಭಿನಂದನೆಗಳು ಇಸ್ರೋ. ನಮ್ಮ ಭವಿಷ್ಯದ ಬಾಹ್ಯಾಕಾಶ ಪ್ರಯತ್ನಗಳಲ್ಲಿ ಸಾಧಿಸಲಾದ ಮತ್ತೊಂದು ತಂತ್ರಜ್ಞಾನದ ಮೈಲಿಗಲ್ಲು ಇದು. 2040ರ ವೇಳೆಗೆ ಭಾರತೀಯರನ್ನು (ಮಾನವಸಹಿತ) ಚಂದ್ರನತ್ತ ಕಳುಹಿಸುವ ನಮ್ಮ ಮುಂದಿನ ಗುರಿಯಾಗಿದೆ ಎಂದು ಹೇಳಿದ್ದಾರೆ.
ಇದೀಗ ವಿಕ್ರಮ್ ಲ್ಯಾಂಡರ್‌ನಲ್ಲಿ ಪ್ರಮುಖ ಪ್ರಯೋಗದಂತೆ, ಚಂದ್ರಯಾನ -3ರ ಪ್ರೊಪಲ್ಷನ್ ಮಾಡ್ಯೂಲ್ (ಪಿಎಂ)ನ್ನು ಚಂದ್ರನ ಸುತ್ತಲಿನ ಕಕ್ಷೆಯಿಂದ ಭೂಮಿಯ ಸುತ್ತಲಿನ ಕಕ್ಷೆಗೆ ಸ್ಥಳಾಂತರಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೇಳಿದೆ.
ಪ್ರಧಾನಿ ಮೋದಿ ಎಕ್ಸ್ ಟ್ವೀಟ್:
Congratulations @isro. Another technology milestone achieved in our future space endeavours including our goal to send an Indian to Moon by 2040. https://t.co/emUnLsg2EA
— Narendra Modi (@narendramodi) December 6, 2023
ಚಂದ್ರಯಾನ-3ರ ಪ್ರೊಪಲ್ಷನ್ ಮಾಡ್ಯೂಲ್ನ್ನು ಚಂದ್ರ ಕ್ಷಕೆಯಿಂದ ಭೂಮಿಯ ಕ್ಷಕೆಗೆ ತರಲಾಗುವುದು. ಈ ಈ ನಿಟ್ಟಿನಲ್ಲಿ ಹೊಸ ಮಾರ್ಗವೊಂದು ಸಿಕ್ಕಿದೆ. ಇದು ಭಾರತೀಯ ವಿಜ್ಞಾನದ ಮಹತ್ವ ಸಾಧನೆ ಎಂದು ಇಸ್ರೋ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಚಂದ್ರಯಾನ-3 ಮಿಷನ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಮೃದುವಾದ ಲ್ಯಾಂಡಿಂಗ್ ಮಾಡುವುದು ಹಾಗೂ ವಿಕ್ರಮ್ ಮತ್ತು ಪ್ರಜ್ಞಾನ್ ಉಪಕರಣಗಳನ್ನು ಬಳಸಿಕೊಂಡು ಚಂದ್ರನ ಸುತ್ತಲಿನ ಭಾಗದಲ್ಲಿ ಸಂಶೋಧನೆ ಮಾಡುವುದು ಇಸ್ರೋದ ಪ್ರಾಥಮಿಕ ಉದ್ದೇಶವಾಗಿತ್ತು.
ಇದನ್ನೂ ಓದಿ: ನಿಯಂತ್ರಣ ಕಳೆದುಕೊಂಡು ಮತ್ತೆ ಭೂಮಿಗೆ ಮರಳಿದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಒಂದು ಭಾಗ
ಚಂದ್ರಯಾನ-3ಯನ್ನು ಜುಲೈ 14, 2023 ರಂದು ಉಡಾವಣೆ ಮಾಡಲಾಯಿತು. ಆಗಸ್ಟ್ 23 ರಂದು, ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಭಾಗದ ಮೇಲೆ ಮೃದುವಾಗಿ ಸ್ಪರ್ಶಿಸಿತ್ತು. ನಂತರ ಪ್ರಗ್ಯಾನ್ ರೋವರ್, ಲ್ಯಾಂಡರ್ ಮತ್ತು ರೋವರ್‌ನಲ್ಲಿರುವ ವೈಜ್ಞಾನಿಕ ಉಪಕರಣಗಳು ಚಂದ್ರ ಸುತ್ತಲಿನ ಭಾಗದಲ್ಲಿ ಸಂಶೋಧನೆಯನ್ನು ಮಾಡಿತ್ತು. ಇದು ಚಂದ್ರನ ಸುತ್ತು ಒಂದು ದಿನದವರೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ. ಈ ಮೂಲಕ ಇಸ್ರೋದ ಮೂಲ ಉದ್ದೇಶ ಸಂಪೂರ್ಣಗೊಂಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Thu, 7 December 23