Aliens: ಅನ್ಯಗ್ರಹ ಜೀವಿಗಳ ಕುರಿತು ಅಧ್ಯಯನ ನಡೆಸಲಿದೆ ಚಂದ್ರಯಾನ-3

ಭೂಮಿಯಿಂದ ಆಚೆಗೆ ಈ ಬ್ರಹ್ಮಾಂಡದ ಅನ್ಯ ಗ್ರಹಗಳಲ್ಲೂ ಜೀವಿಗಳು ಇವೆಯಾ? ಭೂಮಿಯನ್ನು ಹೊರತುಪಡಿಸಿ, ಬೇರೆ ಬೇರೆ ಗ್ರಹಗಳಲ್ಲೂ ಜೀವಿಗಳು ವಾಸಿಸಲು ಯೋಗ್ಯವಾದ ವಾತಾವರಣ ಇದೆಯಾ? ಈಗಾಗಲೇ ಅನ್ಯಗ್ರಹಜೀವಿಗಳು ಬೇರೆ ಬೇರೆ ರೂಪದಲ್ಲಿ ಭೂಮಿಗೆ ಭೇಟಿ ನೀಡಿವೆಯಾ? ಎಂಬ ಬಗ್ಗೆ ವಿಕ್ರಮ್ ಲ್ಯಾಂಡರ್​ನಿಂದ ಪ್ರತ್ಯೇಕಗೊಂಡಿದ್ದ ಪ್ರೊಪಲ್ಷನ್ ಮಾಡ್ಯೂಲ್ ಹೆಸರಿನ ನೌಕೆ ಅಧ್ಯಯನ ಮಾಡಲಿದೆ.

Aliens: ಅನ್ಯಗ್ರಹ ಜೀವಿಗಳ ಕುರಿತು ಅಧ್ಯಯನ ನಡೆಸಲಿದೆ ಚಂದ್ರಯಾನ-3
ಅನ್ಯಗ್ರಹ ಜೀವಿಗಳ ಕುರಿತು ಅಧ್ಯಯನ ನಡೆಸಲಿದೆ ಚಂದ್ರಯಾನ-3
Follow us
TV9 Web
| Updated By: ಆಯೇಷಾ ಬಾನು

Updated on: Aug 26, 2023 | 7:27 AM

ಚಂದ್ರಯಾನ-3(Chandrayaan 3) ಇಡೀ ಜಗತ್ತು ಭಾರತದತ್ತ ನೋಡುವಂತೆ ಮಾಡಿದೆ. ವಿಕ್ರಮ್ ಲ್ಯಾಂಡರ್ ಚಂದ್ರಮನ ದಕ್ಷಿಣ ಧ್ರುವಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ್ದು ಇಸ್ರೋ ವಿಜ್ಞಾನಿಗಳು(Isro Scientist) ಇತಿಹಾಸ ಸೃಷ್ಟಿಸಿದ್ದಾರೆ. ಚಂದಮಾಮನ ದಕ್ಷಿಣಕ್ಕೆ ಪ್ರವೇಶಿಸಿದ ಮೊದಲ ದೇಶ ನಮ್ಮದೆಂಬ ಹೆಮ್ಮೆಗೆ ಪಾತ್ರವಾಗಿದೆ. ಇನ್ನು ವಿಕ್ರಮ್ ಲ್ಯಾಂಡರ್(Vikram Lander) ಚಂದ್ರನ ಮೇಲೆ ಇಳಿದ ನಂತರ ಏನು ಮಾಡುತ್ತೆ ತಿಳಿದುಕೊಳ್ಳಲು ಭಾರತ ತುದಿಗಾಲ ಮೇಲೆ ನಿಂತಿದೆ. ಆದ್ರೆ, ಈ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಕಕ್ಷೆ ಸೇರಿಸಿರೋ ತಾಯಿನೌಕೆ ಇದೆಯಲ್ಲ, ಅದು ಎಲ್ಲಿದೆ? ಅದು ಏನ್ ಮಾಡಲಿದೆ ಗೊತ್ತಾ? ವಿಕ್ರಮ್ ಲ್ಯಾಂಡರ್, ಚಂದ್ರನ ಬಗ್ಗೆ ಅಧ್ಯಯನ ಮಾಡಿದ್ರೆ, ಈ ನೌಕೆ, ಅನ್ಯಗ್ರಹ ಜೀವಿಗಳ(Aliens) ಪತ್ತೆಯ ಕಾರ್ಯಾಚರಣೆ ಆರಂಭಿಸುತ್ತಿದೆ.

