Ladakh standoff: ಭಾರತ-ಚೀನಾ ಶೀತಲ ಸಮರ; ಪ್ಯಾಂಗಾಂಗ್ ಸರೋವರದಿಂದ ಮರಳುತ್ತಿರುವ ಯುದ್ಧ ಟ್ಯಾಂಕ್ಗಳು
Ladakh standoff: ಪ್ರತಿ ಯುದ್ಧ ಟ್ಯಾಂಕ್ಗಳನ್ನೂ ಕಣ್ಗಾವಲಲ್ಲಿ ರವಾನಿಸಲಾಗುತ್ತಿದೆ. ಇದು ಪಾಂಗೊಂಗ್ ಸರೋವರ ಭಾಗದಲ್ಲಿ ಶಾಂತಿ ಸ್ಥಾಪಿಸುವ ಮೊದಲ ಹೆಜ್ಜೆ ಎಂದೇ ಹೇಳಲಾಗುತ್ತಿದ್ದು, ಹಲವು ಹಂತಗಳಲ್ಲಿ ನಿಧಾನವಾಗಿ ಯುದ್ಧ ಟ್ಯಾಂಕ್ಗಳು ಸ್ವಸ್ಥಾನಕ್ಕೆ ಮರಳಲಿವೆ ಎಂದು ಮೂಲಗಳು ತಿಳಿಸಿವೆ.
ಲಡಾಕ್: ಪಾಂಗಾಂಗ್ ತ್ಸೋ ಸರೋವರದ ಉತ್ತರ ದಡದಿಂದ ಸೇನೆ ಹಿಂತೆಗೆದುಕೊಳ್ಳಲು ಎರಡೂ ದೇಶಗಳು ಒಪ್ಪಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಳಗ್ಗೆಯಷ್ಟೇ ರಾಜ್ಯಸಭೆಯಲ್ಲಿ ಘೋಷಿಸಿದ್ದರು. ಈ ಬೆನ್ನಲ್ಲೇ ಭಾರತ ಮತ್ತು ಚೀನಾದ ಯುದ್ಧ ಟ್ಯಾಂಕ್ಗಳು ಪಾಂಗಾಂಗ್ ಸರೋವರದ ದಡದಿಂದ ಹಿಂದೆ ಸರಿಯುತ್ತಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ. ಸದ್ಯ ಕೇವಲ ಯುದ್ಧ ಟ್ಯಾಂಕ್ಗಳನ್ನಷ್ಟೇ ಹಿಂದೆ ಕರೆಸಿಕೊಳ್ಳಲಾಗುತ್ತಿದ್ದು, ಮುಂಜಾಗ್ರತೆ ಮತ್ತು ಎಚ್ಚರಿಕೆಯ ದೃಷ್ಟಿಯಿಂದ ಸೇನಾಪಡೆಗಳು ಮುಂದಿನ ಹಂತಗಳಲ್ಲಿ ಮರಳಲಿವೆ ಎಂದು ಸುದ್ದಿಮೂಲಗಳು ತಿಳಿಸಿವೆ. ಜತೆಗೆ, ಈವರೆಗೆ ಸರೋವರದ ಇಕ್ಕೆಲಗಳಲ್ಲಿ ಎರಡೂ ಸೇನೆಗಳು ನಿರ್ಮಿಸಿದ್ದ ಕಟ್ಟಡಗಳನ್ನು ತೆಗೆದು ಹಾಕಲಿವೆ.
ಪೂರ್ವ ಲಡಾಕ್ನ ಪಾಂಗಾಂಗ್ ತ್ಸೋ ಸರೋವರದ ಪೂರ್ವ, ಉತ್ತರ ಮತ್ತು ದಕ್ಷಿಣ ದಡದಿಂದ ನಿಧಾನವಾಗಿ ಒಂದೊಂದೇ ಯುದ್ಧಟ್ಯಾಂಕ್ಗಳು ತಮ್ಮ ದೇಶದ ಗಡಿಯತ್ತ ತೆರಳುತ್ತಿವೆ. ಪ್ರತಿ ಯುದ್ಧ ಟ್ಯಾಂಕ್ಗಳನ್ನೂ ಕಣ್ಗಾವಲಲ್ಲಿ ರವಾನಿಸಲಾಗುತ್ತಿದೆ. ಇದು ಪಾಂಗೊಂಗ್ ಸರೋವರ ಭಾಗದಲ್ಲಿ ಶಾಂತಿ ಸ್ಥಾಪಿಸುವ ಮೊದಲ ಹೆಜ್ಜೆ ಎಂದೇ ಹೇಳಲಾಗುತ್ತಿದ್ದು, ಹಲವು ಹಂತಗಳಲ್ಲಿ ನಿಧಾನವಾಗಿ ಯುದ್ಧ ಟ್ಯಾಂಕ್ಗಳು ಸ್ವಸ್ಥಾನಕ್ಕೆ ಮರಳಲಿವೆ ಎಂದು ಮೂಲಗಳು ತಿಳಿಸಿವೆ.
