ಮುಂದಿನ 7 ದಿನಗಳಲ್ಲಿ ಮುಗಿಯಲಿದೆ ಭಾರತದ ಚಂದ್ರಯಾನ-3; ಇಲ್ಲಿಯವರೆಗೆ ಯಾವೆಲ್ಲ ಚಟುವಟಿಕೆ ನಡೆದಿದೆ?
Chandrayaan-3: ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಗ್ ಮಾಡುವ ಮೂಲಕ ಭಾರತವನ್ನು ಚಂದ್ರನ ಮೇಲ್ಮೈಯಲ್ಲಿಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಷ್ಟೇ ಅಲ್ಲದೆ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲನೆ ರಾಷ್ಟ್ರವಾಗಿದೆ ಭಾರತ. ಇಡೀ ಮಿಷನ್‌ನ ಪ್ರಾಥಮಿಕ ಉದ್ದೇಶವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವುದು,ಚಂದ್ರನ ಮೇಲ್ಮೈಯನ್ನು ಅನ್ವೇಷಿಸುವುದು ಮತ್ತು ಅಮೂಲ್ಯವಾದ ವೈಜ್ಞಾನಿಕ ಡೇಟಾವನ್ನು ಸಂಗ್ರಹಿಸುವುದು ಆಗಿದೆ.
ದೆಹಲಿ ಆಗಸ್ಟ್ 31: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷೆಯ ಮೂರನೇ ಚಂದ್ರನ ಮಿಷನ್‌ನೊಂದಿಗೆ ಆಗಸ್ಟ್ 23 ರಂದು ಇತಿಹಾಸವನ್ನು ಬರೆದ ನಂತರ, ಚಂದ್ರಯಾನ -3 (Chandrayaan-3) ಮುಂದಿನ ಏಳು ದಿನಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಿದೆ. ಚಂದ್ರಯಾನ-3ರ ಎರಡು ಅಥವಾ ಮೂರು ಮಿಷನ್‌ಗಳನ್ನು ಸಾಧಿಸಲಾಗಿದೆ ಎಂದು ಇಸ್ರೋ ಹೇಳಿದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್, ಚಂದ್ರನ ಮೇಲೆ ರೋವರ್ ಚಲನೆಯ ಪ್ರದರ್ಶನ ಹೀಗೆ ಮೊದಲ 2 ಕಾರ್ಯಾಚರಣೆಗಳು ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ. ಚಂದ್ರಯಾನ-3 ರ ಮೂರನೇ ಮಿಷನ್, ಇದು ಪ್ರಸ್ತುತ ಚಂದ್ರನ ಮೇಲೆ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತಿದೆ.
ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಗ್ ಮಾಡುವ ಮೂಲಕ ಭಾರತವನ್ನು ಚಂದ್ರನ ಮೇಲ್ಮೈಯಲ್ಲಿಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಷ್ಟೇ ಅಲ್ಲದೆ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲನೆ ರಾಷ್ಟ್ರವಾಗಿದೆ ಭಾರತ. ಇಡೀ ಮಿಷನ್‌ನ ಪ್ರಾಥಮಿಕ ಉದ್ದೇಶವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವುದು,ಚಂದ್ರನ ಮೇಲ್ಮೈಯನ್ನು ಅನ್ವೇಷಿಸುವುದು ಮತ್ತು ಅಮೂಲ್ಯವಾದ ವೈಜ್ಞಾನಿಕ ಡೇಟಾವನ್ನು ಸಂಗ್ರಹಿಸುವುದು ಆಗಿದೆ.
ಚಂದ್ರಯಾನ-3 ರ ಮತ್ತೊಂದು ಪ್ರಮುಖ ಗುರಿ ನೀರನ್ನು ಹುಡುಕುವುದು, ವಿಜ್ಞಾನಿಗಳು ದಕ್ಷಿಣ ಧ್ರುವ ಪ್ರದೇಶದಲ್ಲಿನ ಬೃಹತ್ ಕುಳಿಗಳಲ್ಲಿ ಮಂಜುಗೆಡ್ಡೆ ಇದೆ. ಇದುಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವ ವಾಸಸ್ಥಾನಕ್ಕೆ ಸಹಕಾರಿ ಆಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಮಧ್ಯೆ, ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್‌ನಿಂದ ಬೇರ್ಪಟ್ಟ ನಂತರ ಚಂದ್ರನ ಮೇಲ್ಮೈಯಲ್ಲಿ ಸರಣಿ ಪ್ರಯೋಗಗಳನ್ನು ನಡೆಸುತ್ತಿದೆ. ರೋವರ್ ಚಂದ್ರನ ಮಣ್ಣನ್ನು ವಿಶ್ಲೇಷಿಸುತ್ತಿದೆ ಮತ್ತು ಚಂದ್ರನ ಸಂಯೋಜನೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಡೇಟಾವನ್ನು ಸಂಗ್ರಹಿಸುತ್ತಿದೆ.