ಚಂದ್ರಯಾನ-3 ನೌಕೆಯಿಂದ ಅನ್ಯಗ್ರಹ ಜೀವಿ ಪತ್ತೆ ಆರಂಭ, ಹೇಗಿರುತ್ತೆ ಅಧ್ಯಯನ?

ಭೂಮಿಯಿಂದ ಆಚೆಗೆ ಈ ಬ್ರಹ್ಮಾಂಡದ ಅನ್ಯ ಗ್ರಹಗಳಲ್ಲೂ ಜೀವಿಗಳು ಇವೆಯಾ? ಭೂಮಿಯನ್ನು ಹೊರತುಪಡಿಸಿ, ಬೇರೆ ಬೇರೆ ಗ್ರಹಗಳಲ್ಲೂ ಜೀವಿಗಳು ವಾಸಿಸಲು ಯೋಗ್ಯವಾದ ವಾತಾವರಣ ಇದೆಯಾ? ಈಗಾಗಲೇ ಅನ್ಯಗ್ರಹಜೀವಿಗಳು ಬೇರೆ ಬೇರೆ ರೂಪದಲ್ಲಿ ಭೂಮಿಗೆ ಭೇಟಿ ನೀಡಿವೆಯಾ? ಇವು ಶತಶತಮಾನಗಳಿಂದ ಮನುಷ್ಯರನ್ನು ಕಾಡುತ್ತಿರುವ ಪ್ರಶ್ನೆಗಳು. ಏಲಿಯನ್ಸ್ ಅಥವಾ ಅನ್ಯಗ್ರಹ ಜೀವಿಗಳ ಕುರಿತ ಚರ್ಚೆ ದಶಕಗಳಿಂದಲೇ ನಡೆಯುತ್ತಿದೆ. ರೋಚಕ ಸಂಗತಿ ಅಂದ್ರೆ, ಭಾರತದ ಐತಿಹಾಸಿಕ ಚಂದ್ರಯಾನ-3, ಅನ್ಯಗ್ರಹ ಜೀವಿಗಳ ಪತ್ತೆಯ ಕಾರ್ಯಾಚರಣೆಯನ್ನೂ ನಡೆಸಲಿದೆ.

ಇದನ್ನೂ ಓದಿ: PM Modi ISRO Visit Live: ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್; ಮೋದಿ ಘೋಷಣೆ

ಆಗಸ್ಟ್ 17 ರಂದು ಅಂದ್ರೆ ಗುರುವಾರ, ವಿಕ್ರಮ್ ಲ್ಯಾಂಡರ್, ತನ್ನ ತಾಯಿನೌಕೆ ಪ್ರೊಪಲ್ಷನ್ ಮಾಡ್ಯೂಲ್​ನಿಂದ ಬೇರ್ಪಟ್ಟಿತ್ತು. ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಕಕ್ಷೆಗೆ ಸೇರಿಸೋದು ಈ ಪ್ರೊಪಲ್ಷನ್ ಮಾಡ್ಯೂಲ್​ನ ಅತಿದೊಡ್ಡ ಕಾರ್ಯವಾಗಿತ್ತು. ಪ್ರೊಪಲ್ಷನ್ ಮಾಡ್ಯೂಲ್, ತನ್ನ ಈ ಮುಖ್ಯ ಜವಾಬ್ದಾರಿಯನ್ನು 100 ಪರ್ಸೆಂಟ್ ಪರ್ಫೆಕ್ಟ್ ಆಗಿ ಮಾಡಿ ಮುಗಿಸಿದೆ. ಆದ್ರೆ, ಇಲ್ಲಿಗೆ ಪ್ರೊಪಲ್ಷನ್ ಮಾಡ್ಯೂಲ್​ನ ಕಾರ್ಯಾಚರಣೆ ಮುಗಿಯಲಿಲ್ಲ. ಪ್ರೊಪಲ್ಷನ್ ಮಾಡ್ಯೂಲ್ ಬೇರ್ಪಟ್ಟ ಬಳಿಕ ಹೊಸ ಸಾಹಸಕ್ಕೆ ಕೈ ಹಾಕಿದೆ. ಅದುವೇ ಅನ್ಯಗ್ರಹ ಜೀವಿಗಳನ್ನ ಪತ್ತೆ ಮಾಡುವ ಮಹಾ ಸಾಹಸ.

ಅನ್ಯಗ್ರಹ ಜೀವಿಗಳ ಕುರಿತು ಅಧ್ಯಯನ ನಡೆಸೋದೇಗೆ ಚಂದ್ರಯಾನ-3?

ಗುರುವಾರ ವಿಕ್ರಮ್ ಲ್ಯಾಂಡರ್​ನಿಂದ ಪ್ರತ್ಯೇಕಗೊಂಡ ಪ್ರೊಪಲ್ಷನ್ ಮಾಡ್ಯೂಲ್ ಹೆಸರಿನ ಈ ನೌಕೆ, ತನ್ನ ಅತಿದೊಡ್ಡ ಆಪರೇಷನ್ ಅನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಕಕ್ಷೆಗೆ ಸೇರಿಸೋದು ಈ ನೌಕೆಯ ದೊಡ್ಡ ಕಾರ್ಯವಾಗಿತ್ತು. ಇನ್ಮುಂದೆ ಈ ನೌಕೆ, ಚಂದ್ರನ ಸುತ್ತ ಸುತ್ತೋದನ್ನು ಮುಂದುವರಿಸಲಿದೆ. ಇದರ ಜೊತೆಗೆ ಹೊಸ ಸಾಹಸವನ್ನೂ ಮಾಡಲಿದೆ. ಚಂದ್ರನ ಸುತ್ತ ಸುತ್ತುತ್ತಲೇ ತನ್ನ ದಿವ್ಯ ದೃಷ್ಟಿಯನ್ನ ಭೂಮಿಯ ಮೇಲೆ ಹರಿಸಲಿದೆ. ಈ ಪ್ರೊಪಲ್ಷನ್ ಮಾಡ್ಯೂಲ್​ನಲ್ಲಿ ಶೇಪ್(SHAPE) ಹೆಸರಿನ ಅತ್ಯಾಧುನಿಕ ವೈಜ್ಞಾನಿಕ ವ್ಯವಸ್ಥೆ ಇದೆ. pectro-polarimetry of Habitable Planet Earth. ಅನ್ನೇ ಸಂಕ್ಷಿಪ್ತವಾಗಿ ಶೇಪ್ ಅಂತಾರೆ. ಇದನ್ನು ಬೆಂಗಳೂರಿನಲ್ಲಿರುವ ಇಸ್ರೋದ ಯು.ಆರ್. ರಾವ್ ಸ್ಯಾಟ್​ಲೈಟ್ ಕೇಂದ್ರದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಈ ನೌಕೆಯಲ್ಲಿರುವ ಶೇಪ್ ವ್ಯವಸ್ಥೆ, ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಲೇ ಭೂಮಿಯ ವಾತಾವರಣದಲ್ಲಿನ ಬೆಳಕನ್ನ ವಿಶ್ಲೇಷಣೆಗೆ ಒಳಪಡಿಸಲಿದೆ. ಜೀವಿಗಳಿರುವ ಭೂಮಿಯ ವಾತಾವರಣದಲ್ಲಿ ಹಾದು ಹೋಗುವಾಗ ಬೆಳಕು ಯಾವ ರೀತಿ ಬದಲಾಗುತ್ತೆ ಎಂದು ವಿಶ್ಲೇಷಣೆ ಮಾಡಲಿದೆ. ಈ ಮಾಹಿತಿಯನ್ನೇ ಆಧಾರವಾಗಿ ಇಟ್ಟುಕೊಂಡು ಬೇರೆ ಬೇರೆ ಗ್ರಹಗಳಲ್ಲೂ ಜೀವಿಗಳು ಇದ್ದಿರಬಹುದಾ ಅಂತಾ ತಿಳಿದುಕೊಳ್ಳಲು ಯತ್ನಿಸಲಿದೆ. ಸೌರಮಂಡಲದ ಆಚೆಗಿರುವ ಗ್ರಹಗಳು ಜೀವಿಗಳಿಗೆ ವಾಸಯೋಗ್ಯನಾ ಅಂತಾ ತಿಳಿಯಲು ಅಧ್ಯಯನ ನಡೆಸಲಿದೆ. ಸದ್ಯ, ಪ್ರೊಪಲ್ಷನ್ ಮಾಡ್ಯೂಲ್ ತನ್ನ ಅಧ್ಯಯನ ಆರಂಭಿಸಿದೆಯೋ ಇಲ್ವೋ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಯಾಕಂದ್ರೆ, ಈ ・ಶೇಪ್・ಉಪಕರಣವನ್ನ ಇಸ್ರೋ ವಿಜ್ಞಾನಿಗಳು ಆದೇಶ ನೀಡುವ ಮೂಲಕ ಆನ್ ಮಾಡಬೇಕಾಗುತ್ತೆ. ಇಸ್ರೋ ವಿಜ್ಞಾನಿಗಳು ಸೂಚನೆ ನೀಡಿದ ಬಳಿಕವೇ ಈ ಅಧ್ಯಯನ ಆರಂಭವಾಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