Chardham Yatra 2024: ಇಂದಿನಿಂದ ಚಾರ್​ಧಾಮ್ ಯಾತ್ರೆ ಇಂದಿನಿಂದ ಶುರು

ಚಾರ್ ಧಾಮ್‌ ಯಾತ್ರೆಗಳೆಂದರೆ, ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಹಾಗು ಬದರಿನಾಥ್. ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಚಾರ್ ಧಾಮ್‌ ಯಾತ್ರೆ ಕೂಡ ಒಂದಾಗಿದೆ. ಕೇದಾರನಾಥ ಹಾಗೂ ಬದರಿನಾಥ ಧಾಮಗಳು ಮುಂದಿನ ದಿನಗಳಲ್ಲಿ ಭಕ್ತರ ಸಂಚಾರದಿಂದ ಝೇಂಕರಿಸಲಿದೆ. ಇಂದಿನಿಂದ ಚಾರ್​ಧಾಮ್ ಯಾತ್ರೆ ಆರಂಭವಾಗಲಿದೆ. ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಚಾರ್ ಧಾಮ್‌ ಯಾತ್ರೆ ಕೂಡ ಒಂದಾಗಿದೆ.

Chardham Yatra 2024: ಇಂದಿನಿಂದ ಚಾರ್​ಧಾಮ್ ಯಾತ್ರೆ ಇಂದಿನಿಂದ ಶುರು
ಚಾರ್​ಧಾಮ್ ಯಾತ್ರೆ
Follow us
|

Updated on:May 10, 2024 | 8:55 AM

ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಚಾರ್ ಧಾಮ್‌ ಯಾತ್ರೆ(Char Dham Yatra) ಕೂಡ ಒಂದಾಗಿದೆ. ಕೇದಾರನಾಥ ಹಾಗೂ ಬದರಿನಾಥ ಧಾಮಗಳು ಮುಂದಿನ ದಿನಗಳಲ್ಲಿ ಭಕ್ತರ ಸಂಚಾರದಿಂದ ಝೇಂಕರಿಸಲಿದೆ. ಇಂದಿನಿಂದ ಚಾರ್​ಧಾಮ್ ಯಾತ್ರೆ ಆರಂಭವಾಗಲಿದೆ. 6 ತಿಂಗಳಿಗೆ ಒಮ್ಮೆ ತೆರೆಯುವ ಈ ಯಾತ್ರಾ ಸ್ಥಳಗಳಿಗೆ ದೇಶ-ವಿದೇಶಗಳಿಂದ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.

ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಬೆಳಿಗ್ಗೆ 7 ಗಂಟೆಗೆ ತೆರೆದರೆ, ಗಂಗೋತ್ರಿ ದೇವಾಲಯವು ಮಧ್ಯಾಹ್ನ 12.20 ತೆರೆಯುತ್ತದೆ. ಮೇ 12 ರಂದು ಬೆಳಗ್ಗೆ 6 ಗಂಟೆಗೆ ಉತ್ತರಾಖಂಡದ ಚಾರ್​ಧಾಮ್ ಯಾತ್ರೆಯ ಭಾಗವಾಗಿರುವ ಬದರಿನಾಥ್ ಅನ್ನು ತೆರೆಯಲಾಗುತ್ತದೆ.

ಚಾರ್ ಧಾಮ್‌ ಯಾತ್ರೆಗಳೆಂದರೆ, ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಹಾಗೂ ಬದರಿನಾಥ್. ಈ ಪವಿತ್ರ ಸ್ಥಳಗಳ ಬಾಗಿಲುಗಳು ಅಕ್ಷಯ ತೃತೀಯದ ಶುಭ ಸಮಯದಲ್ಲಿ ತೆರೆಯಲ್ಪಡುತ್ತೆ. ಏಪ್ರಿಲ್​ 15ರಿಂದ ಪ್ರಾರಂಭವಾದ ಆನ್​ಲೈನ್ ನೋಂದಣಿ ಈಗ ಜೂನ್ ತಿಂಗಳವರೆಗೆ ಲಭ್ಯವಿದೆ. ಏಕೆಂದರೆ ಮೇ ತಿಂಗಳ ಆರಂಭದ ವೇಳೆಗೆ ಆನ್​ಲೈನ್​ ನೋಂದಣಿ ಸಂಖ್ಯೆ 21 ಲಕ್ಷ ದಾಟಿದೆ.

