Corruption: ಭ್ರಷ್ಟಾಚಾರ ಗಂಭೀರ ಅಪರಾಧ, ಲಂಚ ಕೊಟ್ಟವರು ದೂರು ಹಿಂಪಡೆದರೂ ಅಪರಾಧಿಗೆ ಶಿಕ್ಷೆ ಆಗಲೇಬೇಕು; ಸುಪ್ರೀಂಕೋರ್ಟ್​

Supreme Court: ಸರ್ಕಾರಿ ನೌಕರ ಲಂಚ ಪಡೆದ ಹಣವನ್ನು ಮರಳಿಸಿದ ತಕ್ಷಣಕ್ಕೆ ಅಥವಾ ಲಂಚ ಕೊಟ್ಟವರು ದೂರು ಹಿಂಪಡೆದರೆ ಅಪರಾಧಿಗೆ ಶಿಕ್ಷೆ ಆದಂತೆ ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

Corruption: ಭ್ರಷ್ಟಾಚಾರ ಗಂಭೀರ ಅಪರಾಧ, ಲಂಚ ಕೊಟ್ಟವರು ದೂರು ಹಿಂಪಡೆದರೂ ಅಪರಾಧಿಗೆ ಶಿಕ್ಷೆ ಆಗಲೇಬೇಕು; ಸುಪ್ರೀಂಕೋರ್ಟ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 09, 2022 | 7:32 AM

ದೆಹಲಿ: ಸರ್ಕಾರಿ ನೌಕರರ ಭ್ರಷ್ಟಾಚಾರವು ಸರ್ಕಾರ ಮತ್ತು ಸಮಾಜದ ವಿರುದ್ಧ ನಡೆಸುವ ಅಪರಾಧ. ಇಂಥ ಪ್ರಕರಣಗಳನ್ನು ‘ವಿಶೇಷ ಆದ್ಯತೆಯ ಪ್ರಕರಣಗ’ಳು (Suits for Specific Performance) ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್​ ಗುರುವಾರ ಹೇಳಿತು. ಮದ್ರಾಸ್ ಹೈಕೋರ್ಟ್​ ಈ ಸಂಬಂಧ ನೀಡಿದ್ದ ಆದೇಶವೊಂದನ್ನು ನ್ಯಾಯಮೂರ್ತಿಗಳಾದ ಎಸ್​.ಎ.ನಾಜೀರ್ ಮತ್ತು ವಿ.ರಾಮಸುಬ್ರಹ್ಮಣ್ಯಂ ಅವರಿದ್ದ ನ್ಯಾಯಪೀಠವು ತಳ್ಳಿಹಾಕಿತು. ‘ಉದ್ಯೋಗಕ್ಕಾಗಿ ಕಾಸು’ ಹಗರಣಕ್ಕೆ ಸಂಬಂಧಿಸಿದಂತೆ ಎರಡು ರಾಜಕೀಯ ಪಕ್ಷಗಳು ಒಪ್ಪಂದ ಮಾಡಿಕೊಂಡ ತಕ್ಷಣಕ್ಕೆ ಪ್ರಕರಣವನ್ನು ವಜಾ ಮಾಡಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್​​ ಅಭಿಪ್ರಾಯಪಟ್ಟಿತು.

