ಉದ್ಧಟ ರಾಜಣ್ಣ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಡಿಕೆ ಶಿವಕುಮಾರ್ಗೆ ಸೂಚನೆ ನೀಡಿದ ಕಾಂಗ್ರೆಸ್ ಹೈಕಮಾಂಡ್
ದೇವೇಗೌಡರ ಬಗ್ಗೆ ಕೆ.ಎನ್.ರಾಜಣ್ಣ ಆಡಿರುವ ಮಾತು ಸರಿಯಲ್ಲ. ಕೆ.ಎನ್.ರಾಜಣ್ಣ ಹೇಳಿಕೆಯನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತೆ ಎಂದು ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ದೆಹಲಿ: ಹೆಚ್.ಡಿ.ದೇವೇಗೌಡರ(HD Deve Gowda( ಬಗ್ಗೆ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಕೆ.ಎನ್.ರಾಜಣ್ಣ(KN Rajanna) ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ(DK Shivakumar) ಕಾಂಗ್ರೆಸ್ ವರಿಷ್ಠರು(Congress high command) ಸೂಚನೆ ನೀಡಿದ್ದಾರೆ. ಫೋನ್ ಮಾಡಿ ಡಿಕೆಶಿಗೆ ಸೂಚನೆ ನೀಡಿದ್ದಾರಂತೆ. ಡಿಕೆ ಶಿವಕುಮಾರ್ರಿಗೆ ಕಾಂಗ್ರೆಸ್ ಹೈಕಮಾಂಡ್ ಕರೆ ಮಾಡಿ, ಕೂಡಲೇ ಕೆ.ಎನ್. ರಾಜಣ್ಣ ತಮ್ಮ ಹೇಳಿಕೆ ಹಿಂಪಡೆಯಬೇಕು. ಹೇಳಿಕೆ ಹಿಂಪಡೆಯುವಂತೆ ರಾಜಣ್ಣಗೆ ಸೂಚನೆ ನೀಡಿ. ರಾಜಣ್ಣ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದ್ರೆ ಈಗಾಗಲೇ ಕೆ.ಎನ್.ರಾಜಣ್ಣ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಇಂತಹ ಹೇಳಿಕೆಗೆ ಅವಕಾಶ ನೀಡಲ್ಲ, ಸಮಾಜ ಶಾಂತವಾಗಿರಬೇಕು ದೇವೇಗೌಡರ ಬಗ್ಗೆ ಕೆ.ಎನ್.ರಾಜಣ್ಣ ಆಡಿರುವ ಮಾತು ಸರಿಯಲ್ಲ. ಕೆ.ಎನ್.ರಾಜಣ್ಣ ಹೇಳಿಕೆಯನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತೆ ಎಂದು ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಾಜಿ ಪ್ರಧಾನಿ ಆರೋಗ್ಯದ ಬಗ್ಗೆ ಹೀಗೆ ಮಾತಾಡುವುದು ಸರಿಯಲ್ಲ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಕ್ಷಮೆಯಾಚಿಸುವಂತೆ ಸೂಚಿಸುವೆ. ಇಂತಹ ಹೇಳಿಕೆಗೆ ಅವಕಾಶ ನೀಡಲ್ಲ, ಸಮಾಜ ಶಾಂತವಾಗಿರಬೇಕು. ಹೆಚ್.ಡಿ.ದೇವೇಗೌಡರಿಗೆ ಭಗವಂತ ಉತ್ತಮ ಆರೋಗ್ಯ ಕರುಣಿಸಲಿ ಎಂದರು. ಇದನ್ನೂ ಓದಿ: ನಭಾ ನಟೇಶ್ ಕೈಯಲ್ಲಿಲ್ಲ ಯಾವುದೇ ಹೊಸ ಸಿನಿಮಾ; ಡಿಮ್ಯಾಂಡ್ ಬಿಡದಿದ್ದಕ್ಕೆ ಸಿಗುತ್ತಿಲ್ಲ ಆಫರ್?