ಮತ್ತಷ್ಟು ಓದಿ: ಪ್ರತಿ ವರ್ಷವೂ ಜಗನ್ನಾಥನಿಗೆ ನವ ರಥ ನಿರ್ಮಿಸಲಾಗುತ್ತದೆ -ಹಳೆಯದ್ದನ್ನು ವಿಸರ್ಜಿಸ ಬೇಕಾಗುತ್ತದೆ! ಹಾಗಾದರೆ ಆ ಮಹಾ ರಥವನ್ನು ಕೆತ್ತುವವರು ಯಾರು? ಪಾಲನೆ ಹೇಗೆ?

ಈ ಕಾರಣಕ್ಕಾಗಿ ಮೇ ತಿಂಗಳಲ್ಲಿ ಬುಕಿಂಗ್ ಫುಲ್ ಆಗಿವೆ. ಈ ಬಾರಿ 7 ಲಕ್ಷ 41 ಸಾವಿರಕ್ಕೂ ಹೆಚ್ಚು ಮಂದಿ ಕೇದಾರನಾಥ ಯಾತ್ರೆಗೆ ಹೆಸರು ನೋಂದಾಯಿಸಿದ್ದಾರೆ. ಬದರಿನಾಥ್​ 7 ಲಕ್ಷ 38 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿಗೆ ಕ್ರಮವಾಗಿ 38 ಲಕ್ಷ ಮತ್ತು 33 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ.

ನೋಂದಣಿ ಇಲ್ಲದೆ ಯಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಹರಿದ್ವಾರ ಮತ್ತು ಋಷಿಕೇಶದಲ್ಲಿ ಮೇ8ರಿಂದ ಆಫ್​ಲೈನ್​ ನೋಂದಣಿ ಸೌಲಭ್ಯ ಆರಂಭವಾಗಿದೆ. ಆಫ್​ಲೈನ್​ ನೋಂದಣಿಯೂ ಯಾತ್ರಿಕರ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ಕೇದಾರನಾಥ ಪ್ರಾಮುಖ್ಯತೆ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಕೇದಾರನಾಥ ಶಿವನ ಪವಿತ್ರ ಸ್ಥಳವಾಗಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಗಟ್ಟಲೆ ಜನರು ದರ್ಶನಕ್ಕೆ ಬರುತ್ತಾರೆ. ಶಿವನ ಹನ್ನೆರಡು ಜ್ಯೋತಿರ್ಲಿಂಗಗಳು ಮತ್ತು ಪಂಚ ಕೇದಾರಗಳಲ್ಲಿ ಕೇದಾರನಾಥವನ್ನು ಸಹ ಪರಿಗಣಿಸಲಾಗಿದೆ. ಕೇದಾರನಾಥ ದೇವಾಲಯದಲ್ಲಿ ಸ್ಥಾಪಿಸಲಾದ ಶಿವಲಿಂಗವು ಸ್ವಯಂಪೂರ್ಣವಾಗಿದೆ. ಇದರಿಂದಾಗಿ ದೇವಾಲಯದ ಮಹತ್ವ ಹೆಚ್ಚುತ್ತಿದೆ.

ಬದರಿನಾಥ ಪ್ರಾಮುಖ್ಯತೆ ಬದರಿನಾಥವನ್ನು ಚಾರ್​ ಧಾಮ್​ಗಳಲ್ಲಿ ಪ್ರಮುಖ ಧಾಮಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಅಲಕನಂದಾ ನದಿಯ ದಡದಲ್ಲಿದೆ. ಇದು ಮುಖ್ಯವಾಗಿ ವಿಷ್ಣುವಿನ ದೇವಾಲಯವಾಗಿದೆ. ಇಲ್ಲಿ ನರ ಮತ್ತು ನಾರಾಯಣನನ್ನು ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:54 am, Fri, 10 May 24

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