ಚಂದ್ರಯಾನ ಮಿಷನ್ ಇಷ್ಟು ಬೇಗ ಮುಗಿಯುತ್ತದೆಯೆ?
ಚಂದ್ರಯಾನ-3 ಎಂಬ ಚಂದ್ರನ ಮಿಷನ್ ಚಂದ್ರನ ರಾತ್ರಿಯ ಕಾರಣದಿಂದಾಗಿ ಕೊನೆಗೊಳ್ಳುತ್ತದೆ. ಚಂದ್ರ ರಾತ್ರಿ ಅಥವಾ ಲೂನಾರ್ ನೈಟ್ ಅಂದ್ರೆ ಚಂದ್ರನ ಮೇಲ್ಮೈ ಸೂರ್ಯನಿಗೆ ತೆರೆದುಕೊಳ್ಳದ ಅವಧಿ.ಚಂದ್ರನ ರಾತ್ರಿಯ ಈ ವಿದ್ಯಮಾನವು ಸುಮಾರು 14 ಭೂಮಿಯ ದಿನಗಳವರೆಗೆ ಇರುತ್ತದೆ, ಇದು ಒಂದು ಚಂದ್ರನ ದಿನಕ್ಕೆ ಸಮನಾಗಿರುತ್ತದೆ. ಈ ಸಮಯದಲ್ಲಿ, ಇಡೀ ದಕ್ಷಿಣ ಧ್ರುವವು ಕತ್ತಲೆಯಾಗುತ್ತದೆ, ಇದರಿಂದಾಗಿ ಸೌರಶಕ್ತಿ ಚಾಲಿತ ಪ್ರಗ್ಯಾನ್ ರೋವರ್ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.
ಚಂದ್ರನ ರಾತ್ರಿ ಎಂದರೇನು?
ಚಂದ್ರನ ತಿರುಗುವಿಕೆಯಿಂದಾಗಿ ಚಂದ್ರನ ರಾತ್ರಿ ಸಂಭವಿಸುತ್ತದೆ, ಇದು ಭೂಮಿಯ ಮೇಲೆ ಸುಮಾರು 28 ದಿನಗಳವರೆಗೆ ಇರುತ್ತದೆ. ಈ ಸಮಯದ ಅರ್ಧದಷ್ಟು ಕಾಲ, ಚಂದ್ರನ ಮೇಲ್ಮೈ ಸೂರ್ಯನ ಬೆಳಕು ಇರುತ್ತದೆ. ಆದರೆ ಉಳಿದ ಅರ್ಧದಲ್ಲಿ ಅದು ಸಂಪೂರ್ಣ ಕತ್ತಲೆಯಲ್ಲಿದೆ. ಈ ಚಕ್ರವು ಭೂಮಿಯ ಮೇಲಿನ ಹಗಲಿನ ಸಮಯದ ಮಾದರಿಯನ್ನು ಹೋಲುತ್ತದೆ. ಚಂದ್ರನ ಮೇಲ್ಮೈಯಲ್ಲಿ ಹಲವಾರು ಸವಾಲುಗಳ ಹೊರತಾಗಿಯೂ, ಚಂದ್ರಯಾನ-3 ಚಂದ್ರನ ಮೇಲೆ ಮಹತ್ವದ ಸಂಶೋಧನೆಗಳನ್ನು ಮಾಡುತ್ತಿದೆ. ಇದು ದೇಶಕ್ಕೆ ದೊಡ್ಡ ಸಾಧನೆಯಾಗಿದೆ.
ಚಂದ್ರಯಾನ-3ದ ಅವಧಿ ಎಷ್ಟು ಇರುತ್ತದೆ?