2020ರ ಜೂನ್ 15ರಂದು ಎರಡೂ ದೇಶಗಳ ಸೈನಿಕರ ನಡುವೆ ನಡೆದ ಕಾದಾಟದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಅನಂತರ ಪಾಂಗಾಂಗ್ ಸರೋವರದ ದಡಗಳಲ್ಲಿ ಭಾರತ-ಚೀನಾ ಎರಡೂ ದೇಶಗಳು ಯುದ್ಧಟ್ಯಾಂಕ್ ಸೇರಿ ಸೈನಿಕರ ಜಮಾವಣೆ ಮಾಡಿದ್ದವು. ಹೀಗಾಗಿ ಪಾಂಗಾಂಗ್ ಸರೋವರದ ಸುತ್ತಮುತ್ತ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು.
ಒಪ್ಪಂದದ ಪ್ರಮುಖ ಅಂಶಗಳು
1). ಎರಡೂ ದೇಶಗಳು ಶಾಂತಿ ಕಾಪಾಡಲು ಸೇನೆಯನ್ನು ಹಿಂಪಡೆಯಬೇಕು.
2). ಎರಡೂ ದೇಶಗಳು ಪರಸ್ಪರ ಒಪ್ಪಂದಗಳನ್ನು ಗೌರವಿಸಬೇಕು.
3). ಒಪ್ಪಂದದ ಎಲ್ಲ ನಿಯಮಗಳನ್ನೂ ಎರಡೂ ದೇಶಗಳು ಚಾಚೂತಪ್ಪದೇ ಪಾಲಿಸಬೇಕು.
ಇದನ್ನೂ ಓದಿ: India China Border Conflict | ಗಡಿ ಸಂಘರ್ಷ ಕೊನೆ, 9 ಹಂತದ ಮಾತುಕತೆ ಬಳಿಕ ಗಡಿಯಿಂದ ಕಾಲ್ತೆಗೆಯಲು ನಿರ್ಧರಿಸಿದ ಚೀನಾ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದಗಳನ್ನು ಹೊಂದಲು ಭಾರತ ಸಿದ್ಧವಾಗಿದೆ. ಈಮೂಲಕ ಶಾಂತಿ ಕಾಪಾಡಲು ಭಾರತ ಬದ್ಧವಾಗಿದೆ. ಗಡಿ ವಿವಾದವನ್ನ ಮಾತುಕತೆ ಮೂಲಕ ಮಾತ್ರ ಬಗೆಹರಿಸಿಕೊಳ್ಳಬಹುದು. ಗಡಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದರಿಂದ ಬಾಂಧವ್ಯ ವೃದ್ದಿಯಾಗಲಿದೆ ಎಂದು ಅವರು ಚೀನಾದ ಆಕ್ರಮಣಶೀಲ ನಡೆಗಳ ಕುರಿತು ದೇಶದ ನಿಲುವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಳಗ್ಗೆಯಷ್ಟೇ ರಾಜ್ಯಸಭೆಯಲ್ಲಿ ತಿಳಿಸಿದ್ದರು.
ಚೀನಾದ ಸೇನೆ ಫಿಂಗರ್ 8 ರವರೆಗೆ ಹಿಂದೆ ಸರಿದ ನಂತರ ಭಾರತದ ಸೇನೆ ಫಿಂಗರ್ 3ರ ಧನಸಿಂಗ್ ಪೋಸ್ಟ್ಗೆ ಹಿಂದಿರುಗಲಿದೆ. ಪಾಂಗಾಂಗ್ ತ್ಸೋ ಸರೋವರದ ಉತ್ತರ ಭಾಗದ ಫಿಂಗರ್ ವಲಯದಲ್ಲಿ ಭಾರತ-ಚೀನಾ ಪೆಟ್ರೋಲಿಂಗ್ ಸ್ಥಗಿತವಾಗಲಿದೆ. ಫಿಂಗರ್ 8ರ ವಿಷಯಗಳ ಬಗ್ಗೆ ಚೀನಾದ ಜೊತೆಗೆ ಮಾತುಕತೆ ಬಾಕಿ ಇದ್ದು, ಒಪ್ಪಂದದ ಪ್ರಕಾರ 48 ಗಂಟೆಯಲ್ಲಿ ಚೀನಾ ಸೇನೆ ಹಿಂತೆಗೆದುಕೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದರು.