ದೆಹಲಿ: ಭಾನುವಾರದಂದು ಭಾರತವು ತನ್ನ ಕೊವಿಡ್-19 ವ್ಯಾಕ್ಸಿನೇಷನ್ ಡ್ರೈವ್‌ನ (Covid vaccination drive) ಒಂದು ವರ್ಷವನ್ನು ಪೂರ್ಣಗೊಳಿಸಿದ್ದು ದೇಶದ 10 ವಯಸ್ಕರ ಪೈಕಿ ಏಳು ಮಂದಿ ಎರಡು ಲಸಿಕೆಗಳನ್ನು ಸ್ವೀಕರಿಸಿದ್ದಾರೆ. ಜನವರಿ 16, 2021 ರಂದು ಪ್ರಾರಂಭವಾದ ಡ್ರೈವ್ ಅನ್ನು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಎಂದು ಕರೆಯಲಾಗುತ್ತದೆ. ಭಾನುವಾರ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದ ಲಸಿಕೆ ಕಾರ್ಯಕ್ರಮವು ಕೊವಿಡ್ -19 ವಿರುದ್ಧದ ಯುದ್ಧಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದೆ ಎಂದು ಹೇಳಿದರು. ಈ ಅಭಿಯಾನದಲ್ಲಿ ಮುಂಚೂಣಿ ಕಾರ್ಯಕರ್ತರ ಪಾತ್ರವನ್ನು ಅವರು ಶ್ಲಾಘಿಸಿದರು. ಎಲ್ಲಾ ಕೊವಿಡ್-19 ಪ್ರೋಟೋಕಾಲ್‌ಗಳನ್ನು ಅನುಸರಿಸುವುದನ್ನು ಮುಂದುವರಿಸುವ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಇಂದು ನಾವು 1 ವರ್ಷದ ವ್ಯಾಕ್ಸಿನ್ ಡ್ರೈವ್ ಅನ್ನು ಆಚರಿಸುತ್ತೇವೆ. ನಾನು ಲಸಿಕೆ ಅಭಿಯಾನದೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಲಸಿಕೆ ಕಾರ್ಯಕ್ರಮವು ಕೊವಿಡ್ -19 ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದೆ. ಇದು ಜೀವಗಳು ಮತ್ತು ಹೀಗೆ ಜೀವನೋಪಾಯವನ್ನು ರಕ್ಷಿಸುತ್ತದೆ ಎಂದಿದ್ದಾರೆ.
Today we mark #1YearOfVaccineDrive.
I salute each and every individual who is associated with the vaccination drive.
Our vaccination programme has added great strength to the fight against COVID-19. It has led to saving lives and thus protecting livelihoods. https://t.co/7ch0CAarIf
— Narendra Modi (@narendramodi) January 16, 2022
ಕೊವಿಡ್-19 ಲಸಿಕೆ ಡೇಟಾ
ಒಂದು ವರ್ಷದಲ್ಲಿ ಒಟ್ಟು ಕೊವಿಡ್-19 ವ್ಯಾಕ್ಸಿನೇಷನ್ 157 ಕೋಟಿ ಗಡಿಯನ್ನು ಮುಟ್ಟಿದೆ ಎಂದು ಅಧಿಕೃತ ಡೇಟಾ ಅಂದಾಜಿಸಿದೆ. ಅರ್ಹ ವಯಸ್ಕ ಜನಸಂಖ್ಯೆಯ ಶೇ 92 ಜನರು ಲಸಿಕೆಯ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ ಮತ್ತು ಶೇ 70 ಜನರು ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ. 15-18 ವರ್ಷ ವಯಸ್ಸಿನ ಸುಮಾರು ಶೇ46 ಹದಿಹರೆಯದವರು ತಮ್ಮ ಮೊದಲ ಡೋಸ್ ಅನ್ನು ಜನವರಿ 3 ರ ನಂತರಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಸ್ವೀಕರಿಸಿದ್ದಾರೆ.