ಚಂದ್ರಯಾನ-3 ರ ಒಟ್ಟು ಜೀವಿತಾವಧಿಯು ಒಂದು ಚಂದ್ರನ ದಿನವಾಗಿದ್ದು, ಇದು 14 ಭೂಮಿಯ ದಿನಗಳು.ISRO ಅದನ್ನು ಇನ್ನೂ ಒಂದು ದಿನ ವಿಸ್ತರಿಸಲು ಪ್ರಯತ್ನಿಸಬಹುದು. ಆದಾಗ್ಯೂ, ಇದು ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಶಕ್ತಿ ಇದೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿಯವರೆಗೆ ಮಿಷನ್ 7 ದಿನಗಳನ್ನು ಪೂರ್ಣಗೊಳಿಸಿದ್ದು ಇನ್ನು 7 ದಿನಗಳು ಉಳಿದಿವೆ.
ಇದನ್ನೂ ಓದಿ: ಸ್ಮೈಲ್ ಪ್ಲೀಸ್: ಪ್ರಗ್ಯಾನ್ ಕ್ಲಿಕ್ಕಿಸಿದ ವಿಕ್ರಮ್ ಲ್ಯಾಂಡರ್ ಚಿತ್ರವಿದು
ವಿಕ್ರಮ್ ಲ್ಯಾಂಡರ್‌ನ ಮೊದಲ ಚಿತ್ರವನ್ನು ಕ್ಲಿಕ್ ಮಾಡಿದ ಪ್ರಗ್ಯಾನ್ ರೋವರ್
ಬುಧವಾರ ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್ನ ಚಿತ್ರವನ್ನು ಕ್ಲಿಕ್ ಮಾಡಿ, ಚಂದ್ರನ ಮೇಲ್ಮೈಯ ಚಿತ್ರಣವನ್ನು ನೀಡಿತು. “ಚಂದ್ರಯಾನ-3 ಮಿಷನ್: ಸ್ಮೈಲ್ ಪ್ಲೀಸ್. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪೋಸ್ಟ್ ಮಾಡಿದೆ. ಇಂದು ಬೆಳಗ್ಗೆ ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್ ಚಿತ್ರವನ್ನು ಕ್ಲಿಕ್ಕಿಸಿದೆ. ರೋವರ್‌ನಲ್ಲಿ (NavCam) ನ್ಯಾವಿಗೇಷನ್ ಕ್ಯಾಮೆರಾದಿಂದ ‘ಮಿಷನ್‌ನ ಚಿತ್ರ’ ತೆಗೆದಿದೆ. ಚಂದ್ರಯಾನ-3 ಮಿಷನ್‌ಗಾಗಿ ನವ್ಕ್ಯಾಮ್ಗಳನ್ನು ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (LEOS) ಅಭಿವೃದ್ಧಿಪಡಿಸಿದೆ ಎಂದು ಇಸ್ರೋ X ನಲ್ಲಿ ಪೋಸ್ಟ್ ಮಾಡಿದೆ.
ಮತ್ತೊಂದು ಟ್ವೀಟ್‌ನಲ್ಲಿ, ಇಸ್ರೋ”“Beyond Borders, Across Moonscapes: India’s Majesty knows no bounds!” ಎಂದು ಹೇಳಿದೆ.“ಮತ್ತೊಮ್ಮೆ, ಸಹ-ಪ್ರಯಾಣಿಕ ಪ್ರಗ್ಯಾನ್ ವಿಕ್ರಮ್ ನ ಫೋಟೊ ಸೆರೆ ಹಿಡಿದಿದೆ! ಈ ಐಕಾನಿಕ್ ಚಿತ್ರವನ್ನುಇಂದು ಬೆಳಗ್ಗೆ 11 ಗಂಟೆಗೆ ಸುಮಾರು 15 ಮೀ ನಿಂದ ತೆಗೆದುಕೊಳ್ಳಲಾಗಿದೆ” ಎಂದು ಇಸ್ರೋ ಮಾಡಿದ ಟ್ವೀಟ್‌ನಲ್ಲಿ ಹೇಳಿದೆ. ಇಸ್ರೋದ ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಭಾರತವು ಬಾಹ್ಯಾಕಾಶ ಯೋಜನೆಯಲ್ಲಿ ಮಹತ್ತರ ಸಾಧನೆ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