ಹೆಚ್.ಡಿ.ದೇವೇಗೌಡರ ಬಗ್ಗೆ ಹೇಳಿಕೆಗೆ ಕೆ.ಎನ್.ರಾಜಣ್ಣ ವಿಷಾದ ಇನ್ನು ಹೆಚ್.ಡಿ.ದೇವೇಗೌಡರ ಬಗ್ಗೆ ಹೇಳಿಕೆಗೆ ಕೆ.ಎನ್.ರಾಜಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ. ದೇವೆಗೌಡರನ್ನ ಭೇಟಿಯಾಗಿ ವಿಚಾರವನ್ನ ಅರ್ಥೈಸುತ್ತೆನೆ. ಅವರ ಕುಟುಂಬಕ್ಕೆ ಅಭಿಮಾನಿಗಳಿಗೆ ಬೇಸರವಾಗಿದ್ದರೇ ವಿಷಾದ ವ್ಯಕ್ತಪಡಿಸುತ್ತೇನೆ. ಸಿದ್ದರಾಮಯ್ಯ 75 ನೇ ಹುಟ್ಟು ಹಬ್ಬಕ್ಕೆ ತಯಾರಿ ಮಾಡಲಾಗುತ್ತಿದೆ. ಅದನ್ನ ಹಿನ್ನಡೆ ಮಾಡಬೇಕೆಂದು ಹೀಗೆ ಮಾಡಲಾಗಿದೆ. ದೇವೇಗೌಡರ ಮನಸ್ಸಿಗೆ ಬೇಸರವಾಗಿದ್ದರೇ ವಿಷಾದ ವ್ಯಕ್ತಪಡಿಸುತ್ತೇನೆ. ಇದರಲ್ಲಿ ರಾಜಕೀಯ ಪಿತೂರಿ ಮಾಡಲಾಗಿದೆ. ರಾಜಕೀಯವಾಗಿ ಮುಗಿಸಲು ಈ ರೀತಿ ಮಾಡಲಾಗಿದೆ. ಪದಬಳಕೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೇ. ತಳ ಸಮುದಾಯವನ್ನ ರಾಜಕೀಯವಾಗಿ ಮುಗಿಸಲು ಈ ರೀತಿ ಮಾಡಲಾಗಿದೆ ಎಂದರು.
ಹೆಚ್ಡಿಡಿಯವರನ್ನು ನಾಲ್ಕು ಜನರು ಹೊತ್ತೊಯ್ಯುವ ಕಾಲ ಇಷ್ಟರಲ್ಲೇ ಬರುತ್ತದೆ ನಿನ್ನೆ ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ನಡೆದ ತಾಲೂಕು ಪಂಚಾಯತ್‌ನ ಡಿ ಗ್ರೂಪ್ ನೌಕರನೊಬ್ಬನ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆ.ಎನ್.ರಾಜಣ್ಣ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದರು. ಅಲ್ಲದೆ 2023ರ ಚುನಾವಣೆಯೇ ತನಗೆ ಕೊನೆಯ ಚುನಾವಣೆ. ಈಗ ನನಗೆ 72 ವರ್ಷ ಆಗಿದೆ. ಮುಂದಿನ ಚುನಾವಣೆ ವೇಳೆ 77 ಆಗುತ್ತೆ. ಹೀಗಾಗಿ ಇದೇ ಕಡೇ ಚುನಾವಣೆ. ಇದರಲ್ಲಿ ಗೆದ್ದರೆ ಮಂತ್ರಿ ಆಗೇ ಆಗ್ತೀನಿ ಅಂತಿದ್ದರು. ಆಗ ಸಭಿಕಲ್ಲೊಬ್ಬ ದೇವೇಗೌಡರ ಹೆಸರು ಹೇಳುತ್ತಿದ್ದಂತೆ, ಗೌಡರು ನಡೆಯುವ ಭಂಗಿಯನ್ನು ತೋರಿಸುತ್ತಾ, ಅವರನ್ನು ನಾಲ್ಕು ಜನರು ಹೊತ್ತೊಯ್ಯುವ ಕಾಲ ಇಷ್ಟರಲ್ಲೇ ಬರುತ್ತದೆ ಎಂದಿದ್ದರು. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
Published On - 5:56 pm, Fri, 1 July 22