ಕೊವಿಡ್-19 ಲಸಿಕೆಯ ಮೂರನೇ ‘ಮುನ್ನೆಚ್ಚರಿಕೆ ಡೋಸ್’ಗಳನ್ನು ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಜನಸಂಖ್ಯೆಯ ದುರ್ಬಲ ವರ್ಗಗಳಿಗೆ ನೀಡಲಾಗುತ್ತಿದೆ. ಅಧಿಕೃತ ಮಾಹಿತಿಯ ಪ್ರಕಾರ 17.92 ಲಕ್ಷ ಆರೋಗ್ಯ ಕಾರ್ಯಕರ್ತರು ಮತ್ತು 14.45 ಲಕ್ಷ ಮುಂಚೂಣಿ ಕಾರ್ಯಕರ್ತರು ಮುನ್ನೆಚ್ಚರಿಕೆ ಪ್ರಮಾಣವನ್ನು ಸ್ವೀಕರಿಸಿದ್ದಾರೆ.
ಅಧಿಕೃತ ಅಂಕಿಅಂಶಗಳು
ಆಂಧ್ರ ಪ್ರದೇಶ (72%) ಮತ್ತು ಬಿಹಾರ (82%) ರಾಷ್ಟ್ರೀಯ ಸರಾಸರಿಗಿಂತ ಮೊದಲ ಡೋಸ್ ವ್ಯಾಪ್ತಿಯನ್ನು ವರದಿ ಮಾಡುವ ದೊಡ್ಡ ರಾಜ್ಯಗಳಾಗಿವೆ. ಉತ್ತರ ಪ್ರದೇಶ (57%), ಆಂಧ್ರ ಪ್ರದೇಶ (59%), ಬಿಹಾರ (62%), ಮಹಾರಾಷ್ಟ್ರ (64%), ಪಶ್ಚಿಮ ಬಂಗಾಳ (64%) ಮತ್ತು ತಮಿಳುನಾಡು (65%) ರಾಷ್ಟ್ರೀಯ ಸರಾಸರಿಗಿಂತ ಎರಡನೇ ಡೋಸ್ ವ್ಯಾಪ್ತಿಯನ್ನು ವರದಿ ಮಾಡಿದೆ. ಜಾರ್ಖಂಡ್ (ಕ್ರಮವಾಗಿ 75% ಮತ್ತು 47%) ಮತ್ತು ಪಂಜಾಬ್ (ಕ್ರಮವಾಗಿ 81% ಮತ್ತು 48%) ಮೊದಲ ಮತ್ತು ಎರಡನೇ ಡೋಸ್‌ಗಳಿಗೆ ರಾಷ್ಟ್ರೀಯ-ಸರಾಸರಿ-ವ್ಯಾಪ್ತಿಗಿಂತ ಕಡಿಮೆ ವರದಿ ಮಾಡಿದೆ. ನಾಗಾಲ್ಯಾಂಡ್ (50%), ಮಣಿಪುರ (69%), ಮೇಘಾಲಯ (61%) ಮತ್ತು ಅರುಣಾಚಲ ಪ್ರದೇಶ (85%) – ನಾಲ್ಕು ಈಶಾನ್ಯ ರಾಜ್ಯಗಳು ಕಡಿಮೆ ಮೊದಲ-ಡೋಸ್ ವ್ಯಾಪ್ತಿಯನ್ನು ವರದಿ ಮಾಡಿವೆ.
ಗುಜರಾತ್ (94%), ಮಧ್ಯಪ್ರದೇಶ (92%), ಕರ್ನಾಟಕ (86%) ಮತ್ತು ರಾಜಸ್ಥಾನ (73%) – ನಾಲ್ಕು ದೊಡ್ಡ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಅಧಿಕ ಎರಡನೇ-ಡೋಸ್ ವ್ಯಾಪ್ತಿಯನ್ನು ವರದಿ ಮಾಡುತ್ತವೆ.
ತೆಲಂಗಾಣ (94%), ಹರ್ಯಾಣ (79%), ಕೇರಳ (77%), ಅಸ್ಸಾಂ (73%), ಒಡಿಶಾ (72%) – ಐದು ಮಧ್ಯಮ ಗಾತ್ರದ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಅಧಿಕ ಎರಡನೇ-ಡೋಸ್ ವ್ಯಾಪ್ತಿಯನ್ನು ವರದಿ ಮಾಡುತ್ತವೆ.
Published On - 11:36 am, Mon, 17 January 22