‘ಸರ್ಕಾರಿ ನೌಕರರ ಭ್ರಷ್ಟಾಚಾರವು ಸರ್ಕಾರ ಮತ್ತು ಸಮಾಜದ ವಿರುದ್ಧದ ದ್ರೋಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಧಿಕಾರ ದುರುಪಯೋಗ ಮತ್ತು ಭ್ರಷ್ಟ ವಿಧಾನಗಳನ್ನು ಅನುಸರಿಸುವ ಪ್ರಕರಣಗಳನ್ನು ‘ವಿಶೇಷ ಆದ್ಯತೆಯ ಪ್ರಕರಣ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಲಂಚ ಪಡೆದ ಹಣವನ್ನು ಮರಳಿಸಿದ ತಕ್ಷಣಕ್ಕೆ, ಲಂಚ ಕೊಟ್ಟವರು ದೂರು ಹಿಂಪಡೆದರೆ ಅಪರಾಧಿಗೆ ಶಿಕ್ಷೆ ಆದಂತೆ ಆಗುವುದಿಲ್ಲ’ ಎಂದು ನ್ಯಾಯಾಲಯವು ಚಾಟಿ ಬೀಸಿದೆ. ‘ಆರೋಪಿ ಮತ್ತು ಆಪಾದಿತರು ಒಪ್ಪಂದ ಮಾಡಿಕೊಂಡರು ಎಂದಾಕ್ಷಣ ಪ್ರಕರಣವನ್ನು ರದ್ದುಪಡಿಸಿದ ಮದ್ರಾಸ್ ಹೈಕೋರ್ಟ್​ನ ತೀರ್ಪನ್ನು ಇದೇ ಕಾರಣಕ್ಕೆ ವಜಾ ಮಾಡುತ್ತಿದದೇವೆ. ಕ್ರಿಮಿನಲ್ ದೂರನ್ನು ಹೀಗೆಲ್ಲಾ ಇತ್ಯರ್ಥಪಡಿಸಿಕೊಳ್ಳಲು ಆಗುವುದಿಲ್ಲ’ ಎಂದು ಸುಪ್ರೀಂಕೋರ್ಟ್​ ಕಟುವಾಗಿ ಹೇಳಿದೆ. ಈ ಮೂಲಕ ಲಂಚ ಪಡೆಯುವುದು ಕ್ರಿಮಿನಲ್ ಅಪರಾಧ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಮದ್ರಾಸ್ ಹೈಕೋರ್ಟ್​ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಬೆಂಬಲಿಸಿ ದೂರುದಾರರು ಸತ್ಯಾಪನಾ ಪ್ರಮಾಣ ಪತ್ರ (ಅಫಿಡವಿಟ್) ಸಲ್ಲಿಸಿದ್ದರು. ‘ನಮ್ಮಿಬ್ಬರ ನಡುವೆ ಹಣಕಾಸಿನ ವಿವಾದವಿತ್ತು. ಈಗ ನಾವು ನ್ಯಾಯಾಲಯದ ಹೊರಗೆ ಅದನ್ನು ಇತ್ಯರ್ಥಪಡಿಸಿಕೊಂಡಿದ್ದೇವೆ. ಹೀಗಾಗಿ ಪ್ರಕರಣ ವಜಾ ಮಾಡಬೇಕು’ ಎಂದು ದೂರುದಾರರು ಕೋರಿದ್ದರು. ‘ಎರಡು ರಾಜಕೀಯ ಪಕ್ಷಗಳ ನಡುವೆ ವೈಮನಸ್ಯವಿದ್ದ ಕಾರಣ ನನ್ನ ದೂರಿಗೆ ವಿಶೇಷ ಪ್ರಾಮುಖ್ಯತೆ ಸಿಕ್ಕಿದೆ’ ಎಂದು ಹೇಳಿದ್ದರು. ಉದ್ಯೋಗಕ್ಕಾಗಿ ಲಂಚ ಕೊಟ್ಟಿದ್ದ ಸಂತ್ರಸ್ತರು ಸಹ ಪ್ರತ್ಯೇಕ ಅಫಿಡವಿಟ್​ಗಳನ್ನು ಸಲ್ಲಿಸಿ, ಆರೋಪಿಗಳನ್ನು ಬೆಂಬಲಿಸಿದ್ದರು. 2014ರಲ್ಲಿ ಈ ಘಟನೆ ನಡೆದಿತ್ತು. ಅದೇ ವರ್ಷ ಆರೋಪಿಗಳು ಮತ್ತು ದೂರುದಾರರ ನಡುವೆ ಒಪ್ಪಂದವೂ ಆಗಿತ್ತು. ಹೀಗಾಗಿ ಪ್ರಕರಣ ಕೈಬಿಡಬೇಕು ಎಂದು ಸರ್ಕಾರಿ ವಕೀಲರು ಕೋರಿದ್ದರು. ಅಫಿಡವಿಟ್​ಗಳನ್ನು ಪರಿಗಣಿಸಿ, ಸರ್ಕಾರಿ ವಕೀಲರ ವಾದ ಪುರಸ್ಕರಿಸಿದ ಮದ್ರಾಸ್ ಹೈಕೋರ್ಟ್ ಕ್ರಿಮಿನಲ್ ದೂರು ವಜಾ ಮಾಡಿತ್ತು.

ಸುಪ್ರೀಂಕೋರ್ಟ್​ನಲ್ಲಿ ಈ ಪ್ರಕರಣವು ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳು, ‘ಸರ್ಕಾರಿ ನೌಕರರ ಸೇವೆಯ ಗುಣಮಟ್ಟ ಕುಸಿಯಲು ನೇಮಕಾತಿ ಅಕ್ರಮಗಳು ಮುಖ್ಯ ಕಾರಣ’ ಎಂದು ನೇರವಾಗಿ ಹೇಳಿದರು. ‘ಇಂಥವರು ಸೇವೆ ಸಲ್ಲಿಸುವಾಗ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಾರ್ವಜನಿಕರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಇಂಥವರು ಸಲ್ಲಿಸುವ ಸೇವೆಯಲ್ಲಿ ಹತ್ತಾರು ಲೋಪದೋಷಗಳು ಕಂಡು ಬರುವುದು ಸಹ ಸಹಜವೇ ಆಗಿದೆ. ಹೀಗಾಗಿ ಗಂಭೀರ ಸ್ವರೂಪದ ಈ ಪ್ರಕರಣವನ್ನು ವಜಾ ಮಾಡಲು ಆಗುವುದಿಲ್ಲ’ ಎಂದು ಹೇಳಿದರು.

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